ಸಿನಿಮಾ: Tulu Times | ಗೋವಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ದೈವವನ್ನುಅಣಕಿಸಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಇದನ್ನೂ ಓದಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ…!
ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡಿದ ವೇಳೆ ‘ಕಾಂತಾರ ಚಾಪ್ಟರ್ 1’ರ ದೃಶ್ಯವನ್ನು ನೆನಪಿಸಿಕೊಂಡ ರಣವೀರ್, ಗುಳಿಗ ದೈವದ ಸಹೋದರಿ ಚೌಂಡಿಯನ್ನು “Female Ghost” ಎಂದು ಹೇಳಿದ್ದಾರೆ. ಜೊತೆಗೆ ಕಣ್ಣುಗಳನ್ನು ತಿರುಗಿಸಿ, ನಾಲಿಗೆ ಹೊರಹಾಕಿ ವಿಚಿತ್ರವಾಗಿ ಕಿರುಚುವ ಮೂಲಕ ದೈವದ ಪಾತ್ರವನ್ನು ಅಣಕಿಸಿದ್ದಾರೆ. ತುಳುನಾಡಿನ ದೈವಾರಾಧನೆಯ ಬಗ್ಗೆ ಅವಹೇಳನಕಾರಿಯಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಆಶಿಕಾ ರಂಗನಾಥ್ ಮಾವನ ಮಗಳಿಗೆ ಪ್ರಿಯಕರನಿಂದ ಕಿರುಕುಳ.. ಯುವತಿ ಆತ್ಮಹತ್ಯೆ!
ರಣವೀರ್ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದೈವವನ್ನು ದೆವ್ವ ಎಂದು ಕರೆದಿರುವುದು ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಭೆಯಲ್ಲಿ ಕುಳಿತಿದ್ದ ರಿಷಭ್ ಶೆಟ್ಟಿ ನಗುತ್ತಲೇ ಉತ್ತರಿಸಿದರು.
ಇದನ್ನೂ ಓದಿ: ನವೆಂಬರ್ 30 ರೊಳಗಾಗಿ ಮುಕ್ತಾಯಗೊಳ್ಳಲಿದೆ ಹಣಕಾಸಿನ ನಿಯಮಗಳು….!
ನೆಟ್ಟಿಗರ ಹೇಳ್ತಿರೋದೇನು..?
ದೈವ ಮತ್ತು ದೆವ್ವದ ನಡುವಿನ ವ್ಯತ್ಯಾಸ ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಪವಿತ್ರ ದೈವಾರಾಧನೆಯನ್ನು ಹೀಗೆ ಅವಹೇಳನ ಮಾಡುವುದು ಸರಿಯಲ್ಲ, ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರಣವೀರ್ ಸಿಂಗ್ ಪ್ರಚಾರಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಪವಿತ್ರ ನಂಬಿಕೆಗಳಿಗೆ ಬೆಲೆ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ರಣವೀರ್ , ನಾನು ‘ಕಾಂತಾರ 3’ರಲ್ಲಿ ನಟಿಸಬೇಕೆಂದು ಯಾರಾದರೂ ಬಯಸುತ್ತೀರಾ? ಹಾಗಿದ್ದರೆ ಇವರಿಗೆ (ರಿಷಬ್ ಶೆಟ್ಟಿ) ಹೇಳಿ,” ಎಂದೂ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸಿಎಂ- ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ – ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ನಾಯಕರು!
Ranveer Singh mocked the god of ‘Kantara’ in front of Rishabh Shetty..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











