ಬಿಗ್ ಬಾಸ್ : Tulu Times | ಬಿಗ್ ಬಾಸ್ 12 ರಲ್ಲಿ ವಿಶೇಷವಾಗಿ ಪ್ರೇಕ್ಷಕರಲ್ಲಿ ಅಭಿಪ್ರಾಯ ಬದಲಾಗುವಂತೆ ದಿನದಿಂದ ದಿನಕ್ಕೆ ಎಪಿಸೋಡ್ ಗಳು ಒಂದಕ್ಕಿಂದ ಒಂದು ಚೆನ್ನಾಗಿ ಮೂಡಿ ಬರ್ತಾ ಇದೆ. ಈ ಮಧ್ಯೆ ಬಿಗ್ ಬಾಸ್ ಸ್ಪರ್ಧಿ ಕಾವ್ಯ ಶೈವ ರವರ ಸಹೋದರ ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋದು ಗಮನಿಸಿರಬಹುದು.
ಕಾವ್ಯ ಶೈವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ;
ಹೌದು…! ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಕಾವ್ಯ ಶೈವ ಸ್ಪರ್ಧಿಸುತ್ತಿದ್ದಾರೆ. ಆರಂಭದಲ್ಲಿ ಗಿಲ್ಲಿ ನಟ – ಕಾವ್ಯ ಶೈವ ಕಾಂಬಿನೇಶನ್ ಚೆನ್ನಾಗಿ ವರ್ಕೌಟ್ ಆಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಕಾವ್ಯ ಶೈವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಅಂಶಗಳನ್ನ ಹಬ್ಬಿಸಲಾಗುತ್ತಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿರುವ ಕಾವ್ಯ ಶೈವ ತಮ್ಮ ಕಾರ್ತಿಕ್ ಸಾಮಾಜಿಕ ಜಾಲತಾಣದ ಮೂಲಕವೇ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಉತ್ತರ ನೀಡಿದ್ದಾರೆ.
ಜನರ ಅಭಿಪ್ರಾಯಗಳು ಅವರಿಷ್ಟದಂತೆ ಬರಲಿ, ನನ್ನ ತನವನ್ನ ನಾನು ಕಾಪಾಡ್ಕೋತೀನಿ ಅಂತ ಯಾವುದೇ ಪಿಆರ್ ಟೀಮ್ ಇಟ್ಟುಕೊಳ್ಳದೆ ಕಾವ್ಯ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾಳೆ. ಅವಳ ಕುಟುಂಬ, ಸ್ನೇಹಿತರು, ಸಂಬಂಧಿಕರು, ಬೆಂಬಲಿಗರು ಮುಖ್ಯವಾಗಿ ಕರುನಾಡಿನ ನಿಷ್ಕಲ್ಮಶ ಜನತಾ ಜನಾರ್ಧನ ಅವಳ ಜೊತೆ ನಿಂತಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಧನ್ಯವಾದ’’ ಎಂದು ಕಾವ್ಯ ರವರ ಸಹೋದರ ಕಾರ್ತಿಕ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಹೀಗೆ ಮೊದಲು ಸಾಪ್ಟ್ ಆಗಿ ಹೇಳಿ, ನಂತರ ಬಿಗ್ ಬಾಸ್ ಶುರುವಾಗಿ 50 ದಿನ ಆಗಿದೆ. ಇನ್ನೂ ನೋಡೋಕೆ ತುಂಬಾ ಇದೆ. ಈಗಲೇ ನೀವು ಈ ರೇಂಜಿಗೆ ನೆಗೆಟಿವಿಟಿ ಸ್ಪ್ರೆಡ್ ಮಾಡ್ತಿದ್ದೀರಾ ಅಂದ್ರೆ ಯಾವ ರೇಂಜಿಗೆ ಭಯ ಹುಟ್ಟಿಸಿರಬಾರದು ನಮ್ಮ ಕಾವು ಎಲ್ಲಾ ಪಿಆರ್ ಟೀಮ್‌ಗಳಿಗೆ ಅಂತ. ಒಳ್ಳೆ ಟಫ್ ಕಾಂಪಿಟೇಟರ್ ಅಲ್ವಾ.. ಈಗಲೇ ತುಳಿದು ಹಾಕೋಣ ಅಂತ.. ಅವೆಲ್ಲಾ ನಡೆಯಲ್ಲ.! ಇನ್ನೂ ನೋಡೋಕೆ ತುಂಬಾ ಇದೆ. ಜಾಸ್ತಿ ಮಾತಾಡೋಕೆ ಹೋಗಲ್ಲ. ನೆಗೆಟಿವಿಟಿ ಸ್ಪ್ರೆಡ್ ಮಾಡ್ತಿರೋರಿಗೆ ಒಂದು ಮಾತು ಹೇಳೋಕೆ ಇಷ್ಟ ಪಡ್ತೇನೆ.. ಫಿನಾಲೆ ಟೈಮ್‌ನಲ್ಲಿ ಸುದೀಪ್ ಸರ್ ಒಂದು ಕೈಯಲ್ಲಿ ಕಾವ್ಯ ಇದ್ದೇ ಇರುತ್ತಾಳೆ. ಬರೆದಿಟ್ಟುಕೊಳ್ಳಿ ಎಂದಿದ್ದಾರೆ.
Bigg Boss contestant Kavya’s brother’s Instagram post goes viral – ತುಳು ಟೈಮ್ಸ್
ಇದನ್ನೂ ಓದಿ :2030 ರ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ಐತಿಹಾಸಿಕ 100 ರ ಸಂಭ್ರಮೋತ್ಸವ…!
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=_Yb3Hr4RCzZpF10U











