ಬ್ರೇಕಿಂಗ್ ನ್ಯೂಸ್
ದೇಶ

ಬಿಸಿಯೂಟ ಸೇವಿಸಿ ಅಸ್ವಸ್ತರಾದ ಮಕ್ಕಳು : ಮುಗಿಯುವಂತೆ ಕಾಣುತ್ತಿಲ್ಲ ಸಮಸ್ಯೆ

ಉತ್ತರ ಕನ್ನಡ : Tulu Times | ಬಿಸಿಯೂಟ ಮಕ್ಕಳಿಗೆ ನೀಡುತ್ತಿರುವುದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ಹಾನಿಯನ್ನುಂಟು ಮಾಡಬಾರದೆಂಬ ಉದ್ದೇಶದಿಂದ. ಸ್ವತಃ ಸರ್ಕಾರವೇ ಸರಕಾರಿ ಶಾಲೆಗಳಿಗೆ ಈ ವ್ಯವಸ್ಥೆಯನ್ನು ಮಾಡುತ್ತಿದ್ದರೂ ಕೆಲವೊಂದು ಶಾಲೆಗಳಲ್ಲಿ ಈ ವ್ಯವಸ್ಥೆಯ ಬಗ್ಗೆ ಹೆಚ್ಚಿನ ನಿಗಾ ವಹಿಸದೆ, ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಇದರ ಪರಿಣಾಮವನ್ನುಂಟು ಮಾಡಿದೆ. ದಾಸ್ತಾನುಗಳಲ್ಲಿ ಅಕ್ಕಿಯ ಶೇಖರಣೆಯ ಬಗ್ಗೆ ನಿರ್ಲಕ್ಷ, ಹುಳು ಹುಪ್ಪಟೆಗಳು ಸೇರಿಕೊಳ್ಳುವುದು, ಇತರ ಕೀಟಗಳು ಅನ್ನದಲ್ಲಿ ಅಥವಾ ಬೇಳೆ, ಸಾಂಬಾರುಗಳಲ್ಲಿ ಕಂಡುಬರುವುದನ್ನು ಕೇಳಿರುತ್ತೇವೆ. ಆದರೆ ಇದು ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಪರಿಣಾಮ ಬೀರುತ್ತದೆ.

ಗುಣಮಟ್ಟವಿಲ್ಲದ ಆಹಾರ ಪದಾರ್ಥ ;

