ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಚಳಿಗಾಲದಲ್ಲಿ ಹೆಚ್ಚಿನ ಕಾಫಿ ಸೇವನೆಯಿಂದಾಗುವ ಅಪಾಯ ನೋಡಿ….!

ಚಳಿಗಾಲ : Tulu Times | ಚಳಿಗಾಲದಲ್ಲಿ ದೇಹ ಬಿಸಿಯಾಗಿರಲು ಹೆಚ್ಚಿನ ಜನ ಕಾಫಿಯ ಮೊರೆ ಹೋಗ್ತಾರೆ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಕಾಫಿಯನ್ನೇ ಕುಡಿಯುತ್ತಾರೆ. ಕೆಲವರು ದಿನವಿಡೀ ಕಾಫಿಯನ್ನೇ ಕುಡಿದು ಹೊಟ್ಟೆ ತುಂಬಿಸಿಕೊಳ್ಳುವವರೂ ಇದ್ದಾರೆ. ಹೀಗಿರುವಾಗ ಚಳಿಗಾಲದಲ್ಲಿ ಕಾಫಿ ಸೇವನೆಯಿಂದಾಗುವ ಪ್ರಯೋಜನ ಏನಂದ್ರೆ ; ಕಾಫಿಯಲ್ಲಿರುವ ಕೆಫಿನ್ ರಕ್ತಪ್ರಸರಣೆಯನ್ನು ಹೆಚ್ಚಿಸಿ ದೇಹದ ಒಳಗಿನ ತಾಪಮಾನವನ್ನು ಸ್ವಲ್ಪ ಹೆಚ್ಚಿಸುತ್ತದೆ. ಇದು ಚಳಿಗಾಲದಲ್ಲಿ ಉಷ್ಣತೆ ನೀಡುತ್ತದೆ.

ಚಳಿಗಾಲದಲ್ಲಿ ಸಣ್ಣ ಜ್ವರ ಅಥವಾ ಕಫ ತಪ್ಪಿಸಲು ಸಹಕಾರಿ ;
ಚಳಿಗಾಲದಲ್ಲಿ ನಿದ್ರೆಯು ಬಂದಂತಾಗಿ ಕೆಲಸದಲ್ಲಿ ಉದಾಸೀನ/ಓದಿಕೊಳ್ಳಲು ಮನಸಾಗದ ಸಂದರ್ಭದಲ್ಲಿ ಕಾಫಿ ಮನಸ್ಸನ್ನು ಚುರುಕಾಗಿಸುತ್ತದೆ ಹಾಗೂ ಕೆಲವರಿಗೆ ದೇಹದ ತೂಕ ನಿಯಂತ್ರಣಕ್ಕೂ ಸಹಾಯಕ. ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಗೆ ಸಹಾಯಕವಾಗುತ್ತವೆ ಹಾಗೂ ಚಳಿಗಾಲದಲ್ಲಿ ಸಣ್ಣ ಜ್ವರ ಅಥವಾ ಕಫ ತಪ್ಪಿಸಲು ಸಹಕಾರಿ.

ಇನ್ನು ಅತಿಯಾಗಿ ಕಾಫಿ ಸೇವನೆ ಮಾಡುವವರು ಗಮನಿಸಬೇಕಾದ ವಿಚಾರವೇನೆಂದರೆ ;
ಕಾಫಿ ದೇಹದಲ್ಲಿ ಮೂತ್ರವಿಸರ್ಜನೆ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ನಾವು ಸಾಮಾನ್ಯವಾಗಿ ಕಡಿಮೆ ನೀರು ಕುಡಿಯುವ ಕಾರಣ ದೇಹ ಒಣಗುವ ಸಾಧ್ಯತೆಯಿದೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ಗ್ಯಾಸ್ಟಿಕ್ ಹೆಚ್ಚಾಗಬಹುದು. ಸಂಜೆ ನಂತರ ಕಾಫಿ ಕುಡಿದರೆ ನಿದ್ರೆ ಬರದೇ ಇರಬಹುದು ಹಾಗೂ ಹೈ ಬ್ಲಡ್ ಪ್ರೆಶರ್ ಇರುವವರು ದಿನಕ್ಕೆ 1 ಕಪ್‌ಗೆ ಮಿತಗೊಳಿಸಬೇಕು.

ದಿನದಲ್ಲಿ ಸಾಮಾನ್ಯ ವ್ಯಕ್ತಿಗೆ: 1–2 ಕಪ್ ಕಾಫಿ ಹಾಗೂ ಹೈ BP / ಗ್ಯಾಸ್ಟ್ರಿಕ್ ಇರುವವರಿಗೆ: 1 ಕಪ್ ಕಾಫಿ ಉತ್ತಮ ಎಂದು ಹೇಳಲಾಗಿದೆ. ಜೊತೆಗೆ ಚಳಿಗಾಲದಲ್ಲಿ ಫಿಲ್ಟರ್ ಕಾಫಿ, ಮಿಲ್ಕ್ ಕಾಫಿ (ಕಡಿಮೆ ಸಕ್ಕರೆ), ಜಾಗರಿ (ಬೆಲ್ಲ) ಇರುವ ಕಾಫಿ, ಚಳಿಗಾಲ ವಿಶೇಷ ಶುಂಠಿ/ಅಲಸಿ ಬೀಜ ಎಲ್ಲವೂ ಆರೋಗ್ಯಕ್ಕೂ ಚಳಿಗಾಲದಲ್ಲಿ ಒಳ್ಳೆಯದು. See the dangers of drinking too much coffee in winter – ತುಳು ಟೈಮ್ಸ್

ಇದನ್ನೂ ಓದಿ :ದೂರ ಶಿಕ್ಷಣ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್ ತರಬೇತಿ

==========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=_Yb3Hr4RCzZpF10U

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page