ಬೆಂಗಳೂರು : Tulu Times | ಅನುಮತಿಸದೆ, ಪರವಾನಗಿ ಇಲ್ಲದೆ ಮದ್ಯವನ್ನು ತಯಾರಿಸುವುದು, ಸಾಗಿಸುವುದು, ಸಂಗ್ರಹಿಸುವುದು ಅಥವಾ ಮಾರಾಟ ಮಾಡುವುದನ್ನು ಅಕ್ರಮ ಮದ್ಯ ವ್ಯಾಪಾರ ಎಂದು ಕರೆಯಲಾಗುತ್ತದೆ. ಇದು ಕಾನೂನುಬಾಹಿರವಾಗಿದ್ದು ಗಂಭೀರ ಶಿಕ್ಷೆಗೆ ಒಳಪಟ್ಟ ವಿಷಯವಾಗಿದೆ.
ಹಣದ ಆಸೆಯಿಂದ ಜನರಿಂದ ಹೆಚ್ಚು ಹೆಚ್ಚು ಹಣ ಕಸಿದುಕೊಳ್ಳುತ್ತಿರುವ ಮದ್ಯದಂಗಡಿಯವರಿಗೆ ಬಿಸಿ ಮುಟ್ಟಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಮದ್ಯದಂಡಿಗಳ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಇಲಾಖೆಯು, ಸುಮಾರು 12 ಕೋಟಿ ರೂ.ಗಳಷ್ಟು ದಂಡ ಸಂಗ್ರಹಿಸಿದೆ. ಅಬಕಾರಿ ಇಲಾಖೆಯು ರಾಜ್ಯ ಸರಕಾರದ ಪ್ರಮುಖ ಆದಾಯ ಮೂಲವಾಗಿದೆ. ಇತರೆ ಇಲಾಖೆಗಳಿಗೆ ಹೋಲಿಸಿದರೆ ಅಬಕಾರಿ ಇಲಾಖೆಯಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬರುತ್ತದೆ.
ಹೊಸ ಯೋಜನೆಗಳೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಸರಕಾರ ಈ ಇಲಾಖೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಮದ್ಯದಂಗಡಿಗಳ ಮಾಲೀಕರು ರಾಜಾರೋಷವಾಗಿ ಎಂಆರ್‌ಪಿ ನಿಯಮ ಉಲ್ಲಂಘಿಸಿ ಸುಲಿಗೆ ಮಾಡುತ್ತಿದ್ದಾರೆ. ಸರಕಾರ, ಎಇಡಿ ಪರಿಷ್ಕರಣೆಯ ಹೆಸರಲ್ಲಿ ಕಾನೂನುಬದ್ಧವಾಗಿ ಮಿತಿಮೀರಿ ಹಣ ವಸೂಲಿ ಮಾಡಿದರೆ, ಮದ್ಯದಂಗಡಿ ಮಾಲೀಕರು ಕಾನೂನುಬಾಹಿರವಾಗಿ ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ.
ನಿಯಮದ ಪ್ರಕಾರ, ಚಿಲ್ಲರೆ ಮದ್ಯದಂಗಡಿಗಳು ಮತ್ತು ಎಂಎಸ್‌ಐಎಲ್ ಮಳಿಗೆಗಳಲ್ಲಿ ಕಡ್ಡಾಯವಾಗಿ ಮದ್ಯದ ದರ ಪಟ್ಟಿ ಹಾಕಬೇಕು. ಆದರೆ, ಬಹುಪಾಲು ಮದ್ಯದಂಗಡಿಗಳಲ್ಲಿ ದರ ಪಟ್ಟಿ ಹಾಕದೆ ಗ್ರಾಹಕರನ್ನು ಯಾಮಾರಿಸಲಾಗುತ್ತಿದೆ. ಕೆಲ ಮದ್ಯದಂಗಡಿಗಳಲ್ಲಿ ದರ ಪಟ್ಟಿ ಹಾಕಿದ್ದರೂ ಅಗ್ಗದ ದರದ ಮದ್ಯಗಳ ಬೆಲೆಯನ್ನು ಮಾತ್ರ ನಮೂದಿಸಿರುತ್ತಾರೆ. ಅಬಕಾರಿ ಇಲಾಖೆ ವೆಬ್‌ಸೈಟ್‌ನಲ್ಲೂ ಪರಿಷ್ಕೃತ ಎಂಆರ್‌ಪಿಯ ವಿವರವಿಲ್ಲ. ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮಳಿಗೆಗಳಲ್ಲೂ ಇದೇ ದಂಧೆ ನಡೆಯುತ್ತಿದೆ.
Excessive charges at a liquor store – ತುಳು ಟೈಮ್ಸ್
ಇದನ್ನೂ ಓದಿ :ಟ್ರೆಂಡಿಂಗ್ 19 ನಿಮಿಷಗಳ ವೈರಲ್ ವೀಡಿಯೋ.. ತಪ್ಪು ಮಾಹಿತಿ ಲಿಂಕ್ ಮಾಡಲಾಯ್ತಾ..?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=XQ2uVqaVrzSdIpny











