Kantara chapter1 ಸಿನಿಮಾ ಬಿಡುಗಡೆಯಾಗಿ ಭಾರಿ ಸಕ್ಸಸ್ ಕಾಣ್ತಿದೆ.ಕಲೆಕ್ಷನ್ ವಿಷಯದಲ್ಲಿ ಕಾಂತಾರ ದಾಖಲೆಯ ಮೇಲೆ ದಾಖಲೆ ಬರೀತಿದೆ.ಭಾರತ ಮಾತ್ರವಲ್ಲದೆ ಹೊರದೇಶಗಳಲ್ಲೂ ಈ ಸಿನಿಮಾಕ್ಕೆ ಅದ್ಬುತ ರೆಸ್ಪಾನ್ಸ್ ಸಿಗ್ತಿದೆ.500 ಕೋಟಿ ಕಲೆಕ್ಷನ್ ಧಾಟಿ ಕಾಂತಾರ ಚಾಪ್ಟರ್ 1 ಸಿನಿಮಾ ಮುನ್ನುಗ್ತಿದೆ.ಕಲೆಕ್ಷನ್ ಹಣ ಲೆಕ್ಕ ಮಾಡ್ತಿರೋ ಚಿತ್ರತಂಡಕ್ಕೆ ದೈವಾರಾಧಕರ ವಿರೋಧ ಕೂಡ ಜೋರಾಗಿ ತಟ್ತದೆ.ರಿಷಬ್ ಶೆಟ್ಟಿ ನಿರ್ದೇಶಿಸಿರೋ ಕಾಂತಾರ ಸಿನಿಮಾದಲ್ಲಿ ದೈವಾರಾಧನೆಗೆ ಅಪಚಾರವಾಗಿದೆ ಎಂಬ ಮಾತುಗಳು ಕೇಳಿ ಬರ್ತಿವೆ.ದೈವರಾಧನೆಗೆ ಆಗಿರುವ ಅಪಚಾರವನ್ನು ಖಂಡಿಸಿ ಪ್ರತಿಭಟನೆಗಳು ಜೋರಾಗ್ತಿವೆ.ಅದರಲ್ಲೂ ಸಿನಿಮಾ ನೋಡಿದ ಹಲವು ಮಂದಿ ಮೈಮೇಲೆ ದೈವ ಬಂದಂತೆ ನರ್ತಿಸಿರೋದು ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.ಸಿನಿಮಾ ಮನರಂಜನಾ ಮಾಧ್ಯಮ.ಈ ಮಾಧ್ಯಮದಲ್ಲಿ ದೈವವನ್ನು ತೋರಿಸಿರುವ ರೀತಿಗೂ ಆಕ್ರೋಶ ವ್ಯಕ್ತವಾಗ್ತಿದೆ.
ರಿಷಬ್ ಶೆಟ್ಚಿ ದೈವದ ಪಾತ್ರದಲ್ಲಿ ಕಾಣಿಸ್ಕೊಂಡಿದ್ದು ಸರಿಯಲ್ಲ ಅನ್ನುವವರು ಇದ್ದಾರೆ.
ಹಲವೆಡೆ ದೈವಾರಾಧಕರು ದೈವದ ಮೊರೆ ಹೋಗಿದ್ದಾರೆ.ದೈವಸ್ಥಾನಗಲ್ಲಿ ಪ್ರಾರ್ಥನೆ ಮಾಡಿ ತಮ್ಮ ನೋವನ್ನು ದೈವದ ಮುಂದಿಡುತ್ತಿದ್ದಾರೆ.
ತುಳುನಾಡಿನಲ್ಲಿ ದೈವಾರಾಧನೆಗೆ ವಿಶಿಷ್ಟವಾದ ಗೌರವವಿದೆ.ಅದ್ರ ಜೊತೆ ಪಾವಿತ್ರ್ಯತೆ ಇದೆ.ಇವೆಲ್ಲವನ್ನೂ ಕಾಂತಾರ ಸಿನಿಮಾದಲ್ಲಿ ಹಾಳು ಮಾಡಲಾಗಿದೆ ಎಂಬ ಅಭಿಪ್ರಾಯ ಕೇಳಿ ಬರ್ತಿದೆ.ಇನ್ನೂ ಹಲವಾರು ವಿದ್ವಾಂಸರು ಸಿನಿಮಾವನ್ನು ಮೆಚ್ಚಿಕೊಂಡು ಕೂಡ ಮಾತಾಡಿದ್ದಾರೆ.
