ಸಿನಿಮಾ: Tulu Times |ತೆಲುಗು ನಟಿ ಸಮಂತಾ ರುತ್ ಪ್ರಭು ಇಂದು ನಿರ್ದೇಶಕ ರಾಜ್ ನಿಡಿಮೋರು ಜೊತೆ ಈಶಾ ಯೋಗಕೇಂದ್ರದ ಭೈರವಿ ದೇವಸ್ಥಾನದಲ್ಲಿ ಆಪ್ತರು ಹಾಗೂ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ಕೆಲ ತಿಂಗಳಿನಿಂದ ಇಬ್ಬರೂ ಜೊತೆ ಜೊತೆಯಾಗಿ ಓಡಾಡುತ್ತಿದ್ದರು. ಇಬ್ಬರಿಗೂ ಇದು 2ನೇ ವಿವಾಹ. ಇತ್ತೀಚೆಗೆ ನಟಿ ಸಮಂತಾ, ರಾಜ್ ನಿಡಿಮೋರು ಅವರನ್ನು ಅಪ್ಪಿಕೊಂಡಿರುವ ಪೋಟೋ ಇನ್ಸಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.ಅದರಂತೆ ಇಂದು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡಿಮೋರು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಶ್ವ ಏಡ್ಸ್ ದಿನ ಡಿಸೆಂಬರ್ 0 1 : ಸಮುದಾಯಗಳೇ ಮುನ್ನಡೆಸಲಿ…!
ಮದುವೆ ನಡೆದದ್ದು ಎಲ್ಲಿ..?
ತಮಿಳಿನಾಡಿನ ಕೊಯಮತ್ತೂರಿನ ಈಶಾ ಯೋಗ ಕೇಂದ್ರದ ಒಳಗಿನ ಲಿಂಗ್ ಭೈರವಿ ದೇವಸ್ಥಾನದಲ್ಲಿ ಮದುವೆ ನಡೆದಿದ್ದು, ಕೇವಲ 30 ಅತಿಥಿಗಳು ಮಾತ್ರ ವಿವಾಹ ಆಚರಣೆಗಳಲ್ಲಿ ಭಾಗಿಯಾಗಿದ್ದರು. ಸಮಂತಾ ಸಾಂಪ್ರದಾಯಿಕ ಕೆಂಪು ಸೀರೆಯನ್ನು ಧರಿಸಿದ್ದರು. ನಟಿ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹಾಗೂ ರಾಜ್ ನಿಡಿಮೋರು ಜೊತೆಗಿನ ಮದುವೆ ಪೋಟೋಗಳನ್ನು ಹಾಕಿದ್ದಾರೆ. ಬಹಳಷ್ಟು ಮಂದಿ ಅಭಿಮಾನಿಗಳು ನಟಿ ಸಮಂತಾಗೆ ಹೊಸ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ.
ರಾಜ್ ನಿಡಿಮೋರು ಮತ್ತು ಶ್ಯಾಮಲಿ ದೇ 2022 ರಲ್ಲಿ ಇಬ್ಬರೂ ತಮ್ಮ ವಿಚ್ಛೇದನವನ್ನು ಪಡೆದಿದ್ದರು. ನಂತರ ಸಮಂತಾ ಮತ್ತು ರಾಜ್ ನಿಡಿಮೋರು ಅವರ ನಡುವಿನ ಸಂಬಂಧವು 2024 ರ ಆರಂಭದಲ್ಲಿ ಸಾರ್ವಜನಿಕವಾಗಿ ಬಹಿರಂಗವಾಯಿತು. ಇನ್ನು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ದೇ, ಇನ್‌ಸ್ಟಾಗ್ರಾಮ್‌ನಲ್ಲಿ “ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ” ಎಂದು ಬರೆದಿರುವ ನಿಗೂಢ ಪೋಸ್ಟ್ ಮಾಡಿದ್ದಾರೆ. ಅದು ಸಾರ್ವಜನಿಕ ಗಮನವನ್ನು ಸೆಳೆಯಿತು. ಸಮಂತಾ ಮತ್ತು ರಾಜ್ ನಿಡಿಮೋರು ಅವರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ನಟಿ ಸಮಂತ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ನಾಲ್ಕು ವರ್ಷಗಳ ನಂತರ ದಂಪತಿಗಳು ಡಿವೋರ್ಸ್ ಪಡೆದರು. ನಂತರ ನಾಗಚೈತನ್ಯ ನಟಿ ಸೋಭಿತಾ ಧುಲಿಪಾಲ ಅವರನ್ನು ವಿವಾಹವಾದರು.
actress-samantha-married-director-raj-nidimoru-today-wedding-at-bhairavi-temple-at-isha-yoga-center- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











