ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ..! ಇನ್ನು ಆಟ ಹೇಗಿರುತ್ತೆ..?

ಬಿಗ್​ ಬಾಸ್​: Tulu Times |ಬಿಗ್‌ ಬಾಸ್‌ ಮನೆಗೆ ಈಗಾಗಲೇ ಬಂದ ಮಾಜಿ ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಇಬ್ಬರು ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಉಳಿದುಕೊಂಡಿದ್ದಾರೆ. ರಜತ್ ಕಿಶನ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಂ ಕಳೆದ ವಾರ ಬಿಗ್​ ಬಾಸ್​ ಮನೆಗೆ ಅತಿಥಿಗಳಾಗಿ ಬಂದು ಫುಲ್‌ ಎಂಜಾಯ್‌ ಮಾಡಿದ್ದಾರೆ.

ಈಗಾಗಲೇ  ತ್ರಿವಿಕ್ರಂ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಅವರನ್ನು ಸುದೀಪ್ ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ವೈಲ್ಡ್​ ಕಾರ್ಡ್ ಸ್ಪರ್ಧಿಯಾಗಿ ಉಳಿದುಕೊಂಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲೂ ಒಂದು ಟ್ವಿಸ್ಟ್​ ಎಂದಿರುವ ಸುದೀಪ್, ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದಿದ್ದಾರೆ. ಹಾಗಾಗಿ ಆ ಟ್ವಿಸ್ಟ್ ಏನು ಅನ್ನೋದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮುಂದಿನ ವಾರದಿಂದ ನಾನು ನಿಮ್ಮನ್ನು ಇಷ್ಟು ಸಾಫ್ಟ್​ ಆಗಿ ಮಾತನ್ನಾಡಿಸಲ್ಲ ಎಂದು ರಜತ್ ಗೆ ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ ವುಡ್ ಹಾಸ್ಯನಟ‌ ಎಂ.ಎಸ್‌ ಉಮೇಶ್ ಇನ್ನಿಲ್ಲ..!

ಬಿಗ್ ಬಾಸ್ ಕನ್ನಡ ಮನೆಗೆ ಮತ್ತಷ್ಟು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಶೋ 60 ದಿನಗಳನ್ನು ಪೂರೈಸಿರುವ ಹಿನ್ನೆಲೆ 118 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಹನುಮಂತ  ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದರು. ನಂತರ ಕಪ್ ಕೂಡ ಎತ್ತಿದ್ದಾರೆ. ಸದ್ಯ ರೇಸ್​ನಲ್ಲಿ ಗಿಲ್ಲಿ ಮುಂದಿದ್ದಾರೆ. ಅವರೇ ಕಪ್ ಗೆಲ್ಲುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗ ವೈಲ್ಡ್ ಕಾರ್ಡ್ ಮೂಲಕ ಯಾರನ್ನಾದರೂ ಪರಿಚಯಿಸಿದರೆ ಅವರು  ಕಾಂಪಿಟೇಷನ್ ಕೊಡುತ್ತಾರಾ ಅನ್ನೋದು ಪ್ರಶ್ನೆಯಾಗಿದೆ.  ಈ ಸಲದ ಬಿಗ್‌ ಬಾಸ್‌ ಯಾರೂ ಊಹಿಸದ ಕೆಲವು ವಿಚಾರಗಳಿಂದ ಕೂಡಿದ್ದು, ಜನರು ಟ್ವಿಸ್ಟ್‌ ಗಳನ್ನು ನೋಡೋದೆ ಹೆಚ್ಚಾಗಿದೆ. ಅದ್ರಲ್ಲೂ ಯಾರು ಕಪ್‌ ಗೆಲ್ತಾರೆ ಅನ್ನೋದನ್ನು ಹೇಳೋಕೆ ಸಾಧ್ಯವಿಲ್ಲ.

Wild card entry into the Bigg Boss house..! How will the game be from now on..?- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page