ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಧಾರ್ಮಿಕಬೆಳ್ತಂಗಡಿ

ಉಜಿರೆಯ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಪವಾಡಗಳು ಅಚ್ಚರಿ ಮೂಡಿಸುತ್ತೆ..!

ಸುರ್ಯ: Tulu Times | ದಕ್ಷಿಣ ಕನ್ನಡದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಈ ಸಾಲಿನಲ್ಲಿ ಉಜಿರೆ ಸಮೀಪದ ಸದಾಶಿವ ರುದ್ರ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ತನ್ನದೇ ಆದಂತಹ ಇತಿಹಾಸ ಹೊಂದಿದೆ. ಈ ದೇವಸ್ಥಾನದ ಹಿನ್ನೆಲೆಯ ಬಗ್ಗೆ ಈ ಸ್ಟೋರಿಯಲ್ಲಿ ಕಂಪ್ಲೀಟ್‌ ಆಗಿ ಓದೋಣ..

ಉಜಿರೆಯ ಸಮೀಪದಲ್ಲಿರುವ ಸದಾಶಿವ ರುದ್ರ ದೇವಸ್ಥಾನಕ್ಕೆ ಸಾಧಾರಣ ನೂರು ವರ್ಷಗಳ ಬಹಳ ದೊಡ್ಡ ಇತಿಹಾಸವೇ ಇದೆ. ಇಲ್ಲಿಗೆ ಭಕ್ತರು ಬಂದು ಮಣ್ಣಿನಿಂದ ಮಾಡಿದಂತಹ ವಸ್ತುಗಳನ್ನು ಹರಕೆ ನೀಡುತ್ತಾರೆ. ಇಷ್ಟಾರ್ಥಗಳನ್ನು ಸಿದ್ಧಿಸುವ  ಈ ದೇವಾಲಯದ ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ನಾವೆಲ್ಲ ತಿಳಿದುಕೊಳ್ಳಲೇಬೇಕು.

ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ದೇವಾಲಯ ತನ್ನ ಇತಿಹಾಸವನ್ನು ಹೊಂದಿದೆ. ಇಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಮಾತ್ರ ಹರಕೆಯನ್ನು ಕಟ್ಟಲಾಗುತ್ತದೆ. ಭಕ್ತರ ಇಷ್ಟಾರ್ಥಗಳು ಇಲ್ಲಿ ಈಡೇರುತ್ತದೆ ಎನ್ನುವಂತಹ ನಂಬಿಕೆ ಇದೆ. ಈ ದೇವಾಲಯವನ್ನು ಹರಕೆಯ ದೇವಾಲಯ ಅಂತಾನೂ ಕರೆಯುತ್ತಾರೆ. ಬೆಳ್ತಂಗಡಿ ತಾಲೂಕಿನ ಸುಂದರ ಪ್ರಕೃತಿಯ ನಡುವೆ ಸುರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ಸದಾಶಿವ ರುದ್ರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವೇ ಇದ್ದು, ಧರ್ಮಸ್ಥಳಕ್ಕೆ ನೀವು ಬಂದ್ರೆ ಈ ಸ್ಥಳಕ್ಕೆ ಭೇಟಿ ನೀಡಬಹುದು.

ಪೌರಾಣಿಕ ಕಥೆಯೇನು ಗೊತ್ತಾ..?

