ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನಾನು ನಂದಿನಿ-ಸಂಜಿತ್ ಹೆಗ್ಡೆ ಸಖತ್ ಫನ್ ಸಾಂಗ್..ವೈರಲ್‌ !

ಕರ್ನಾಟಕ: Tulu Times | ನಾನು ನಂದಿನಿ ಬೆಂಗ್ಳೂರಿಗ್‌ ಬಂದೀನಿ ಅನ್ನೋ ಸಾಂಗ್‌ ಮೂಲಕ ಖ್ಯಾತಿ ಗಳಿಸಿದ ವಿಕಾಸ್‌ ಹಾಗೂ ಸಂಜಿತ್ ಹೆಗಡೆ ಒಟ್ಟಿಗೆ ಸೇರಿಕೊಂಡು ಫನ್ನಿ ವೀಡಿಯೋ ಮಾಡುವುದರ ಮೂಲಕ ವೈರಲ್‌ ಆಗುತ್ತಿದ್ದಾರೆ.

ನಂದಿನಿ-ಸಂಜಿತ್ ಹೆಗಡೆ ಕೊಲ್ಯಾಬರೇಷನ್‌ ವೀಡಿಯೋ ಸಾಂಗ್‌ ನೋಡಿದವರು ಕಾಮೆಂಟ್ಸ್‌ ಮಾಡುತ್ತಿದ್ದಾರೆ.  ನಾನು ನಂದಿನಿ’ ಎಂದು  ಫೇಮಸ್ ಆದವರು ವಿಕ್ಕಿ ಪೀಡಿಯಾ,  ಹಾಡು ಎಲ್ಲರ ಗಮನ ಸೆಳೆದಿತ್ತು. ಈಗ ಸಂಜಿತ್ ಹೆಗಡೆ  ಜೊತೆ ಕೊಲ್ಯಾಬರೇಷನ್ ಮಾಡಿಕೊಂಡು ವೀಡಿಯೋ ಸಾಂಗ್‌ ಒಂದನ್ನು ಮಾಡಿದ್ದಾರೆ.  ‘ನೀ ನಂಗೆ ಅಲ್ಲವ..’  ಎಂಬ ಹಾಡಿಗೆ ಹೊಸ ‌ಟಚ್  ಕೊಟ್ಟು ಹಾಡನ್ನು ರಚಿಸಿದ್ದಾರೆ.

ಇದನ್ನೂ ಓದಿ: ವೈರಲ್ ಆಗ್ತಿದೆ ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಸಹೋದರನ‌ ಇನ್ಸ್ಟಾಗ್ರಾಮ್ ಪೋಸ್ಟ್

ನಿಮಗೆಲ್ಲ ಗೊತ್ತಿರೋ ಹಾಗೆ, ವಿಕ್ಕಿಪೀಡಿಯಾ ಕಂಟೆಂಟ್​ಗಳು ಗಮನ ಸೆಳೆಯುವ ರೀತಿಯಲ್ಲಿ ಇರುತ್ತವೆ. ಫನ್​ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ.  ನೀ ನಂಗೆ ಅಲ್ಲವ..’  ಎಂಬ  ಹಾಡನ್ನು ಮಾಡಿರೋದಕ್ಕೆ ಒಂದು ರೀಸನ್‌ ಕೂಡ ಇದೆ. ಏನೆಂದರೆ, ನವೆಂಬರ್ 30ರಂದು ಬೆಂಗಳೂರಿನಲ್ಲಿ ಸಂಜಿತ್ ಹೆಗಡೆ ಕಾನ್ಸರ್ಟ್  ಇದೆ. ಇದರ ಪ್ರಮೋಷನ್​​ಗೆ ಸಂಜಿತ್ ಈ ರೀತಿ ಮಾಡಿದ್ದಾರೆ. ನಾಗಾವರದ ಮ್ಯಾನ್​ಪೋ ಕನ್​ವೆನ್ಶನ್ ಸೆಂಟರ್​ನಲ್ಲಿ ಈ ಕಾನ್ಸರ್ಟ್ ನಡೆಯಲಿದ್ದು, 499 ರೂಪಾಯಿಯಿಂದ ಟಿಕೆಟ್ ಆರಂಭವಾಗಿ 5 ಸಾವಿರ ರೂಪಾಯಿವರೆಗೂ ಇದೆ. ಈ ವೀಡಿಯೋ 10 ಗಂಟೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.  ಇನ್ನು ಅಭಿಮಾನಿಗಳು ಈ ಹಾಡನ್ನು ಇಷ್ಟ ಪಟ್ಟಿದ್ದು, ಎಲ್ಲರ ಗಮನ ಸೆಳೆಯಲು ಕಾರಣವಾಗಿದೆ.

ಈ ಹಾಡಿನಲ್ಲಿರುವ ಲೈನ್ಸ್‌ ಬಗ್ಗೆ ನೋಡೋದಾದ್ರೆ, ‘ನನ್ ಜೊತೆ ಡೇಟ್​ಗೆ ಬರ್ತೀಯಾ’ ಎಂದು ಸಂಜಿತ್ ನಂದಿನಿ ಜೊತೆ ಕೇಳ್ತಾರೆ. ಏಕೆ ಎಂಬ ಪ್ರಶ್ನೆ ಎದುರಿನಿಂದ ಬರುತ್ತದೆ. ‘ನೀ ನಂಗೆ ಅಲ್ಲವಾ..’ ರಾಗದಲ್ಲಿ ನೀ ಸಿಂಗಲ್ ಅಲ್ಲವಾ..’ ಅಂತ ಹಾಡುತ್ತಾರೆ. ಸಂಜಿತ್. ಈ ರೀತಿ ಸಾಂಗ್ ಮುಂದುವರಿಯುತ್ತದೆ.  ಇನ್ನು, ವಿಕ್ಕಿ ಪೀಡಿಯಾಗೆ ವಿಕಾಸ್‌  ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 11 ಲಕ್ಷ ಹಿಂಬಾಲಕರು ಇದ್ದಾರೆ.

I am Nandini-Sanjit Hegde’s Sakhat Fun song..viral! – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page