ಅಪಚಾರ ಮಾಡಿದವ್ರಿಗೆ ಹುಚ್ಚು ಹಿಡಿಸ್ತೇನೆ.ದೈವದ ಹೆಸರಲ್ಲಿ ಹಣ ಮಾಡಿದವ್ರನ್ನೂ ಆಸ್ಪತ್ರೆಗೆ ಸೇರಿಸ್ತೇನೆ ಎಂದು ದೈವ ನುಡಿ ಕೊಟ್ಟಿದೆ ಎಂಬ ಮಾತು ಸಖತ್ ವೈರಲ್ ಆಗ್ತಿದೆ.ಇದನ್ನೂ ಮೊದಲ ಚಿತ್ರದ ದೈವ ಮಾತಾಡಿದ್ದ ದೈವ ನರ್ತಕ ಮಾತಾಡಿದ್ದ ಎಂಬ ಸ್ಟೇಟ್ ಮೆಂಟ್ ಗಳೊಂದಿ ಚರ್ಚಿಸಲಾಗ್ತಿದೆ.ಕಾಂತಾರ ಬಂದಮೇಲೆ ತುಳುನಾಡಿನಲ್ಲಿ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.ಈ ಪರಿಯಲ್ಲಿ ಸಿನಿಮಾವೊಂದು ಚರ್ಚೆಗೆ ಈಡಾಗ್ತಿರೋದು ಇದೇ ಮೊದಲು ಅಂತಾನೂ ಹೇಳಲಾಗ್ತಿದೆ.
ಸಿನಿಮಾ ವಿವಾದವಾಗಲಿ ಏನೇ ಆದರೂ ಪ್ರಚಾರದ ಭಾಗವಾಗಿ ನೋಡುವ ಸಿನಿಮಾಮಂದಿಗೆ ಭರ್ಜರಿ ಕಲೆಕ್ಷನ್ ಆಗ್ತಿದೆ.ಇನ್ನಷ್ಚೂ ಕೋಟಿ ಹಣವನ್ನು ಸಿನಿಮಾದ ವಿವಾದ ಚಿತ್ರತಂಡಕ್ಕೆ ತಂದು ಕೊಡಲಿದೆ.
ಕಾಂತಾರ ಸಿನಿಮಾ ಹಣ ಗಳಿಸುತ್ತಿರುವ ಪರಿಯಿಂದ ಇಷ್ಟೊಂದು ವಿವಾದವಾಗ್ತಿದೆ. ಅನ್ನೋ ಮಾತು ಕೇಳಿ ಬರ್ತಿದೆ.ಸಿನಿಮಾ ರಿಲೀಸ್ ಆದಂದಿನಿಂದ ಕಾಂತಾರದ ವಿವಾದ ಮುಂದುವರಿಯುತ್ತಲೇ ಇದೆ.ಅದೇನೆ ಇದ್ರೂ ನಿರ್ಮಾಪಕರು ಹಣ ಗಳಿಸಿದ್ದಾಗಿದೆ.ರಿಷಬ್ ಶೆಟ್ಟಿ ಮತ್ತೊಂದು ದೊಡ್ಡ ಸಕ್ಸಸ್ ಕೊಟ್ಟಿದ್ದಾರೆ.ಸಾಮಾಜಿಕ ಚರ್ಚೆಗಳಿಂದ ವಿಮರ್ಶೆಗಳಿಂದ ಸಿನಿಮಾಕ್ಕೆ ಯಾವುದೇ ಎಫೆಕ್ಟ್ ಬೀಳುವುದಕ್ಕೆ ಸಾಧ್ಯವೇ ಇಲ್ಲ.ದಿನದಿಂದ ದಿನಕ್ಕೆ ಕಲೆಕ್ಷನ್ ಲಿಸ್ಟ್ ದೊಡ್ಡದಾಗಿ ಸಾಗ್ತಿರೋ ಕಾಂತಾರ ಇನ್ನಷ್ಟೂ ರೆಕಾರ್ಡ್ ಬ್ರೇಕ್ ಮಾಡಿ ದಾಖಲೆ ಮಾಡೋ ಸೂಚನೆ ಸ್ಪಷ್ಟವಾಗಿ ಸಿಗ್ತಿದೆ.
ಇದನ್ನೂ ಓದಿ:Bigboss ಬೀಗಕ್ಕೂ ನನಗೂ ಸಂಬಂಧವಿಲ್ಲ-ಡಿ.ಕೆ ಶಿವಕುಮಾರ್
………………………………………………………………………………………………………………………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











