ಸಿನಿಮಾ: Tulu Times | ಕಾಲ ಬದಲಾದಂತೆ ಟೆಕ್ನಾಲಜಿ ಕೂಡ ಬದಲಾಗುತ್ತಾ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲಂತೂ ಫೋಟೋ, ಸ್ಥಳ, ಊರು, ವ್ಯಕ್ತಿಗಳನ್ನು ಗುರುತೆ ಸಿಗದಂತೆ ಮಾಡಲಾಗುತ್ತಿದೆ. ಕಂಡಿದ್ದೆಲ್ಲವು ನಿಜವೆನೋ ಎಂಬಂತೆ ಎಡಿಟ್ ಮಾಡಲು ಅವಕಾಶ ಇದೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ನಟ ದರ್ಶನ್ ತೂಗುದೀಪ ಭೇಟಿ ಮಾಡಿದರೆ ಹೇಗಿರುತ್ತದೆ ಎಂಬ ಝಲಕ್ ಎಐ ವಿಮೂಲಕ ರಚಿಸಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ನಾನ್ ವೆಜ್ ಪ್ರಿಯರೇ ಬಿರಿಯಾನಿ ತಿನ್ನುವ ಮುನ್ನ ಯೋಚಿಸಿ….!
ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ನನ್ನು ನೋಡಲು ಸ್ಟಾರ್ ನಟರು ಹೋದರೆ ಹೇಗಿರುತ್ತದೆ. ಹೀಗೊಂದು ಕಲ್ಪನೆಯಡಿ ಎಐ ತಂತ್ರಜ್ಞಾನ, ನಟ ಪೋಟೋ ಬಳಸಿ ಕಾಲ್ಪನಿಕ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಫುಲ್ ಖಷಿಯಾಗಿದ್ದಾರೆ.
ಇದನ್ನೂ ಓದಿ: ವಿಶ್ವದ ಅತೀ ಎತ್ತರದ ರಾಮನ ಮೂರ್ತಿ ಅನಾವರಣ…!
ಇನ್ಸ್ಟಾಗ್ರಾಂ ನ true_kannada_media ಹ್ಯಾಂಡಲ್‌ನಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ನಟ ದರ್ಶನ್ ಅವರು ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಾಣಿಸಿದ್ದಾರೆ.
ಜೈಲಿನಲ್ಲಿರುವ ಒಬ್ಬ ಖೈದಿಯನ್ನು ಭೇಟಿ ಮಾಡಲು ಫ್ರೆಂಡ್ಸ್ ಹೋದರೆ ಏನೆಲ್ಲ ಆಗುತ್ತದೆ. ಅವರಲ್ಲರೂ ಒಟ್ಟಿಗೆ ಹೇಗೆ ಸೇರಬಹುದು ಎಂಬ ಕಲ್ಪನೆಯನ್ನು ಇಲ್ಲಿ ಎಐನಿಂದ ಸೃಷ್ಟಿಸಲಾಗಿದೆ. ಒಂದೇ ದಿನದಲ್ಲಿ 2.74 ಲಕ್ಷ ಲೈಕ್ಸ್‌ಗಳು, ನೂರಾರು ಕಾಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: ಕೋಳಿ ಸಾಕಣೆಗಾಗಿ ಆರ್ಥಿಕ ನೆರವು : ಆಸಕ್ತರು ಅರ್ಜಿ ಸಲ್ಲಿಸಬಹುದು
ಶಿವಣ್ಣ, ಯಶ್ ಮತ್ತು ಸುದೀಪ್ ಅವರು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೆನೋ ಎಂಬಂತೆ ನೈಜ ರೀತಿಯಲ್ಲಿ ವಿಡಿಯೋ ಮೂಡಿ ಬಂದಿದೆ. ಜೈಲಿಗೆ ಭೇಟಿ ನೀಡುತ್ತಿದ್ದಂತೆ ವಿವಿಧ ಹಣ್ಣಗಳ ಚೀಲವನ್ನು ಒಳಗಿನಿಂದ ಜಾಲರಿ ಮೂಲಕ ನಟ ದರ್ಶನ್ ತೆಗೆದುಕೊಳ್ಳುತ್ತಾರೆ. ಕೆಲ ಹೊತ್ತು ನಾಲ್ವರು ನಿಂತು ಮಾತನಾಡುತ್ತಾರೆ. ಜೈಲಿನ ಒಳಗೆ ಕೇರಂ ಬೋರ್ಡ್ ಆಡುವುದು, ಜೈಲಿನ ಒಳಗೆ ಮುದ್ದೆ ಊಟ ಎಲ್ಲರೂ ಕೂಡಿ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.
Actor Shivanna, Yash, Kiccha Sudeep met Darshan in jail….Video Viral!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











