ಕೆಎಸ್ ಆರ್ ಟಿಸಿ : Tulu Times | ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ಸಾರಿಗೆ ಸಂಸ್ಥೆ. ಬೆಂಗಳೂರಿನಿಂದ ಆರಂಭಿಸಿ ರಾಜ್ಯದ ಎಲ್ಲ ಜಿಲ್ಲೆಗಳು, ತಾಲ್ಲೂಕುಗಳು, ಗ್ರಾಮಗಳಿಗೆ ಮಾತ್ರವಲ್ಲದೆ ನೆರೆಯ ರಾಜ್ಯಗಳಿಗೂ ಬಸ್ ಸೇವೆಗಳನ್ನು ಒದಗಿಸುತ್ತದೆ. ಬೇಕಾದ ಜಾಗಕ್ಕೆ ಬೇಕಾದ ಸಮಯದಲ್ಲಿ ಗ್ರಾಮೀಣ ಜನರನ್ನು ನಗರಕ್ಕೆ ಹಾಗೂ ನಗರದಿಂದ ಗ್ರಾಮ ಭಾಗಕ್ಕೆ ಬಸ್ ಗಳು ಸಂಚಾರ ನಡೆಸುತ್ತವೆ.
ತಿರುಪತಿ ದೇವರಲ್ಲಿಗೆ ಭಕ್ತರು ಹೆಚ್ಚಾಗಿ ಹೋಗುವ ಸಮಯ ಇದಾಗಿದ್ದು, ಬಸ್ ಗಳ ಸಮಯದಲ್ಲಿ ಹೊಂದಾಣಿಕೆ ಮಾಡಬೇಕು ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಿಂದ ಈಗಾಗಲೇ ಬೆಂಗಳೂರಿನಿಂದ ತಿರುಪತಿಗೆ ಸಾರಿಗೆ ಬಸ್ಗಳು ಇದ್ದರೂ, ಇವು ಸಾಕಾಗುತ್ತಿಲ್ಲ. ಹಬ್ಬಗಳು, ವಾರಾಂತ್ಯ ಹಾಗೂ ಉತ್ಸವದಂತಹ ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರು ಹಾಗೂ ವಿವಿಧ ಭಾಗದ ಪ್ರಯಾಣಿಕರು ಖಾಸಗಿ ಬಸ್ ಅವಲಂಬಿಸುವಂತಾಗಿದೆ. ಸುರಕ್ಷತೆ ದೃಷ್ಟಿಯಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಬಸ್ಗಳ ಕಾರ್ಯಾಚರಣೆಗೆ ಪ್ರಯಾಣಿಕರು ಕರ್ನಾಟಕ ಸಾರಿಗೆ ಇಲಾಖೆಗೆ ಒತ್ತಾಯ ಮಾಡಿದ್ದಾರೆ.
ಬೆಂಗಳೂರಿನಿಂದ ಚಿಂತಾಮಣಿ ಮೂಲಕ ಮದನಪಲ್ಲಿಗೆ, ಬೆಂಗಳೂರಿನಿಂದ ಯಲಹಂಕ, ಚಿಂತಾಮಣಿ ಮೂಲಕ ತಿರುಪತಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸುಗಳು ತೀರಾ ಕಡಿಮೆ ಇದೆ. ಈ ಮಾರ್ಗವಾಗಿ ದಿನನಿತ್ಯ ಮತ್ತು ವಾರಾಂತ್ಯ ಹಾಗೂ ಹಬ್ಬ-ಹರಿದಿನಗಳ ಸಂದರ್ಭದಲ್ಲಿ KSRTC ಬಸ್ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿ ಪ್ರಯಾಣಿಕರು ಅನುಭವಿಸುವ ಸಮಸ್ಯೆ ಪರಿಗಣಿಸುವಂತೆ ಪ್ರಯಾಣಿಕರು ಒತ್ತಾಯಿಸಲಾಗಿದೆ.
Passengers request for an increase in KSRTC buses from Bengaluru to Tirupati – ತುಳು ಟೈಮ್ಸ್
ಇದನ್ನೂ ಓದಿ :ಮಂಗಳೂರು ಲಾಂಗ್ ಡ್ರೈವ್ನಿಂದ ಉಗ್ರಂ ಮಂಜು ಲವ್ ಶುರುವಾಯ್ತು..!
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zt875dd88R8?si=QHY–Io8ABkjlznX











