ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ರೈಡ್‌ – ಮೂವರು ಅರೆಸ್ಟ್

ಮಂಗಳೂರು – ತುಳು ಟೈಮ್ಸ್:‌ ಹೊರಗುತ್ತಿಗೆ ನೌಕರನಿಂದ ಲಂಚ ಸ್ವೀಕರಿಸುತ್ತಿದ್ದಾ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹೊರಗುತ್ತಿಗೆ ನೌಕರನ ಸಂಬಳದ ಬಾಕಿ ಬಿಲ್ ಪಾವತಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿ ಮುಂದುವರಿಸುವ ನೇಮಕಾತಿ ಆದೇಶ ಮಾಡಿಕೊಡಲು ಮೂವರು ಲಂಚ ಕೇಳಿದ್ದಾರೆ. ಲಂಚ ನೀಡುವ ಸಮಯದಲ್ಲಿ ಮೂವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಂಗಳೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್‌) ಬಿ.ಕೆ.ರಾಜು, ಉಳ್ಳಾಲ ಕಚೇರಿಯ ಸರ್ವೇಯರ್‌ ಕೃಷ್ಣಮೂರ್ತಿ, ಸರ್ವೆ ಸೂಪರ್‌ವೈಸರ್ ಎಸ್. ಧನಶೇಖರ ಬಂಧಿತ ಆರೋಪಿಗಳು.

ಉಳ್ಳಾಲದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕೃಷ್ಣಮೂರ್ತಿ ₹ 50 ಸಾವಿರ, ಭೂದಾಖಲೆಗಳ ಸಹಾಯಕ ನಿರ್ದೇಶಕ ಬಿ ಕೆ ರಾಜು ₹10 ಸಾವಿರ ಹಾಗೂ ಸರ್ವೆ ಸೂಪರ್‌ವೈಸರ್ ಎಸ್.ಧನಶೇಖರ ₹ 10 ಸಾವಿರ ಲಂಚ ಕೇಳಿದ್ದಾರೆ ಎಂದು ಹೊರಗುತ್ತಿಗೆ ನೌಕರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಭೂದಾಖಲೆ ಇಲಾಖೆಯ ನಗರ ಆಸ್ತಿ ಮಾಲೀಕತ್ವದ ದಾಖಲೆ (ಯು.ಪಿ.ಒ.ಆರ್‌) ವಿಭಾಗದ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದರು.

 

ದೂರುದಾರ ವ್ಯಕ್ತಿಯಿಂದ ಕೃಷ್ಣಮೂರ್ತಿ ₹20 ಸಾವಿರ, ಬಿಕೆ ರಾಜು ₹ 5 ಸಾವಿರ, ಎಸ್ ಧನಶೇಖರ ₹ 5 ಸಾವಿರ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ವಿಭಾಗ ಲೋಕಾಯುಕ್ತ ಎಸ್‌.ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿಗಳಾದ ಗಾನ ಪಿ.ಕುಮಾರ್, ಸುರೇಶ್ ಕುಮಾರ್.ಪಿ, ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್, ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Three officials attached to the assistant director of land records offices in Ullal and Mangaluru taluk were trapped by the Lokayukta police on Wednesday for allegedly accepting bribe amounts totalling Rs 30,000 from an outsourced employee. Tulu Times

ಇದನ್ನೂ ಓದಿ: ಮಂಗಳೂರಿನಲ್ಲಿ ತಾಯಿಗೆ ಹಿಗ್ಗಾಮುಗ್ಗ ಥಳಿಸಿದ ಪಾಪಿ ಮಗಳು..ಮತ್ತೆ ಏನಾಯ್ತು..?


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page