ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಗಿಲ್ಲಿಯ ಅತಿರೇಕತನಕ್ಕೆ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು ಫುಲ್‌ ಸ್ಟಾಪ್‌ ಇಡ್ತಾರಾ..?

ಬಿಗ್ ಬಾಸ್ : Tulu Times | ಬಿಗ್ ಬಾಸ್ ಸೀಸನ್ 12ರ ಮನೆಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳ ಆಗಮನವಾಗಿದೆ. ಈ ವೇಳೆ ಮಾಜಿ ಸ್ಪರ್ಧಿಗಳು ಗಿಲ್ಲಿ ನಟನ ಮಾತುಗಳಿಂದ ಕಿರಿಕಿರಿಗೊಂಡಿದ್ದು, ಎಲ್ಲಾ ಅತಿಥಿಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.

ಬಿಗ್ ಬಾಸ್‌ ನ ಮಾಜಿ ಸ್ಪರ್ಧಿಗಳಾದ ರಜತ್, ಉಗ್ರಂ ಮಂಜು  ಮನೆಯೊಳಕ್ಕೆ ಗಿಲ್ಲಿಯನ್ನೇ ಪ್ರತಿ ಬಾರಿ ಟೀಕಿಸುತ್ತ ಮಾತನಾಡುತ್ತಿದ್ದಾರೆ. ಮನೆಯ ಆಚೆಯಿಂದ ಬಂದ ಇವರು ಮನೆ ಒಳಗಡೆ ಇರುವಂತಹ ಗಿಲ್ಲಿಯನ್ನು ಸಂಪೂರ್ಣವಾಗಿ ತಿಳಿದು ಮನೆ ಒಳಗಡೆ ಬಂದು ಆತನ ಮಾತುಗಳಿಗೆ ಫುಲ್ ಸ್ಟಾಪ್ ಇಡಲು ನೋಡುತ್ತಿದ್ದಾರೆ. ಆದರೆ ಗಿಲ್ಲಿ ಮಾತು ನಿಲ್ಲಿಸುತ್ತಿಲ್ಲ.. ಅತಿಥಿಗಳು ಗಿಲ್ಲಿಯನ್ನೇ ಮುಖ್ಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ.. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಅಭಿಮಾನಿಗಳಿಂದ ಆಕ್ರೋಶ ಕೂಡ ಕೇಳಿ ಬರುತ್ತಿದೆ.

ಉಗ್ರಂ ಮಂಜು ಅವರ ಮದುವೆಯ ಬ್ಯಾಚುಲರ್ ಪಾರ್ಟಿಯನ್ನು ಬಿಗ್ ಬಾಸ್ ಮನೆಯಲ್ಲಿ ಆಯೋಜಿಸಲಾಗಿತ್ತು. ಮೋಕ್ಷಿತ ಪೈ ಹಾಗೂ ಚೈತ್ರ ಕುಂದಾಪುರ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಅಭಿಮಾನಿಗಳಿಂದ ಆಕ್ರೋಶ ಕೇಳಿ ಬರುತ್ತಿದೆ. ಎಲ್ಲಾ ಸ್ಪರ್ಧಿಗಳು ಹೋಟೆಲ್ ಮ್ಯಾನೇಜ್ಮೆಂಟ್ ಮಾಡುವ ಸೇವಕರನ್ನಾಗಿ ಎಲ್ಲರನ್ನೂ ಕೂಡ ಮಾಡಲಾಗಿದೆ. ಗಿಲ್ಲಿಯನ್ನು ಹೋಟೆಲ್ ಸಪ್ಲೈಯರ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕಾಮಿಡಿಯ ಜೊತೆಗೆ ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಹೇಳುತ್ತಿರುವುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಬೇಸರ ಉಂಟುಮಾಡಿದೆ. ಎಲ್ಲರನ್ನೂ ವಯಕ್ತಿಕವಾಗಿ ನಿಂದಿಸುತ್ತಿರುವುದು ಬಿಗ್ ಬಾಸ್ ಮನೆಯಲ್ಲಿ ಕಂಡು ಬರುತ್ತಿದೆ. ಉಗ್ರಂ ಮಂಜು ಅವರ ಎಂಗೇಜ್ಮೆಂಟ್ ಆಗಿರುವಂತಹ ವಿಚಾರವನ್ನು ತಿಳಿದ ಗಿಲ್ಲಿ ಇದು ಎರಡನೆಯದಾ? ಮೂರನೆಯದಾ? ಅಂತ ಟೀಕೆ ಮಾಡಿ ಹೇಳಿದ್ದಾನೆ. ಇದರಿಂದ ಉಗ್ರ ಮಂಜು ಬೇಸರಗೊಂಡು ವಾಗ್ವಾದ ನಡೆಸಿದ್ದಾರೆ.

ಇನ್ನು ರಜತ್ ಕೂಡ ಗಿಲ್ಲಿ ನಟನ ಮೇಲೆ ಕೋಪದಿಂದ ಮಾತನಾಡುತ್ತಾರೆ. ಗಿಲ್ಲಿಯ ಮಾತು ಕೇಳಿಕೊಂಡು ರಜತ್‌ ಗೆ ಕಿರಿಕಿರಿ  ಆಗಿದೆ. ನೀನು ಮಾತನಾಡಲೇ ಬೇಡ ಅಂತ ರಜತ್  ರಿಕ್ವೆಸ್ಟ್ ಮಾಡಿದ್ದಾರೆ. ಆದರೂ ಕೂಡ ಗಿಲ್ಲಿ ಅನಾವಶ್ಯಕವಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಿಲ್ಲಿ ನಟ ಮೊದಲೇ ಬಾಯಿಗೆ ಫಿಲ್ಟರ್ ಇಲ್ಲದೆ ಬೇರೊಬ್ಬರಿಗೆ ನೋವಾಗುತ್ತದೆ ಎಂಬುದನ್ನು ಆಲೋಚನೆ ಮಾಡದೇ ಇರುವುದನ್ನು ನೇರವಾಗಿ ಕಾಮಿಡಿ ಮಾಡುತ್ತಲೇ ಮಾತನಾಡಿ ಬಿಡುತ್ತಾನೆ. ಹೀಗಾಗಿ ಕಿಚ್ಚನ ಪಂಚಾಯಿತಿಯಲ್ಲಿ ಈ ವಿಚಾರ ಮುನ್ನಲೆಗೆ ಬರುವಂತಹ ಸಾಧ್ಯತೆ ಇದೆ.

Will the former Bigg Boss contestants put a stop to Ghilli’s excesses? – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page