ಸದಾಶಿವ ರುದ್ರ ದೇವಸ್ಥಾನದ ಪೌರಾಣಿಕ ಕಥೆಯನ್ನು ನೋಡುವುದಾದರೆ, ಒಂದು ಕಾಲದಲ್ಲಿ ಸೂರ್ಯ ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಗೃಹಿಣಿ ಒಬ್ಬಳು ವಾಸವಿರುತ್ತಾಳೆ. ಆಕೆ ಸೊಪ್ಪು ತರಲು ಕಾಡಿಗೆ ಹೋದಾಗ ತನ್ನ ಬಳಿ ಇದ್ದಂತಹ ಕುಡುಗೋಲಿನಿಂದ ಸೊಪ್ಪನ್ನು ಕಡಿಯಲು ಆರಂಭಿಸುತ್ತಾಳೆ. ಈ ಸಂದರ್ಭದಲ್ಲಿ ಸೊಪ್ಪಿನ ಮಧ್ಯೆ ಇದ್ದಂತಹ ಶಿವಲಿಂಗವನ್ನು ಹೋಲುವಂತಹ ಒಂದು ಶಿಲೆ ಸಿಗುತ್ತದೆ. ಆಕೆ ತನಗೆ ಅರಿವಿಲ್ಲದಂತೆ ತನ್ನ ಕುಡುಗೋಲಿನಿಂದ ಆ ಶಿಲೆಗೆ ರಭಸವಾಗಿ ಬೀಸುತ್ತಾಳೆ. ಆಗ ಆ ಏಟಿಗೆ ಲಿಂಗ ರೂಪಿಯಾದಂತಹ ಶಿಲೆಯಿಂದ ರಕ್ತವು ಹೊರಬರುತ್ತದೆ. ಅದನ್ನು ನೋಡಿದ ಆಕೆ ಗಾಬರಿಯಾಗುತ್ತಾಳೆ. ಜೋರಾಗಿ ತನ್ನ ಮಗನನ್ನು ಕರೆಯುತ್ತಾರೆ. ಆ ಕಾರಣದಿಂದ ಈ ಕ್ಷೇತ್ರಕ್ಕೆ ಸುರ್ಯ ಎನ್ನುವಂತಹ ಹೆಸರು ಬಂದಿದೆ. ಹೀಗಾಗಿ ಅಲ್ಲಿ ಸಿಕ್ಕಂತಹ ಈ ಒಂದು ಶಿಲೆಯನ್ನು ತಂದು ದೇವಾಲಯ ನಿರ್ಮಾಣ ಮಾಡಿದ್ದಾರೆ ಎನ್ನುವಂತಹ ನಂಬಿಕೆ ಇದೆ.

ಮಣ್ಣಿನ ವಸ್ತುವನ್ನು ಇಲ್ಲಿ ಹರಕೆ ಕಟ್ಟೋದ್ಯಾಕೆ..?

ಇನ್ನು ಋಷಿಮುನಿಗಳಿಗೆ ಸಂಬಂಧಿಸಿದಂತಹ ಒಂದು ಕಥೆ ಕೂಡ ಇದೆ. ಈ ದೇವಾಲಯದ ಬಳಿಯಲ್ಲಿಯೇ ಅರಣ್ಯ ಪ್ರದೇಶ ಕೂಡ ಇರುತ್ತೆ, ಅಲ್ಲಿ ದೇವರ ಅನುಗ್ರಹವನ್ನು ಪಡೆದಿದ್ದ ಮಹರ್ಷಿಗಳ ಶಿಷ್ಯ ವರ್ಗವು ಅಲ್ಲಿಗೆ ಬರುತ್ತೆ. ಅವರಿಗೆ ಅಲ್ಲಿಯೇ ತಪಸ್ಸು ಮಾಡಬೇಕು ಎನ್ನುವಂತಹ ಆಸೆ ಇರುತ್ತದೆ. ಆಗ ಹಿರಿಯ ಶಿಷ್ಯರೊಬ್ಬರು ಶಿವ ಪಾರ್ವತಿಯನ್ನು ಕುರಿತು ಗಾಢವಾದಂತಹ ತಪಸ್ಸನ್ನು ಮಾಡುತ್ತಾರೆ. ಆಗ ಅವರ ತಪಸ್ಸಿಗೆ ಮೆಚ್ಚಿದ ಶಿವ ಪಾರ್ವತಿಯರು ಪ್ರತ್ಯಕ್ಷವಾಗುತ್ತಾರೆ. ಶಿಷ್ಯನನ್ನು ಕುರಿತು ಶಿವ ನಿನಗೆ ಏನು ವರ ಬೇಕು ಅಂತ ಕೇಳಿದಾಗ ಆ ಶಿಷ್ಯರು ಶಿವ ಪಾರ್ವತಿಯನ್ನು ಕುರಿತು ದಯಮಾಡಿ ನೀವು ಇದೇ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ನೆಲೆಸಬೇಕು.. ಇಲ್ಲಿ ಬರುವಂತಹ ಭಕ್ತರ ಕಷ್ಟಗಳನ್ನು ಪರಿಹರಿಸಬೇಕು ಎಂದು ಬೇಡಿಕೊಳ್ಳುತ್ತಾರೆ. ಆ ದಿನದಿಂದ ಇಲ್ಲಿಯವರೆಗೆ ಇಲ್ಲಿಗೆ ಭಕ್ತರು ಹರಕೆಯನ್ನು ನೀಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಆಗಮಿಸುತ್ತಾರೆ.

The miracles of the Surya Sadashiva Rudra Temple in Ujire are astonishing..! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page