ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಗಿಲ್ಲಿ ತಪ್ಪು ಮಾಡಿದ್ದ : ಮನೆಗೆ ಬಂದ ಅತಿಥಿಗಳಿಗೆ ಅವಮಾನ

ಬಿಗ್ ಬಾಸ್ : Tulu Times | ಬಿಗ್ ಬಾಸ್ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಿನ್ನೆ ದಿನ ಪ್ರಸಾರವಾಗಿತ್ತು. ಮನೆಯ ಹಲವು ತಪ್ಪು ಒಪ್ಪುಗಳನ್ನು ಇಲ್ಲಿ ಮಾತುಕತೆಯ ಮೂಲಕ ಕಿಚ್ಚ ಸುದೀಪ್ ಬಗೆಹರಿಸುತ್ತಾರೆ. ಹೀಗಿರುವಾಗ, ವಾರದ ಎಪಿಸೋಡ್ ನಲ್ಲಿ ಮಂಜು ಮದುವೆ ವಿಷಯ ಬಂದಾಗ ಎಷ್ಟನೇ ಮದುವೆ ಎಂದು ಕೇಳಿದರು ಗಿಲ್ಲಿ. ಆ ಬಳಿಕ ‘ಬಿಟ್ಟಿ ತಿನ್ನೋಕೆ ಬಂದಿದ್ದೀರಿ’ ಎಂದೆಲ್ಲ ಹೇಳಿದರು.ಇದು ಮನೆಗೆ ಬಂದ ಅತಿಥಿಗಳಿಗೆ ನಿಯಂತ್ರಿಸೋಕೆ ಸಾಧ್ಯವಾಗಲೇ ಇಲ್ಲ. ಇಬ್ಬರ ಮಧ್ಯೆ ಸಾಕಷ್ಟು ಕಿತ್ತಾಟ ನಡೆದು, ಇದರ ವಿಟಿಯನ್ನು ಸುದೀಪ್ ತೋರಿಸಿದರು. ಆ ಬಳಿಕ ಸುದೀಪ್ ಅವರು ಬುದ್ಧಿವಾದ ಹೇಳಿದರು. ಆಗ ಗಿಲ್ಲಿ ಅವರು ಸೈಲೆಂಟ್ ಆಗುತ್ತಾರೆ.

ಇಲ್ಲಿ ಏನೇ ತಪ್ಪು ಎತ್ತಿ ತೋರಿಸಿದರೂ ಗಿಲ್ಲಿ ಅದನ್ನು ಒಪ್ಪಿಕೊಂಡು ನನ್ನದು 20 ಪರ್ಸೆಂಟ್ ಸರಿ ಇತ್ತು. 80 ಪರ್ಸೆಂಟ್ ತಪ್ಪು ಇತ್ತು ಎಂದು ಗಿಲ್ಲಿ ಹೇಳಿದರು. ಬಂದ ಅತಿಥಿಗಳನ್ನು ಸಾಕಷ್ಟು ಅವಮಾನಿಸಿದ್ದನ್ನು ನೀವು ನೋಡಿರಬಹುದು. ‘ಎಲ್ಲರಿಗೂ ಒಳ್ಳೆಯ ಆತಿಥ್ಯ ನೀಡಬೇಕು’ ಎಂದು ಬಿಗ್ ಬಾಸ್ ಆದೇಶವನ್ನು ನೀಡಿದ್ದರು. ಆದರೆ, ಗಿಲ್ಲಿ ನಟ ಅತಿರೇಕ ಮಾಡಿದ್ದರು. ಅತಿಥಿಯಾಗಿ ಬಂದವರಿಗೆ ಅವಮಾನ ಮಾಡಿದ್ದರು. ಈ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗಿದೆ. ಈ ವೇಳೆ ಸುದೀಪ್ ಒಂದಷ್ಟು ವಿಷಯಗಳನ್ನು ಸರಿಪಡಿಸಿದರು.

ಈ ಎಲ್ಲಾ ಕಾರಣಗಳಿಂದ ಪ್ರೇಕ್ಷಕರ ಕಣ್ಣಿಗೆ, ಬಿಗ್ ಬಾಸ್ ಮನೆಯಲ್ಲಿ ಈ ವಾರ ಗಿಲ್ಲಿ ನಟ ದೊಡ್ಡ ತಪ್ಪು ಮಾಡಿದ್ದರು ಎಂದೇ ಹೇಳಬಹುದು. ಒಳ್ಳೆಯ ಅಭಿಪ್ರಾಯವನ್ನು, ನಂಬಿಕೆಯನ್ನು ಒಂದೇ ಒಂದು ಸಣ್ಣ ಚಿಟಿಕೆಯ ಸಮಯದಲ್ಲಿ ಕಳೆದುಕೊಳ್ಳುವುದು ಇದಕ್ಕೇ ಹೇಳುವುದು ಕಾಣುತ್ತದೆ. Gilly made a mistake: It was an insult to the guests who came to the house – ತುಳು ಟೈಮ್ಸ್

ಇದನ್ನೂ ಓದಿ :ನವೆಂಬರ್ 30 ರೊಳಗಾಗಿ ಮುಕ್ತಾಯಗೊಳ್ಳಲಿದೆ ಹಣಕಾಸಿನ ನಿಯಮಗಳು….!

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=XQ2uVqaVrzSdIpny

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page