ಸಿನಿಮಾ: Tulu Times | ನಟಿ ಮೇಘನಾ ರಾಜ್ ಎರಡನೇಯ ಮದುವೆ ಆಗ್ತಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಾ ಇದ್ದಾರೆ, ಇದೀಗ ಮೇಘನಾ ರಾಜ್ ತಂದೆ ಸುಂದರ್ ರಾಜ್ ತನ್ನ ಮಗಳ ಮದುವೆಯ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿದ್ದಾರೆ.
ನಟಿ ಮೇಘನಾ ರಾಜ್ ಮದ್ವೆಯಾಗಿ ಎರಡು ವರ್ಷಕ್ಕೆ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ, ಅಕಾಲಿಕ ಹೃದಯಾಘಾತದಿಂದ ಗಂಡನನ್ನು ಕಳೆದುಕೊಂಡ ಸಮಯದಲ್ಲಿ ತನ್ನ ಹೊಟ್ಟೆಯಲ್ಲಿ ಪುಟಾಣಿ ಮಗುವಿತ್ತು. ಪ್ರೀತಿಸಿ ಮದುವೆಯಾದ ಪತಿ ಇನ್ನಿಲ್ಲವೆನ್ನುವ ನೋವು, ಇನ್ನೊಂದು ಕಡೆ ಮಗುವಿನ ಆಗಮನದ ಖುಷಿಯಲ್ಲಿದ್ದ ಮೇಘನಾರ ಮನಸ್ಸಿಗೆ ಬರಸಿಡಿಲಿನಂತೆ ಬಂದು ಅಪ್ಪಳಿಸಿತ್ತು.
ಇದೀಗ ನಟಿ ಮೇಘನಾ ರಾಜ್ ಚಿತ್ರರಂಗಕ್ಕೆ ವಾಪಾಸಾಗಿದ್ದಾರೆ. ಗಂಡನನ್ನು ಕಳೆದುಕೊಂಡ ಮೇಘನಾ ಬದುಕು ನಿಜಕ್ಕೂ ಕಷ್ಟಕರವಾಗಿತ್ತು. ಮಾನಸಿಕವಾಗಿ ಸಾಕಷ್ಟು ಚಾಲೆಂಜ್ ಗಳನ್ನು ಎದುರಿಸಿಕೊಂಡು ಬಂದ ಮೇಘನಾ ರಾಜ್ ಇವೆಲ್ಲವನ್ನೂ ಮೆಟ್ಟಿ ನಿಂತಿದ್ದಾರೆ. ಮಗ ರಾಯನ್‌ಗೋಸ್ಕರ ಅವರು ಗಟ್ಟಿಯಾಗಿ ನಿಂತಿದ್ದಾರೆ. ಯಾರು ಏನೇ ಹೇಳಿದರೂ ಚಿರು ಸದಾ ತನ್ನ ಮನಸ್ಸಿನಲ್ಲಿ ಜೀವಂತವಾಗಿರುತ್ತಾರೆ ಎನ್ನುತ್ತಾರೆ ನಟಿ ಮೇಘನಾ ರಾಜ್.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತೀ ದಿನ ಮೇಘನಾ ರಾಜ್ ಎರಡನೇ ಮದುವೆಯ ಬಗ್ಗೆ ಗುಸುಗುಸು ಇದ್ದೇ ಇರುತ್ತದೆ. ಸೋಷಿಯಲ್ ಆಗಿ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಇದಕ್ಕೆಲ್ಲ ಮೇಘನಾ ರಾಜ್ ತಂದೆ ಸುಂದರ್ ರಾಜ್ ಉತ್ತರಿಸಿದ್ದು, ಮೈನಸ್ ಇದ್ದಾಗ ಪ್ಲಸ್ ಮಾಡಿಕೊಳ್ಳಿ ಎಂದು ನಾನು ಹೇಳುತ್ತೇನೆ. ಮೇಘನಾ ರಾಜ್ ಮದುವೆಯಾದ ಎರಡು ವರ್ಷಕ್ಕೆ ಚಿರು ತೀರಿಕೊಂಡಿದ್ದಾನೆ. ಮೇಘನಾಗೆ ಅಷ್ಟು ವಯಸ್ಸು ಆಗಿಲ್ಲ. ಅವಳ ವಯಸ್ಸಿನ ಕೆಲವರು ಇನ್ನೂ ಮದುವೆಯೇ ಆಗಿಲ್ಲ. ಮದುವೆ ಎನ್ನುವುದು ಪವಿತ್ರ ಸಂಬಂಧ. ಇನ್ನೊಂದು ಮದುವೆ ಆದವನು ರಾಯನ್ ನನ್ನು ಮಗ ಅಂತ ನೋಡುತ್ತಾನೆ ಎನ್ನುವ ಪ್ರಶ್ನೆ ಬರುತ್ತದೆ. ನನಗೆ ರಾಯನ್ ಮೊಮ್ಮಗ ಆ ಭಾವನೆ ಬೇರೆ ಇರುತ್ತದೆ ಎಂದು ಹೇಳಿದ್ದಾರೆ.
ನಟಿ ಮೇಘನಾ ಮದುವೆ ಆದವನು ಇನ್ನೊಂದು ಮಗು ಬೇಕು ಅಂತ ಬಯಸುತ್ತಾನೆ. ಆಗ ಆ ಮಗು ಕೂಡ ಗಂಡು ಆದರೆ ಹೇಗೆ? ಹೆಣ್ಣಾದರೆ ಹೇಗೆ ನೋಡಬಹುದು? ಎನ್ನುವ ಪ್ರಶ್ನೆ ಬರುತ್ತದೆ. ಇದೆಲ್ಲವೂ ತಿಳಿದುಕೊಂಡಷ್ಟು ಸುಲಭ ಇಲ್ಲ. ಇದನ್ನು ನಾನು ಮೇಘನಾಗೆ ಬಿಡುತ್ತೇನೆ. ಇದು ಅವಳ ನಿರ್ಧಾರ ಎಂದು ಹೇಳಿದ್ದಾರೆ. ಇನ್ನು ಈ ಕುರಿತು ನಟಿ ಮೇಘನಾ, ನನ್ನ ಮಗನಿಗೆ ಅಪ್ಪ ಇದ್ದಾನೆ, ಚಿರಂಜೀವಿ ಮನಸ್ಸು ಮಾಡಿದಾಗ, ಅವರು ಬಯಸಿದಾಗ ನಾನು ಮದುವೆ ಆಗ್ತಿನಿ. ನನ್ನ ಎರಡನೇ ಮದುವೆ ಆಗೋ ನಿರ್ಧಾರ ಚಿರು ಕೈಯಲ್ಲಿದೆ ಎಂದು ಹೇಳಿದ್ದರು.
What does Sundar Raj have to say about actress Meghana Raj’s second marriage? – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











