ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವೈದ್ಯರಿಗೆ ರಿಯಲ್ ಟೈಮ್ ನಲ್ಲಿ ರೋಗಿಯ ತಪಾಸಣೆ ಸಾಧ್ಯ…!

ಆರೋಗ್ಯ : Tulu Times | ತಜ್ಞ ವೈದ್ಯರ ಕೊರತೆ ಇರುವ ಗ್ರಾಮೀಣ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಉಪಯೋಗಕ್ಕೆ ಬರುವ ಪ್ರಮುಖ ಅಸ್ತ್ರ ಟೆಲಿ ಐಸಿಯು. ಐಸಿಯುವಿನಲ್ಲಿ ಇರುವ ರೋಗಿಯ ಹೃದಯ ಬಡಿತ, ರಕ್ತದ ಒತ್ತಡ, ಆಕ್ಸಿಜನ್ ಮಟ್ಟ, ವೆಂಟಿಲೇಟರ್ ಡೇಟಾ, ECG/CT/MRI ವರದಿ ಇವನ್ನೆಲ್ಲಾ ರಿಯಲ್-ಟೈಮ್‌ನಲ್ಲಿ ದೂರದಲ್ಲಿರುವ ತಜ್ಞರ ತಂಡಕ್ಕೆ ಕಳುಹಿಸಲಾಗುತ್ತದೆ.

ಆರೋಗ್ಯ ಇಲಾಖೆ ಈಗಾಗಲೇ ಟೆಲಿ ಐಸಿಯು ಸೌಲಭ್ಯವನ್ನು 42 ತಾಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭಿಸಿದ್ದು, ಮುಂದಿನ ವರ್ಷದಲ್ಲಿ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಟೆಲಿಮೆಡಿಸಿನ್‌ ಸೊಸೈಟಿ ಆಫ್‌ ಇಂಡಿಯಾ ಭಾರತೀಯ ವಿಧಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 21ನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಟೆಲಿ ಐಸಿಯು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅತ್ಯುತ್ತಮ ದರ್ಜೆಯ ಕ್ಯಾಮೆರಾ ಬಳಸಲಾಗುತ್ತಿದ್ದು, ದೂರದಲ್ಲಿದ್ದುಕೊಂಡೇ ತಜ್ಞ ವೈದ್ಯರು ಹಳ್ಳಿಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರಿಗೆ ನೆರವಾಗಬಹುದು. ಎಐ ತಂತ್ರಜ್ಞಾನ ಬಳಸಿ ಈ ವರ್ಷವೇ ಟೆಲಿ ರೆಡಿಯೋಲಾಜಿ, ಆಪ್ತ ಸಮಾಲೋಚನೆ ಸೇವೆ ಮುಖಾಂತರ ರೋಗ ಪತ್ತೆ ಮಾಡುವ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆದಿದೆ, ಎಂದು ಹೇಳಿದರು. ಕರ್ನಾಟಕ ವೈದ್ಯಕೀಯ ಸೌಲಭ್ಯ ಹಾಗೂ ಆರೋಗ್ಯ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಬೇರೆ ಬೇರೆ ದೇಶಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಎಐ ಮತ್ತು ಡಿಜಿಟಲ್‌ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದೆ. ಇದರಿಂದ ಆರೋಗ್ಯ ಕ್ಷೇತ್ರ ಇನ್ನಷ್ಟು ಸದೃಢವಾಗಲಿದೆ ಎಂದು ಅಭಿಪ್ರಯಿಸಿರುತ್ತಾರೆ.

Doctors can check patients in real time – ತುಳು ಟೈಮ್ಸ್

ಇದನ್ನೂ ಓದಿ :ಕಾಪು: ಗೂಡ್ಸ್‌ ಟೆಂಪೋ ಅಪಘಾತ..ಸ್ಥಳದಲ್ಲಿಯೇ ಐವರು ಮೃತ್ಯು !

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=YidEwN1tcxy0SzfO

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page