ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಏರ್‌ಟೆಲ್‌ನಿಂದ ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್‌..!

ಕರ್ನಾಟಕ: Tulu Times |ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಫರ್ ನೀಡಿದೆ. ಇದರಿಂದ ಏರ್‌ಟೆಲ್‌ ತನ್ನಹತ್ತಿರವಾಗಲು ಹೊರಟಿದೆ.

ಹಲವರಿಗೆ ಸೆಕೆಂಡರಿ ಸಿಮ್ ಆಕ್ಟಿವ್ ಮಾಡಿಟ್ಟುಕೊಳ್ಳಲು ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದೊಡ್ಡ ಹೊರೆಯಾಗಿದೆ. ಈ ಸಮಸ್ಯೆಯನ್ನು ಕೊನೆಗೊಳಿಸಲು ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಕೈಗೆಟುಕುವ ಪ್ಲಾನ್‌ಗಳನ್ನು ನೀಡುತ್ತಿದೆ. ಸೆಕೆಂಡರಿ ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಲು ಈ ಪ್ಲಾನ್ ಜೇಬಿಗೆ ಹಿತಕರವಾಗಿಲಿದೆ.

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಎರಡು ಹೊಸ ಬಜೆಟ್ ಸ್ನೇಹಿ ವಾರ್ಷಿಕ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಸೆಕೆಂಡರಿ ಸಿಮ್ ಅನ್ನು ವರ್ಷಪೂರ್ತಿ ಸಕ್ರಿಯವಾಗಿಡಲು ಬಯಸುವವರಿಗೆ ಉತ್ತಮವಾಗಿದ್ದು, ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳನ್ನು ನೀಡುತ್ತವೆ. ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಯೋಜನೆಗಳನ್ನು ನೀಡಲು ಸೂಚಿಸಲಾಗಿದೆ. ಅದರಂತೆ ಏರ್‌ಟೆಲ್ ಎರಡು ಪ್ರಮುಖ ಯೋಜನೆಗಳನ್ನು ಬಿಡುಗಡೆಗೊಳಿಸಿದೆ.  * ಇನ್‌ಕಮಿಂಗ್ ಮತ್ತು ಔಟ್ ಗೋಯಿಂಗ್ ಕಾಲ್‌ಗಳಿಗೆ ಮಾತ್ರ ಸಿಮ್ ಬಳಸುವ ಗ್ರಾಹಕರಿಕೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ,  ಹೆಚ್ಚು ಡೇಟಾ ಬಳಸದ ಗ್ರಾಹಕರು, ಒಮ್ಮೆ ರೀಚಾರ್ಜ್ ಮಾಡಿಸಿದ್ರೆ ಒಂದು ವರ್ಷ ಚಿಂತೆ ಇರಲ್ಲ,  ಏರ್‌ಟೆಲ್ ರೂ 1849 ರೀಚಾರ್ಜ್ ಪ್ಲಾನ್.

ಇದು ಅತ್ಯಂತ ಕಡಿಮೆ ಬೆಲೆಯ ವರ್ಷದ ಪ್ಲಾನ್ ಆಗಿದೆ. ಈ ಪ್ಲಾನ್ ಯಾವೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಮಾಹಿತಿ: ವ್ಯಾಲಿಡಿಟಿ: 365 ದಿನ (1 ವರ್ಷ), ಕರೆ: ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟಿಟೆಡ್ ಕಾಲ್ ಮಾಡಬಹುದು. ರೋಮಿಂಗ್ ಶುಲ್ಕಗಳಿಲ್ಲ. SMS: ಒಟ್ಟು 3,600 ಉಚಿತ SMS. ಹೆಚ್ಚುವರಿ ಆಫರ್: ಉಚಿತ ಹಲೋ ಟ್ಯೂನ್ಸ್, ಈ ಯೋಜನೆಯಲ್ಲಿ ಯಾವುದೇ ‘ಡೇಟಾ’ ಸೇರಿಸಲಾಗಿಲ್ಲ. ನಿಮಗೆ ಇಂಟರ್ನೆಟ್ ಸೇವೆ ಅಗತ್ಯವಿದ್ದರೆ, ನೀವು ಪ್ರತ್ಯೇಕ ಡೇಟಾ ಆಡ್-ಆನ್ ಅನ್ನು ಖರೀದಿಸಬಹುದು. ಈ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ. ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಸ್ವಲ್ಪ ಡೇಟಾ ಬೇಕು ಎಂದು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲವರು ವಾಟ್ಸಪ್‌ ಮಾತ್ರ ಬಳಕೆ ಮಾಡುತ್ತಿರುತ್ತಾರೆ. ಈ ವರ್ಗದ ಬಳಕೆದಾರರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಅಕ್ಟೋಬರ್ 2025 ರ ವರದಿಯ ಪ್ರಕಾರ, ಭಾರತದ ದೂರಸಂಪರ್ಕ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಭಾರತದಲ್ಲಿ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ 123.1 ಕೋಟಿ ತಲುಪಿದೆ. ಇವರಲ್ಲಿ 1.184 ಬಿಲಿಯನ್ ಜನರು ಮೊಬೈಲ್ ಬಳಕೆದಾರರು.

New budget-friendly recharge plan from Airtel..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page