ಕ್ರಿಕೆಟ್ : Tulu Times | ಅಂಧ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ ತಿಳಿಸಲು ಪ್ರಧಾನ ಮಂತ್ರಿ ಮೋದಿ ಆಗಮಿಸಿದ್ದರು. ಕ್ರಿಕೆಟ್ ಸರಣಿಯಲ್ಲಿ ಅಂಧ ಮಹಿಳೆಯರು ಅಜೇಯರಾಗಿ ಉಳಿದಿರುವುದು ಹೆಚ್ಚು ಶ್ಲಾಘನೀಯ. ಇದು ನಿಜಕ್ಕೂ ಐತಿಹಾಸಿಕ ಕ್ರೀಡಾ ಸಾಧನೆ, ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢಸಂಕಲ್ಪದ ಉಜ್ವಲ ಉದಾಹರಣೆ. ಪ್ರತಿಯೊಬ್ಬ ಆಟಗಾರನೂ ಚಾಂಪಿಯನ್. ತಂಡವು ಅವರ ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಅಂಧ ಮಹಿಳೆಯರ ತಂಡವನ್ನು ಹಾಡಿ ಹೊಗಳಿದರು.
ವಾರದ ಆರಂಭದಲ್ಲಿ ನೇಪಾಳವನ್ನು ಸೋಲಿಸಿ ಅಂಧರ ಮೊದಲ ಟಿ20 ವಿಶ್ವಕಪ್ ಗೆದ್ದ ನಂತರ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡವನ್ನು ಪ್ರಧಾನಿ ಮೋದಿ ಇಂದು ಭೇಟಿಯಾಗಿದ್ದು, ಪ್ರಧಾನಿ ಮೋದಿ ಅವರಿಗೆ ಆಟಗಾರ್ತಿಯರು ಸಹಿ ಹಾಕಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ತಂಡದ ಜೊತೆ ಖುಷಿಯಿಂದ ಫೋಟೋ ತೆಗೆಸಿಕೊಂಡು, ಅಂಧ ಮಹಿಳೆಯರ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
Narendra Modi praises blind women’s cricket team – ತುಳು ಟೈಮ್ಸ್
ಇದನ್ನೂ ಓದಿ :‘ಅಪ್ಪ’ ಅರೆಭಾಷೆ ನಾಟಕದ ಮೊದಲ ಪ್ರದರ್ಶನಕ್ಕೆ ಚಾಲನೆ….!
=======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/XB6d0r1sbnY?si=j9Wb0a_OmgkdFIQs











