ಬ್ರೇಕಿಂಗ್ ನ್ಯೂಸ್
ಕರ್ನಾಟಕ

CM ಆಗೋ ಅರ್ಜಂಟ್ ನನಗಿಲ್ಲ,ತಿರುಚಿದ ಸುದ್ದಿಗಳ ವಿರುದ್ದ ಡಿಕೆಶಿ ಗರಂ

ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಜೋರಾಗ್ತಿದೆ.ದಿನೇ ದಿನೇ ಸಿಎಂ ಬದಲಾಗ್ತಾರೇ ಅನ್ನೋ ಮಾತುಗಳು ಕೇಳಿಬರ್ತಾನೆ ಇದೆ.ಈ ಬಗ್ಗೆ ಡಿಕೆ ಶಿವಕುಮಾರ್ ಇಂದು ಪ್ರತಿಕ್ರಿಯೆ ನೀಡಿದ್ದು,ಸಿಎಂ ಆಗೋ ಅರ್ಜಂಟ್ ನನಗಿಲ್ಲ ಎಂದಿದ್ದಾರೆ.ಕೆಲ ಮಾಧ್ಯಮಗಳು ನಾನು ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸ್ತಿವೆ ಎಂದು ಗರಂ ಆಗಿದ್ದಾರೆ.ತಿರುಚಿ ಸುದ್ದಿ ಬರೆದು ವಿವಾದ ಸೃಷ್ಟಿಸುತ್ತಿರುವ ಮಾಧ್ಯಮಗಳ ವಿರುದ್ದ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.

ಬೆಂಗಳೂರು ಲಾಲ್ ಬಾಗ್ ನಲ್ಲಿ ನಡೆದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಮಾಧ್ಯಮದವ್ರೊಂದಿಗೆ ಮಾತನಾಡಿದ್ರು.ಮಾಧ್ಯಮಗಳೊಂದಿಗೆ ಮಾತಾಡುವ ಆರಂಭದಲ್ಲೇ ಡಿಕೆಶಿವಕುಮಾರ್ ಗರಂ ಆಗಿದ್ರು.ಸುಳ್ಳು ಸುದ್ದಿ,ತಿರುಚಿದ ಸುದ್ದಿಗಳನ್ನೆ ಪ್ರಸಾರ ಮಾಡ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.ಇನ್ನೂ ಮುಂದುವರಿದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆಯನ್ನು ನೀಡಿದ್ರು.

ನನಗೆ ನಾಳೇನೆ ಸಿಎಂ ಆಗಬೇಕು ಅನ್ನೋ ಅರ್ಜಂಟ್ ಇಲ್ಲ.ಆತರದ ಆತುರ ನನ್ನಲ್ಲಿ ಇಲ್ಲ.ನಾನು ರಾಜಕೀಯಕ್ಕೆ ಬಂದಿದ್ದು ಸಾರ್ವಜನಿಕರ ಸೇವೆ ಮಾಡುವುದಕ್ಕೆ.ತಿರುಚಿದ ಸುದ್ದಿಯನ್ನು ಪ್ರಸಾರ ಮಾಡುವುದಾದ್ರೆ ನನ್ನಿಂದ ಯಾವುದೇ ಸಹಕಾರ ಸಿಗುವುದಿಲ್ಲ.ನನಗೆ ಮಾಧ್ಯಮಗಳಿಲ್ಲದೆ ರಾಜಕೀಯ ಮಾಡುವುದು ಗೊತ್ತು ಎಂದಿದ್ದಾರೆ.ಇದೆ ರೀತಿ ಮುಂದುವರಿದರೆ ಮಾಧ್ಯಮಗಳನ್ನು ನನ್ನ ಕಾರ್ಯಕ್ರಮಕ್ಕೆ ಭಾಗವಹಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ.ಮಾಧ್ಯಮಗಳು ರಾಜಕಾರಣ ಮಾಡಬಾರದು ನನಗೆ ಭಗವಂತ ಅವಕಾಶ ಕೊಟ್ಟಾಗ ಸ್ವೀಕರಿಸುತ್ತೇನೆ ಬೆಂಗಳೂರು ನಾಗರಿಕರು ಮತ್ತು ಜನರ ಸೇವೆಗೆ ನಾನು ಸಿದ್ದ,ಉತ್ತಮ ಆಡಳಿತ ನೀಡಲು ಶ್ರಮಪಡುತ್ತೇನೆ ಎಂದಿದ್ದಾರೆ.ಮಾಧ್ಯಮಗಳು ಒಳ್ಳೆಯ ಸುದ್ದಿಗಳನ್ನು ಪ್ರಸಾರ ಮಾಡಬೇಕು.ವಿವಾದಗಳನ್ನು ಸೃಷ್ಟಿಸುವುದಕ್ಕೆ ಪ್ರಯತ್ನ ಮಾಡುತ್ತಿವೆ.ಇದಕ್ಕಾಗಿಯೇ ತಿರುಚಿದ ಸುದ್ದಿಗಳನ್ನು ಪ್ರಸಾರ ಮಾಡ್ತಿವೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಮಾಧ್ಯಮಗಳ ವಿರುದ್ದ ಸಿಟ್ಟು ಪ್ರದರ್ಶನ ಮಾಡಿದ್ರು.ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿರುವುದ ಸತ್ಯ ಎನ್ನಲಾಗ್ತಿದೆ.ಸಿದ್ದರಾಮಯ್ಯ ಬೆಂಬಲಿಗರು ಯಾವುದೇ ಬದಾಲವಣೆ ಇಲ್ಲ ಎಂಬ ಹೇಳಿಕೆಯನ್ನು ನೀಡ್ತಿದ್ರೆ.ಡಿಕೆಶಿ ಬೆಂಬಲಿಗರು ತನ್ನ ನಾಯಕರನ್ನು ಹೇಗಾದ್ರೂ ಮಾಡಿ ಸಿಎಂ ಮಾಡೋದಿಕ್ಕೆ ಉತ್ಸುಕರಾಗಿದ್ದಾರೆ.ಅದ್ರಲ್ಲೂ ದಸರಾ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂಬ ಹೇಳಿಕೆಯನ್ನು ನೀಡಿರೋದು ಕಾಂಗ್ರೆಸ್ ನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.ಡಿಕೆಶಿ ಸಿಟ್ಟು ಏನೇ ಇದ್ರೂ ಇನ್ನೂ ಕೆಲವು ದಿನಗಳಲ್ಲಿ ರಾಜ್ಯದ ಜನತೆಗೆ ಸಿಎಂ ಬದಾಲವಣೆಯ ಇಂಟ್ರೆಸ್ಟಿಂಗ್ ಸುದ್ದಿಗಳು ಬರೋದಂತೂ ಗ್ಯಾರಂಟಿ.

ಇದನ್ನೂ ಓದಿ:Congress ಅವಧಿ ಇದೇ ಕೊನೆ.ಇನ್ನೂ ಅಧಿಕಾರಕ್ಕೆ ಬರಲ್ಲ:ಬ್ರಹ್ಮಾಂಡ ಗುರೂಜಿ
……………………………………………………………………………………………………………..
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page