Karavali ಜಿಲ್ಲೆಯವರನ್ನು ಮಳೆರಾಯ ಇನ್ನೂ ಬಿಡುವಂತೆ ಕಾಣಿಸುತ್ತಿಲ್ಲ.ಈ ಭಾರಿ ಕರಾವಳೆಯ ರೈತರು ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ.ಇನ್ನೂ ಮಳೆ ಕಡಿಮೆ ಆಗ್ತಿಲ್ಲ ಕೃಷಿ ಕಸುಬು ಮುಂದಕ್ಕೋಗ್ತಿಲ್ಲ ಅನ್ನೋ ಚಿಂತೆಯಲ್ಲಿ ಕರಾವಳಿಯ ಜನರಿದ್ದಾರೆ.ನಿನ್ನೆಯಿಂದ ಮತ್ತೆ ಮಳೆ ಜೋರಾಗಿ ಸುರಿಯುತ್ತಿದೆ.ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯ ಮಳೆಯ ಮುನ್ಸೂಚನೆ ನೀಡಿದ್ದು ಅಕ್ಟೋಬರ್ 15ರವರೆಗೆ ಮಳೆ ಸುರಿಯಲಿದೆ ಎಂದು ಸೂಚನೆ ಕೊಟ್ಟಿದೆ.ಅಂದರೆ ಇನ್ನೂ ಸತತ ನಾಲ್ಕು ದಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿಯ ಜೊತೆಗೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಕರಾವಳಿಗೆ ಹೊಂದಿಕೊಂಡಿರುವ ಚಿಕ್ಕಮಗಳೂರು ಜೊತೆಗೆ ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಅದರಲ್ಲೂ ಗುಡುಗು ಸಹಿತ ಮಳೆಯಾಗುವುದರಿಂದ ಜನರಿಗೆ ಆತಂಕ ಶುರುವಾಗಿದೆ.ಪುತ್ತೂರಿನಲ್ಲಿ ನಿನ್ನೆ ತಾನೇ ಸಿಡಿಲು ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಹವಾಮಾನ ಇಲಾಖೆಯ ಸೂಚನೆಯಂತೆ ಜನರು ಎಚ್ಚರಿಕೆಯಿಂದ ಇರುವುದು ಒಳಿತು.
ಈ ಬಾರಿಯ ಮಳೆಯಿಂದಾಗಿ ಕರಾವಳಿಯ ರೈತರು ಕಂಗೆಟ್ಟು ಹೋಗಿದ್ದಾರೆ.ವ್ಯಾಪಕ ಮಳೆಯ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆರೋಗ ಬಂದು ಎಲ್ಲಾ ಧರೆಗುರುಳಿದೆ.ಜಿಲ್ಲೆಯ ಅರ್ಧದಷ್ಟೂ ಕೃಷಿಕರಿಗೆ ಕೊಳೆರೋಗ ತೊಂದರೆ ಕೊಟ್ಟಿದೆ.ಹೆಚ್ಚಿನ ಪ್ರದೇಶಗಳು ಜಲಾವೃತಗೊಂಡು ಕೃಷಿಗೆ ತೊಂದರೆ ಉಂಟಾಗಿದೆ.ಮಣ್ಣುಕುಸಿತ ಉಂಟಾಗಿ.ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಕೃಷಿ ಮಾಡಿದ್ದ ಪ್ರದೇಶಗಳು ಮಣ್ಣುಕುಸಿತದಿಂದಾಗಿ ಕೆಟ್ಟು ಹೋದ ಘಟನೆಗಳು ನಡೆದಿದೆ.ಜಿಲ್ಲೆಯ ರಸ್ತೆಗಳು ಹದಗೆಟ್ಟಿದ್ದು ಇದಕ್ಕೆ ಕಾರಣ ಅತಿಯಾದ ಮಳೆ ಎಂಬ ಕಾರಣವನ್ನು ನಾಯಕರು ಮತ್ತು ಅಧಿಕಾರಿಗಳು ನೀಡ್ತಿದ್ದಾರೆ.ಮಳೆಯ ಕಾರಣಕ್ಕೆ ನಿಂತ ಹಲವಾರು ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ.
ಈ ಬಾರಿಯ ಮಳೆಗಾಳವಂತೂ ವ್ಯಾಪಕ ತೊಂದರೆಯನ್ನು ಉಂಟು ಮಾಡಿದೆ.ಇನ್ನೂ ಕೂಡ ಮಳೆ ಸಂಪೂರ್ಣವಾಗಿ ನಿಲ್ಲದೇ ಇರೋದು ಆತಂಕಕ್ಕೆ ಕಾರಣವಾಗಿದೆ.ಇಡೀ ವರ್ಷ ಮಳೆಯಾದರೆ ಬದುಕೋದು ಹೇಗೆ ಎಂಬ ಪ್ರಶ್ನೆಯನ್ನು ಕೂಲಿ-ನಾಲಿ ಮಾಡಿ ಬದುಕುವ ಜನರು ಕೇಳುವಂತಾಗಿದೆ.ಹವಾಮಾನ ಇಲಾಖೆಯ ಮುನ್ಸೂಚನೆ ಬಂದಂತೆ ಜನರು ಆತಂಕಕ್ಕೆ ಒಳಗಾಗ್ತಿದ್ದಾರೆ.ಸಾಕಪ್ಪಾ ಸಾಕು ಮಳೆಯ ಸಹವಾಸ ಎಂಬ ಮಾತುಗಳು ಜನರ ಬಾಯಿಂದ ಕೇಳಿ ಬರ್ತಿದೆ.ಜನರ ಪ್ರಾರ್ಥನೆ,ಬೇಡಿಕೆಗಾದ್ರೂ ಮಳೆರಾಯ ಸೈಲೆಂಟ್ ಆಗ್ತಾನಾ ಮುಂದಿನ ದಿನಗಳಲ್ಲಿ ನೋಡ್ಬೇಕಾಗಿದೆ.
ಇದನ್ನೂ ಓದಿ:CM ಆಗೋ ಅರ್ಜಂಟ್ ನನಗಿಲ್ಲ,ತಿರುಚಿದ ಸುದ್ದಿಗಳ ವಿರುದ್ದ ಡಿಕೆಶಿ ಗರಂ
……………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಲಿಂಕ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/@tulutimess











