ಸಿನೆಮಾ : Tulu Times | ಸಲ್ಮಾನ್ ಖಾನ್ ಹೊಸ ಸಿನಿಮಾ ‘ಬ್ಯಾಟಲ್ ಆಫ್ ಗಲ್ವಾನ್’ ರಿಲೀಸ್ ಡೇಟ್ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ಗಳು ಲುಕ್ ರಿಲೀಸ್ ಆಗಿವೆ. ಈ ಹೊಸ ಅವತಾರದಲ್ಲಿ ಸಲ್ಮಾನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದು 2020ರ ಗಲ್ವಾನ್ ಕಣಿವೆಯ ಘಟನೆಯನ್ನು ಆಧರಿಸಿದ ಸಿನಿಮಾ.
ಚಿತ್ರವು ಭಾರತೀಯ ಸೈನಿಕರ ಶೌರ್ಯದ ಕಥೆ ಹೇಳಲಿದೆ. ಅಪೂರ್ವ ಲಖಿಯಾ ಆಕ್ಷನ್-ಕಟ್ ಹೇಳಿದ್ದರು ಕರ್ನಲ್ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ. ಹೀಗಿರುವಾಗಲೇ ಕನ್ನಡದಲ್ಲಿ ಸದ್ದು ಮಾಡಲು ತಯಾರಾಗುತ್ತಿರುವ ಯಶ್ ನಟನೆಯ ಟಾಕ್ಸಿಕ್ ಸಿನೆಮಾದ ರಿಲೀಸ್ ಡೇಟ್ ಮೇಲೆ ಸಲ್ಮಾನ್ ಖಾನ್ ಸಿನೆಮಾವು ಕಣ್ಣಿಟ್ಟಿದೆ ಎಂದು ಕೆಲ ಸುದ್ದಿಗಳು ಹರಿದಾಡುತ್ತಿವೆ.
ಟಾಕ್ಸಿಕ್’ ಸಿನಿಮಾದಲ್ಲಿ ಅನೇಕ ಪರಭಾಷಾ ಕಲಾವಿದರು ಬಣ್ಣ ಹಚ್ಚಿದ್ದಾರೆ. ಹೀಗಿರುವಾಗ ಹೊಸ ವರ್ಷದಲ್ಲಿ ಹಿಟ್ ಆಗಲು ಹೊರಟಿರುವ ಚಿತ್ರಗಳಲ್ಲಿ ಯಶ್ ನಟನೆಯ ಸಿನೆಮಾ ಮೇಲೆ ನಿರೀಕ್ಷೆಗಳು ಹೆಚ್ಚು ಇದೆ ಎಂದರೆ ತಪ್ಪಾಗಲಾರದು. ಈ ನಡುವೆ ನಟ ಯಶ್ ಹಾಗೂ ನಟಿ ಕಿಯಾರಾ AI ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಟಾಕ್ಸಿಕ್ ಚಿತ್ರವು ಮುಂಬೈನಲ್ಲಿ ಕಂಪ್ಲೀಟ್ ಆಗಿದ್ದು, ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ. ಅದರಂತೆ ಬೆಂಗಳೂರಿನಲ್ಲಿ ಇದರ ಉಳಿದ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಮಲಯಾಳಂನ ನಿರ್ದೇಶಕರು ನಿರ್ದೇಶಿಸುತ್ತಿರುವ ಯಶ್ ನಟಿಸಿರುವ ಟಾಕ್ಸಿಕ್ ಚಲನಚಿತ್ರವು 2026 ರ ಮಾರ್ಚ್ ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. Kiara ‘Toxic’ with actor Yash: AI photo goes viral – ತುಳು ಟೈಮ್ಸ್
ಇದನ್ನೂ ