ಉಡುಪಿ: Tulu Times |ಭಾರೀ ನಷ್ಟದ ಹಿನ್ನೆಲೆಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಉಡುಪಿ ಮತ್ತು ಹೈದರಾಬಾದ್ ನಡುವೆ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ನಾನ್-ಎಸಿ ಸ್ಲೀಪರ್ ಬಸ್ ಸೇವೆಯನ್ನು ಭಾರಿ ನಷ್ಟದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ.
10-15 ದಿನಗಳಿಂದ ಕರಾವಳಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಹೈದರಾಬಾದ್ಗೆ ಸಂಪರ್ಕಿಸುತ್ತಿದ್ದ ಈ ಬಸ್ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಸುಮಾರು ತಿಂಗಳುಗಳಿಂದಲೇ ನಷ್ಟವನ್ನು ಅನುಭವಿಸಿದ್ದರಿಂದ ಈ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಸ್ಲೀಪರ್ ಬಸ್ ಉಡುಪಿಯಿಂದ ಮಧ್ಯಾಹ್ನ 3.30ಕ್ಕೆ ಹೊರಟು, ಕುಂದಾಪುರವನ್ನು 4 ಗಂಟೆಗೆ, ಸಿದ್ದಾಪುರವನ್ನು 4.30ಕ್ಕೆ ತಲುಪಿ, ನಂತರ ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ (ರಾತ್ರಿ 8.30), ಹರಿಹರ, ಹೊಸಪೇಟೆ ಮತ್ತು ರಾಯಚೂರು ಮೂಲಕ ಸಂಚರಿಸಿ, ಮರುದಿನ ಬೆಳಿಗ್ಗೆ 9.30ಕ್ಕೆ ಹೈದರಾಬಾದ್ ತಲುಪುತ್ತಿತ್ತು.
ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಅಂತಾರಾಜ್ಯ ಬಸ್ ಅನ್ನು ನಿರ್ವಹಿಸಲು ಕೆಎಸ್ಆರ್ಟಿಸಿಗೆ ಪ್ರತಿ ಕಿಲೋಮೀಟರ್ಗೆ ಸುಮಾರು 45-49 ರೂ. ಖರ್ಚಾಗುತ್ತದೆ. ಆದರೆ ಈ ಸೇವೆಯಿಂದ ಪ್ರತಿ ಕಿಲೋಮೀಟರ್ಗೆ 30 ರೂ.ಗಳಿಗಿಂತ ಕಡಿಮೆ ಆದಾಯ ಬರುತ್ತಿತ್ತು. ಇದರಿಂದ ಪ್ರತಿ ಕಿಲೋಮೀಟರ್ಗೆ 20-25 ರೂ. ನಷ್ಟವಾಗುತ್ತಿತ್ತು. ಅಂತಾರಾಜ್ಯ ಬಸ್ಗಳಿಗೆ ಕನಿಷ್ಠ ಪ್ರತಿ ಕಿಲೋಮೀಟರ್ಗೆ 55 ರೂ. ಆದಾಯದ ಅವಶ್ಯಕತೆ ಇದೆ ಎಂದಿದ್ದಾರೆ.
ಹೋಟೆಲ್ ಕೆಲಸಗಾರರು ಮತ್ತು ದೂರ ಪ್ರಯಾಣಕ್ಕಾಗಿ ಈ ಸೇವೆಯನ್ನು ಅವಲಂಬಿಸಿದ್ದ ಕರಾವಳಿ ಜಿಲ್ಲೆಗಳ ನಿವಾಸಿಗಳು ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಸ್ ಸೇವೆಯನ್ನು ಪುರ್ನ ಆರಂಭಿಸುವಂತೆ ಸಿದ್ದಾಪುರ ಮತ್ತು ಹೊಸಂಗಡಿ ಭಾಗದ ಪ್ರಯಾಣಿಕರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ದಿಢೀರ್ ಸ್ಥಗಿತದಿಂದ ಕರಾವಳಿಯಿಂದ ಹೈದರಾಬಾದ್ಗೆ ಸಂಚರಿಸಲು ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.
ಈ ಬಗ್ಗೆ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ಉಡುಪಿಯಿಂದ ಶಿವಮೊಗ್ಗದವರೆಗೆ ಬಹುತೇಕ ಪ್ರಯಾಣಿಕರು ಇರುತ್ತಿರಲಿಲ್ಲ. ಶಿವಮೊಗ್ಗದಿಂದ ಮುಂದೆ ಕೆಲವರು ಮಾತ್ರ ಹತ್ತುತ್ತಿದ್ದರು. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಭಾರಿ ನಷ್ಟ ಉಂಟಾದ ಕಾರಣ, ಬೆಂಗಳೂರಿನ ಕೇಂದ್ರ ಕಚೇರಿಯಿಂದ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಬಸ್ ಅನ್ನು ಶಿವಮೊಗ್ಗಕ್ಕೆ ವರ್ಗಾಯಿಸಿ, ಶಿವಮೊಗ್ಗ-ಹೈದರಾಬಾದ್ ಮಾರ್ಗದಲ್ಲಿ ಓಡಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
Udupi-Hyderabad KSRTC AC sleeper bus service suspended – Letter to Minister for resumption!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











