ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಮಂಗಳೂರು ಲಾಂಗ್ ಡ್ರೈವ್‌ನಿಂದ ಉಗ್ರಂ ಮಂಜು ಲವ್‌ ಶುರುವಾಯ್ತು..!

ಬಿಗ್ ಬಾಸ್: Tulu Times | ಬಿಗ್ ಬಾಸ್ ಕನ್ನಡ 12ಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ. ಮನೆಯ ಒಳಗಡೆ ಎಂಟ್ರಿ ಆದಂತಹ ಸ್ಪರ್ಧಿಗಳು ಮನೆಯವರೆಲ್ಲರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ ಅವರ ಜೊತೆಗೆ ವಿಭಿನ್ನವಾದ ಅಂತಹ ಟಾಸ್ಕ್ಗಳನ್ನು ಮಾಡಿಸುತ್ತಿದ್ದಾರೆ. ಬಿಗ್ ಬಾಸ್ ಪ್ಯಾಲೇಸ್ಗೆ ಎಂಟ್ರಿ ಆದಂತಹ ಎಲ್ಲಾ ಮಾಜಿ ಸ್ಪರ್ಧಿಗಳು, ಗಿಲ್ಲಿ ನಟನ ಮೇಲೆ ಹೆಚ್ಚಾಗಿ ತಮ್ಮ ವಾಗ್ವಾದವನ್ನು ನಡೆಸುತ್ತಿದ್ದಾರೆ.

ಇನ್ನು ಅತಿ ಶೀಘ್ರದಲ್ಲಿ ಉಗ್ರಂ ಮಂಜು ಅವರ ಮದುವೆ ನಡೆಯಲಿದೆ ಅದರಲ್ಲೂ ಇತ್ತೀಚಿಗೆ ಅವರ ಎಂಗೇಜ್ಮೆಂಟ್ ಕೂಡ ನಡೆದಿದೆ ಹೀಗಾಗಿ ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ ಅದರಲ್ಲಿ ಉಗ್ರಂ ಮಂಜು ಕೂಡ ಇದ್ದಾರೆ ಇವರ ಬ್ಯಾಚುಲರ್ ಪಾರ್ಟಿಯನ್ನು ಬಿಗ್ ಬಾಸ್ ಆಯೋಜನೆ ಮಾಡಿದ್ದಾರೆ. ಹೀಗಾಗಿ ಮನೆಯವರೆಲ್ಲರೂ ಕೂಡ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಬ್ಯಾಚುಲರ್ ಪಾರ್ಟಿಯನ್ನು ಆಯೋಜನೆ ಮಾಡಲು ಅನುವು ಮಾಡಿಕೊಟ್ಟಿದೆ.

ಉಗ್ರ ಮಂಜು ಅವರಿಗೆ ಬಿಗ್ ಬಾಸ್ ಮಾತನಾಡಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ಮಂಜು ಎದುರು ಬಂದು ಕುಳಿತು ತನ್ನ ನಿಶ್ಚಿತಾರ್ಥದ ಬಗ್ಗೆ ಮಾತನಾಡಿಕೊಂಡಿದ್ದಾರೆ ಪ್ರೀತಿ ಹೇಗೆ ಶುರುವಾಯಿತು ಅನ್ನೋದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಓಪನ್ ಆಗಿ ಮಾತನಾಡಿದ್ದಾರೆ.

ಕಳೆದ ಸೀಸನ್‌ನಲ್ಲಿ ಉಗ್ರಂ ಮಂಜು ಮದುವೆ ಬಗ್ಗೆ ಅವರ ತಂದೆ-ತಾಯಿಗೆ ಕಿಚ್ಚ ಸುದೀಪ್ ಬಿಗ್‌ ಬಾಸ್  ವೇದಿಕೆ ಮೇಲೆ ಕೇಳಿದ್ದರು. ಇದೀಗ 12ನೇ ಸೀಸನ್‌ಗೆ ಮುಗಿಯುವುದರೊಳಗೆ ಉಗ್ರಂ ಮಂಜು ನಿಶ್ಚಿತಾರ್ಥ ನಡೆದಿದೆ. ಇನ್ನು ಕಳೆದ ಎಪಿಸೋಡ್‌ ನಲ್ಲಿ ಬಿಗ್‌ ಬಾಸ್ ಉಗ್ರಂ ಮಂಜು ಲವ್ ಸ್ಟೋರಿ ಕೇಳುವುದಕ್ಕೆ ಒಂದು ಸೆಟಪ್  ಮಾಡಲಾಗಿತ್ತು.  ಈ ವೇಳೆ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಸಿ, ಗೆಳತಿಯೊಂದಿಗೆ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗ ಚಿಗುರಿದ ಪ್ರೀತಿ ಬಗ್ಗೆ ಉಗ್ರಂ ಮಂಜು ಹೇಳಿಕೊಂಡಿದ್ದಾರೆ.

ಇನ್ನು ಬಿಗ್‌ ಬಾಸ್‌ ರೆಡಿ ಮಾಡಿದ ಸೆಟಪ್‌ ನಲ್ಲಿ  ಉಗ್ರಂ ಮಂಜು ಹಾಗೂ ಅವರ ಭಾವಿ ಪತ್ನಿ ಸಾಯಿ ಪಲ್ಲವಿಯವರ ಫೋಟೋಗಳನ್ನು ನೇತು ಬಿಡಲಾಗಿತ್ತು. ಅವುಗಳ ಮಧ್ಯೆ ಉಗ್ರಂ ಮಂಜು ಹಾಗೂ ಅವರ ಲವ್ ಸ್ಟೋರಿ ಲಾಂಗ್ ಡ್ರೈವ್‌ನಿಂದ ಶುರು ಮಾಡಿತ್ತುಅನ್ನೋದನ್ನು ಹೇಳಿಕೊಂಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಎಲ್ಲಾ ಕರ್ನಾಟಕದ ತಾಯಿಯಂದಿರ ಪ್ರೀತಿ, ನಮ್ಮ ತಂದೆ-ತಾಯಿ ಪ್ರೀತಿ ಇವತ್ತು ನಮಗೆ ಸಿಕ್ಕಿರೋದು. ಸಾಯಿ ಸಂಧ್ಯಾ.. ನಾನು ಮಾಡಿರುವ ಅದೃಷ್ಟನೋ, ನನ್ನ ತಂದೆ-ತಾಯಿ ಮಾಡಿರುವಂತಹ ಪುಣ್ಯನೋ.. ಎಂದು ತನ್ನ ಭಾವಿ ಪತ್ನಿ ಬಗ್ಗೆ ಭಾವುಕರಾಗಿ ಹೇಳಿಕೊಂಡಿದ್ದಾರೆ.

Ugram Manju Love started with a long drive to Mangalore..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page