ಬಿಗ್ ಬಾಸ್: Tulu Times | ಬಿಗ್‌ಬಾಸ್ ಮನೆಯಲ್ಲಿ ಈ ಸೀಸನ್ ಪ್ರಾರಂಭ ಆದ ದಿನದಿಂದಲೂ ಗಿಲ್ಲಿ ಹಾಗೂ ಕಾವ್ಯ ಮಧ್ಯೆ ಬಾಂಧವ್ಯ ತುಂಬಾ ಚೆನ್ನಾಗಿದೆ. ಕಳೆದ ಎಪಿಸೋಡ್ ನಲ್ಲಿ ಗಿಲ್ಲಿಯನ್ನು ಕಾವ್ಯ ಅಣ್ಣಾ ಎಂದು ಹೇಳಿ ಗಟ್ಟಿಯಾಗಿ ಕೂಗಿದ್ದಾರೆ.
ಶೋ ಆರಂಭ ಆದಾಗಿನಿಂದ ಗಿಲ್ಲಿ ನಟ ಮತ್ತು ಕಾವ್ಯ ಅವರ ಫ್ರೆಂಡ್ಸ್ ಶಿಪ್ ಮೊದಲಿನಿಂದಲೂ ಇತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಅವರಿಬ್ಬರ ನಡುವೆ ತಮಾಷೆಯ ಕಿತ್ತಾಟ ನಡೆಯುತ್ತಲೇ ಇರುತ್ತದೆ.
ಬಿಗ್ ಬಾಸ್ ಮನೆಯಲ್ಲಿ ಹಲವಾರು ಲವ್ ಸ್ಟೋರಿಗಳು ನಡೆದಿವೆ. ಗಿಲ್ಲಿ ನಟ ಅವರು ಕಾವ್ಯ ಶೈವ ಎದುರು ಈಗಾಗಲೇ ಹಲವು ಬಾರಿ ಐ ಲವ್ ಯೂ ಎಂದು ಹೇಳಿದ್ದಾರೆ. ಆದರೆ ಕಾವ್ಯ ಒಪ್ಪಿಕೊಳ್ಳುತ್ತಿಲ್ಲ. ಕಳೆದ ಎಪಿಸೋಡ್ ನಲ್ಲಿ ಕಾವ್ಯ ಅವರು ಗಿಲ್ಲಿಯನ್ನು ಅಣ್ಣ ಎಂದು ಕರೆದಿದ್ದಾರೆ. ಕೂಡಲೇ ಗಿಲ್ಲಿ ಅವರು ಐ ಲವ್ ಯೂ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಳ್ತಂಗಡಿ: ಅಪ್ರಾಪ್ತೆ ಗರ್ಭಿಣಿ – ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ
ಕಾವ್ಯ ಎಲ್ಲರ ಬಳಿ ಕ್ಷಮೆ ಕೇಳಲು ಬರುವುದಕ್ಕೂ ಮುನ್ನ ಗಿಲ್ಲಿ ನಟ, ಯಾರೂ ಕೂಡ ಕಾವ್ಯನ ಕ್ಷಮಿಸಿಬೇಡಿ ಎಂದು ಮನೆಯ ಸದಸ್ಯರಿಗೆ ಗಿಲ್ಲಿ ಹೇಳಿದರು. ಈ ವಿಷಯ ಕಾವ್ಯಗೆ ತಿಳಿಯಿತು. ಆಗ ಅವರಿಗೆ ಕೋಪ ಬಂತು. ‘ಅಣ್ಣಯ್ಯಾ.. ಹೃದಯವಂತ..’ ಎಂದು ಜೋರಾಗಿ ಹಾಡು ಹೇಳಿದರು. ಇದಕ್ಕೆ ಗಿಲ್ಲಿ ಕೋಪ ಮಾಡಿಕೊಂಡರು. ಕಾವ್ಯಾ ಅವರು ಅಣ್ಣ ಎಂದು ಕರೆದ ಮರುಕ್ಷಣವೇ ಗಿಲ್ಲ ‘ಐ ಲವ್ ಯೂ’ ಎಂದು ಕೂಗಲು ಆರಂಭಿಸಿದರು. ಅವರಿಬ್ಬರ ನಡುವಿನ ಈ ಸಂಭಾಷಣೆ ಸಖತ್ ಫನ್ನಿ ಆಗಿತ್ತು. ಬಿಗ್ ಬಾಸ್ ಮನೆಗೆ ಬಂದ ಮಾಜಿ ಸ್ಪರ್ಧಿಗಳಾದ ಮೋಕ್ಷಿತಾ ಪೈ, ರಜತ್ ಕಿಶನ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಅವರ ಜೊತೆ ಕಾವ್ಯ, ಗಿಲ್ಲಿ ಮುಂತಾದವರು ಮಾತನಾಡುತ್ತಾ ಕುಳಿತಿದ್ದರು. ಕಾವ್ಯ ಅವರು ಮೈಕ್ ಧರಿಸಿರಲಿಲ್ಲ. ಆಗ ಬಿಗ್ ಬಾಸ್ ಎಚ್ಚರಿಸಿ, ಮನೆಯ ಸದಸ್ಯರ ಬಳಿ ಕ್ಷಮೆ ಕೇಳಬೇಕಾಯಿತು.
Kavya called Gilli ‘Anna’ in the Bigg Boss house..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