ಆಹಾರ ಇಲಾಖೆಯ ಮೂಲಕ ಜಿಲ್ಲೆಯ ಪ್ರತಿ ತಾಲೂಕಿನ ಶಾಲೆಗಳಿಗೆ ಅಕ್ಷರ ದಾಸೋಹದಡಿ ಆಹಾರ ಪದಾರ್ಥ ಪೂರೈಕೆ ಮಾಡಲಾಗುತ್ತದೆ. ಇದರ ಗುಣಮಟ್ಟ ಪರೀಕ್ಷೆಗೆ ಆಹಾರ ಸಮಿತಿ ಇದೆ. ಒಂದು ವೇಳೆ ಪೂರೈಕೆಯಾದ ಆಹಾರ ಪದಾರ್ಥ ಕಳಪೆ ಮಟ್ಟದ್ದಾಗಿದ್ದರೆ ಅದನ್ನು ತಿರಸ್ಕರಿಸುವ ಹಕ್ಕು ಶಾಲೆಯ ಮುಖ್ಯ ಶಿಕ್ಷಕರಿಗಿದೆ. ಆದರೆ, ಗುಣಮಟ್ಟವಿಲ್ಲದ ಆಹಾರ ಪದಾರ್ಥ, ಶುಚಿತ್ವವಿಲ್ಲದ ಬಿಸಿಯೂಟ ಕೊಠಡಿಗಳಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಿದೆ. ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಸೇವನೆ ಮಾಡಿದ ಆಹಾರಗಳಲ್ಲಿ ಇಲಿ ಹಿಕ್ಕೆ ಪತ್ತೆಯಾಗಿದೆ. ಮುಂಡಗೋಡಿನ ಶಾಲೆಯಲ್ಲಿ ೪೦೦ ವಿದ್ಯಾರ್ಥಿಗಳಿದ್ದು, ಅದರಲ್ಲಿ 22 ಜನ ಅಸ್ವಸ್ತಗೊಂಡಿದ್ದಾರೆ. ಇದರಲ್ಲಿ ಹತ್ತರಿಂದ ಹೆಚ್ಚು ಮಕ್ಕಳನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಉಳಿದರವರು ಚೇತರಿಸಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುತ್ತಿದ್ದ ವೇಳೆ ಇಲಿ ಹಿಕ್ಕೆಗಳು ಕಂಡು ಬಂದಿದೆ. ವಿದ್ಯಾರ್ಥಿಗಳು ಕ್ಲಾಸ್ ರೂಮ್‌ನಲ್ಲಿ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿದ್ದಾರೆ. ಇಲ್ಲಿ ಅಡುಗೆಯವರೊಂದಿಗೆ ಶಿಕ್ಷಕರ ನಿರ್ಲಕ್ಷವೇ ಹೆಚ್ಚಾಗಿ ಕಂಡು ಬಂದಿದೆ. ಇನ್ನು ಮಕ್ಕಳ ಪೋಷಕರು ಶಾಲೆಯ ವ್ಯವಸ್ಥೆ ಬಗ್ಗೆ ದೂರಿದ್ದಾರೆ. ಮುಂಡಗೋಡಿನ ಶಾಲೆಯ ಬಿಸಿಯೂಟದ ಸ್ಥಿತಿ ಹೀಗಾದರೆ, ಹಳಿಯಾಳ ಪಟ್ಟಣದ ದೇಶಪಾಂಡೆ ಆಶ್ರಯ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ನಾಪುರ ಕಾಲೋನಿ, ದೇಶಪಾಂಡೆ ನಗರದ ಸರ್ಕಾರಿ ಶಾಲೆ ಹಾಗೂ ಉರ್ದು ಶಾಲೆಗಳಲ್ಲಿ ಹಾಳಾದ ಧಾನ್ಯ ಹಾಗೂ ಕ್ರಿಮಿ, ಕೀಟ, ಇಲಿ ಹಿಕ್ಕೆ ಇರುವ ಧಾನ್ಯ ಪೂರೈಕೆ ಮಾಡಲಾಗಿದೆ. ಬಿಸಿಊಟದ ಕೊಠಡಿ ಕೂಡ ತುಂಬಾ ಕೆಟ್ಟಾಗಿದೆ. ಇದರಲ್ಲಿ ಗುಜುರಿ ವಸ್ತುಗಳನ್ನ ಸಂಗ್ರಹಣೆ ಮಾಡಿ ಇಡಲಾಗಿದ್ದು, ಅತ್ಯಂತ ಕೆಟ್ಟ ಮಟ್ಟದ ಸ್ಥಿತಿಯಲ್ಲಿದೆ ಎಂದು ಪೋಷಕರು ಹೇಳಿದ್ದಾರೆ. ಇನ್ನು ಸಂಬAಧಪಟ್ಟ ಇಲಾಖೆಗೆ ಹಾಗೂ ಹಳಿಯಾಳದ ಬಿ.ಇ.ಓ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸರ್ಕಾರಿ ಶಾಲೆಗಳ ಮಹತ್ವ ಹೆಚ್ಚಿರುವಾಗ ಅಲ್ಲಿನ ಸ್ವಚ್ಚತೆ ಹಾಗೂ ಆಹಾರದ ಬಗ್ಗೆ ನಿಗಾ ವಹಿಸಬೇಕು. ಹೆಚ್ಚಿನ ಮಕ್ಕಳು ಹಳ್ಳಿಯಿಂದಲೇ ಬರುವ ಕಾರಣ ಮುಗ್ಧ ಮಕ್ಕಳಿಗೆ ಹೆಚ್ಚಿನ ಆದ್ಯತೆ ಕೊಡುವುದು ಶಿಕ್ಷಕರ ಕರ್ತವ್ಯವೂ ಆಗಿದೆ.

Children falling ill after eating hot meals: The problem doesn’t seem to be going away  – ತುಳು ಟೈಮ್ಸ್

ಇದನ್ನೂ ಓದಿ :ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆ..!

==========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9__hBRPRAJ0?si=5TToPhSTlJIx-LWk

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page