ಕರ್ನಾಟಕ: Tulu Times | ಸಿಎಂ-ಡಿಸಿಎಂ ತೆರೆ ಎಳೆದಿದ್ದರೂ ಅಭಿಮಾನಿಗಳು ತಮ್ಮ ನಾಯಕರನ್ನ ಬೆಂಬಲಿಸೋದನ್ನ ಮುಂದುವರಿಸಿದ್ದು,ಡಿಕೆಶಿ ಸಿಎಂ ಆಗಲೆಂದು ಅಭಿಮಾನಿಗಳು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಮೋಹಕತಾರೆ ಗುಡ್ ನ್ಯೂಸ್..!
ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿದ್ದ ಗೊಂದಲಗಳಿಗೆ ಸಿಎಂ-ಡಿಸಿಎಂ ತೆರೆ ಎಳೆದಿದ್ದರೂ ಅಭಿಮಾನಿಗಳು ತಮ್ಮ ನಾಯಕರನ್ನು ಬೆಂಬಲಿಸೋದನ್ನು ಮುಂದುವರಿಸಿದ್ದಾರೆ. ಡಿಕೆಶಿ ಬೆಂಬಲಿತರು ಡಿಕೆಶಿಗೆ ಸಿಎಂ ಸ್ಥಾನ ಸಿಗಲಿ ಅಂತ ವಿಶೇಷ ಪೂಜೆ, ಹೋಮಗಳನ್ನ ನೆರವೇರಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ ಕೋಪ್ಪ ಸೇತುವೆ ಬಳಿ ಇರುವ ಕಾವೇರಿ ಪ್ರತಿಮೆ ಬಳಿ ಡಿಕೆಶಿ ಅಭಿಮಾನಿಗಳು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ನಿಂದ ಮಾಜಿ ಕೇಂದ್ರ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ನಿಧನ !
ಪೂಜೆ ಸಲ್ಲಿಸಿದವರು ಯಾರು..?
ಒಕ್ಕಲಿಗರ ಸಂಘದಿಂದ ಡಿಕೆಶಿ ಸಿಎಂ ಆಗಲೆಂದು ಗ್ರಾಮದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಸಂಘದ ಅಧ್ಯಕ್ಷ ಟಿ.ಪಿ.ಸೋಮಶೇಖರ್ ನೇತೃತ್ವದಲ್ಲಿ ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಡಿಕೆಶಿ ಭಾವಚಿತ್ರಕ್ಕೆ ಹಾರ ಹಾಕಿ, ʻಡಿಕೆಶಿ ಸಿಎಂ ಆಗಲಿʼ ಅಂತ ಜೈಕಾರ ಹಾಕಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ ಅಭಿಮಾನಿ ಬಳಗದ ಅದ್ಯಕ್ಷ ಮೈಸಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಡಿ.ಕೆ ಶಿವಕುಮಾರ್ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳ ಕಾಲ ಸಿಎಂ ಆಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಡಿಕೆ ಶಿವಕುಮಾರ್ ಅವರಿಗೂ ಅವಕಾಶ ಕಲ್ಪಿಸಬೇಕು ಎಂದರು.
ಡಿಕೆಶಿ ತೆರಳಬೇಕಿದ್ದ ದೇವಸ್ಥಾನದಲ್ಲಿ ಹೆಜ್ಜೇನು ದಾಳಿ!
ಡಿ.ಕೆ.ಶಿವಕುಮಾರ್ ಭೇಟಿ ನೀಡಬೇಕಿದ್ದ ಭೂವರಾಹನಾಥ ದೇವಸ್ಥಾನದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು, ಭಕ್ತರು ರಕ್ಷಣೆಗೆ ಓಡಿಹೋದರು. ಸಿಎಂ ಸಿದ್ದರಾಮಯ್ಯ ಜೊತೆ ಉಪಾಹಾರ ಸಭೆ ಬಳಿಕ ಡಿಕೆಶಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಡಿಕೆಶಿ ಆಗಮನಕ್ಕೂ ಮುನ್ನ ದೇಗುಲದ ಆವರಣದಲ್ಲಿ ಹೆಜ್ಜೇನು ದಾಳಿ ಮಾಡಿವೆ. ಭಕ್ತರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ಕೆಲಕಾಲ ಹೆಜ್ಜೇನು ಆತಂಕ ಮೂಡಿಸಿತ್ತು.
Special worship to Mother Cauvery to ensure that DKSH becomes CM..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











