ಬೆಂಗಳೂರು : Tulu Times | ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗಳ ಮನ ಪರಿವರ್ತನೆ ಮಾಡಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ, ಆರೋಪಿಗಳ ಆತಿಥ್ಯ ತಾಣವಾಗಿ ಕಂಡಿರುವ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿರುವಾಗ ಸ್ಪೋಟಕ ಮಾಹಿತಿಯೊಂದು ಹೊರ ಚೆಲ್ಲಿದ್ದು, ಆರೋಪಿಗಳು ಮದ್ಯ ಸೇವಿಸುತ್ತಾ, ಜೈಲಿನಲ್ಲಿಯೇ ಸ್ವತಃ ಮದ್ಯ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಬಯಲಾಗಿದೆ.
ಮದ್ಯ ಸರಬರಾಜು ಆಗಿಲ್ಲ ;
ಪರಪ್ಪನ ಅಗ್ರಹಾರ ಜೈಲಿನ 7ನೇ ಬ್ಯಾರಕ್ನಲ್ಲಿ ಡಿಸೆಂಬರ್ 31ರಂದು ನಡೆದಿದೆ ಎನ್ನಲಾದ ಎಣ್ಣೆ ಪಾರ್ಟಿಯ ತನಿಖೆಗೆ ಇಳಿದಿದ್ದ ಪೊಲೀಸರಿಗೆ ಹೊರಗಿನಿಂದ ಮದ್ಯ ಸರಬರಾಜು ಆಗಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಜೈಲಿನ ಒಳಗಡೆಯೇ ಮದ್ಯ ತಯಾರಿಸಲಾಗ್ತಿದ್ಯಾ ಎಂಬ ಅನುಮಾನದಿಂದ ತನಿಖೆಗೆ ಇಳಿದಾಗ ಶಾಕ್ ಎದುರಾಗಿದೆ. ಕಳ್ಳಬಟ್ಟಿ ಕೇಸ್ನಲ್ಲಿ ಜೈಲು ಸೇರಿರೋ ಆರೋಪಿಗಳು ಜೈಲಲ್ಲಿ ಸಿಗುವ ಐಟಂಗಳನ್ನೇ ಬಳಸಿ ಮದ್ಯ ತಯಾರಿಸುತ್ತಿದ್ದು, ಜೈಲಿನಲ್ಲೇ ಲಿಕ್ಕರ್ ತಯಾರಿಕೆಗೆ ಎರಡು ಟೀಂ ಇರೋದು ಗೊತ್ತಾಗಿದೆ. ಒಂದು ಟೀಂ ಕೊಳೆತ ಸೇಬು, ದ್ರಾಕ್ಷಿ, ಸೇರಿದಂತೆ ರಾಶಿ ರಾಶಿ ಹಣ್ಣುಗಳು,ಚಕ್ಕೆ, ಗೋಧಿ,ಸಕ್ಕರೆ ಸಂಗ್ರಹ ಮಾಡ್ತಿತ್ತು. ಮತ್ತೊಂದು ಟೀಂ ಜೈಲಿನ ಬೇಕರಿಯಲ್ಲಿ ಬಳಸುವ ಈಸ್ಟ್ ತೆಗೆದುಕೊಂಡು ಬರ್ತಿತ್ತು. ಈ ಎರಡು ಟೀಂ ತಂದ ಐಟಂಗಳನ್ನ ಮಿಕ್ಸ್ ಮಾಡಿ ಪಾತ್ರೆಯಲ್ಲಿ ಹಾಕಿ ಜೈಲಿನ ಮೂಲೆಯಲ್ಲಿ ತಿಂಗಳುಗಟ್ಟಲೆ ಇಟ್ಟು ಎಣ್ಣೆ ತಯಾರು ಮಾಡಲಾಗ್ತಿತ್ತು.
ಪಾರ್ಟಿ ಮಾಡಬೇಕು ಅಂದಾಗ ಪಾತ್ರೆಲಿದ್ದ ಐಟಂನ ಚೆನ್ನಾಗಿ ಹಿಂಡಿ ವಾಟರ್ ಬಾಟಲ್ಗೆ ತುಂಬಿಸಲಾಗ್ತಿತ್ತು. ಈ ಬಗ್ಗೆ ವಿಷಯ ಗೊತ್ತಿದ್ದರೂ ಕೈದಿಗಳಿಂದ ಹಣ ಪಡೆದು ಜೈಲಾಧಿಕಾರಿಗಲು ಸೈಲೆಂಟ್ ಆಗಿದ್ರಾ ಎಂಬ ಅನುಮಾನ ತನಿಖಾಧಿಕಾರಿಗಳನ್ನ ಕಾಡಿದೆ. ಇಷ್ಟು ಆರಾಮದಾಯಕವಾಗಿರುವ ಶಿಕ್ಷಿತ ಅಪರಾಧಿಗಳ ಸ್ವಾತಂತ್ರ್ಯವನ್ನು ನೋಡಿದ್ರೆ ಯಾರಿಗಾದ್ರೂ ನಾಚಿಕೆ ಆಗ್ಬೋದು. ಹೊರಗಿರುವ ಸಾರ್ವಜನಿಕರಿಗೂ ಹೀಗೆ ಒಳಗೆ ಪಾರ್ಟಿ ಮಾಡುವ ಆರೋಪಿಗಳಿಗೂ ವ್ಯತ್ಯಾಸವನ್ನೇ ನೀಡದಂತೆ ಇಷ್ಟೊಂದು ಆರಾಮದಾಯಕವಾಗಿ ಇರೋದಂದ್ರೆ ಏನರ್ಥ…? ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ. What are the liquor preparations and parties that take place at Parappana Agrahara? – ತುಳು ಟೈಮ್ಸ್
ಇದನ್ನೂ ಓದಿ :ತಿರುಪತಿ ದೇವಸ್ಥಾನಕ್ಕೆ ರೂ.9 ಕೋಟಿ ದೇಣಿಗೆ…!
=========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/emwzylibjoc?si=_Yb3Hr4RCzZpF10U











