ಬೆಳ್ತಂಗಡಿ – ತುಳು ಟೈಮ್ಸ್: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ಸದಾನಂದ ಮೇಲಾಂಟ ಅವರ ನೇತೃತ್ವದಲ್ಲಿ ನಡೆದ ದೇವಸ್ಥಾನದ ಆಡಳಿತ ಮಂಡಳಿಯ ಸಭೆಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಡಿಸೆಂಬರ್ 16 ರಿಂದ ಆರಂಭವಾಗುವ ಧನು ಪೂಜೆ ಮತ್ತು ಜನವರಿ 1ರಂದು ನಡೆಯುವ ವಾರ್ಷಿಕ ಜಾತ್ರೆಯ ವಿಷಯವನ್ನು ದೀರ್ಘವಾಗಿ ಚರ್ಚಿಸಲಾಯಿತು.
ಧನು ಪೂಜೆ ಭಜನೆಯಿಂದ ಆರಂಭಿಸಿ ಬೆಳಗ್ಗಿನ ಜಾವ 5.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಮುಕ್ತಾಯ ಮಾಡಲಾಗುತ್ತದೆ. ವಾರ್ಷಿಕ ಜಾತ್ರೆ ಬೆಳಿಗ್ಗೆ ವೈದಿಕ ಕಾರ್ಯಕ್ರಮದೊಂದಿಗೆ ಆರಂಭವಾಗಿ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಮತ್ತು ರಾತ್ರಿ ರಂಗ ಪೂಜೆಯೊಂದಿಗೆ ಮುಕ್ತಾಯವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
A meeting of the management board was held at the Sri Umamaheshwara Temple in Malengallu. Dhanupuja and the annual Jathra Festival were discussed. Tulu Times
ಇದನ್ನೂ ಓದಿ: ಪುತ್ತೂರು: ಚಿಕನ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದ ಯುವಕ ನಾಪತ್ತೆ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











