ಕರ್ನಾಟಕ: Tulu Times | ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದೆ.
22 ಕ್ಯಾರಟ್ ಚಿನ್ನದ ಬೆಲೆ 11,725 ರೂನಿಂದ 11,710 ರೂಗೆ ಕಡಿಮೆ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 12,775 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮುಂತಾದೆಡೆ 173 ರೂಗೆ ಏರಿಕೆ ಕಂಡಿದೆ. ಚೆನ್ನೈ ಮೊದಲಾಡೆದೆ ಬೆಲೆ 180 ರೂ ಇದೆ.
ಇದನ್ನೂ ಓದಿ: ದಟ್ಟವಾದ ಮಂಜು..ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ವಿಳಂಬ!
ಭಾರತದಲ್ಲಿ ಹೇಗಿದೆ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ…?
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರೆಟ್ ಚಿನ್ನದ ಬೆಲೆ 1,17,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,300 ರುಪಾಯಿ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,17,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 17,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಕೆಲವೆಡೆ ಈ ಲೋಹದ ಬೆಲೆ 18,000 ರೂ ಇದೆ. ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಅಲ್ಪ ಇಳಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್ಗೆ 15 ರೂ ತಗ್ಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಹಾಗೆಯೇ ಸ್ಥಿರ ಇದೆ. ಬೆಳ್ಳಿ ಬೆಲೆ 4 ರೂ ಏರಿದೆ. ನಿನ್ನೆಯೂ ಕೂಡ ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದೆ. ಎರಡು ದಿನದಲ್ಲಿ ಗ್ರಾಮ್ಗೆ 6 ರೂ ಏರಿದೆ.
ನವೆಂಬರ್ 27ಕ್ಕೆ ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,775 ರೂ, 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,710 ರೂ, 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,581 ರೂ, ಬೆಳ್ಳಿ ಬೆಲೆ 1 ಗ್ರಾಂಗೆ: 173 ರೂ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ: 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,775 ರೂ, 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,710 ರೂ, ಬೆಳ್ಳಿ ಬೆಲೆ 1 ಗ್ರಾಂಗೆ: 173 ರೂ. ವಿವಿಧ ನಗರಗಳಲ್ಲಿ 1 ಗ್ರಾಮ್ಗೆ 22 ಕ್ಯಾರಟ್ ಚಿನ್ನದ ಬೆಲೆಗೆ: ಬೆಂಗಳೂರು: 11,710 ರೂ, ಚೆನ್ನೈ: 11,770 ರೂ
ಮುಂಬೈ: 11,710 ರೂ, ದೆಹಲಿ: 11,725 ರೂ, ಕೋಲ್ಕತಾ: 11,710 ರೂ, ಕೇರಳ: 11,710 ರೂ ಆಗಿದೆ.
Gold prices drop sharply today, silver prices rise! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











