ಕಡಬ – ತುಳು ಟೈಮ್ಸ್: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿವಾಹಿತ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ರಾಕೇಶ್ ಕೆ.ಎಸ್ (36ವರ್ಷ) ಮೃತಪಟ್ಟವರು.
ನ.19ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಬಗ್ಗೆ ಮೃತರ ತಂದೆ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟ್ರುಪ್ಪಾಡಿ ನಿವಾಸಿ ಸೋಲೊಮೊನ್ ಎಂಬವರ ಪುತ್ರ ರಾಕೇಶ್ ಕಳಾರದಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ರಾಕೇಶ್ನ ಪತ್ನಿಯೊಂದಿಗೆ ಆತನ ಗೆಳೆಯನೊಬ್ಬ ಮೊಬೈಲ್ನಲ್ಲಿ ಸಂಪರ್ಕದಲ್ಲಿರುವ ವಿಷಯ ತಿಳಿದ ರಾಕೇಶ್ ತೀವ್ರವಾಗಿ ಬೇಸರಗೊಂಡಿದ್ದರು. ನ.19ರಂದು ಸಂಜೆ, ಕಡಬದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅಲ್ಲಿದ್ದವರು ರಾಕೇಶ್ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಾಕೇಶ್ ನ. 26ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ನ.26 ರಂದು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 35/2025 00:194 (3) (iv) BNS-2023 03 ಪ್ರಕರಣ ದಾಖಲಾಗಿದೆ.
A married man who attempted suicide by consuming poison died after failing treatment. The deceased has been identified as Rakesh K.S. (36 years old), a resident of Ulippu in Kutruppadi village. Tulu Times
ಇದನ್ನೂ ಓದಿ: ಗಿಲ್ಲಿಯ ಅತಿರೇಕತನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಫುಲ್ ಸ್ಟಾಪ್ ಇಡ್ತಾರಾ..?
=====================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











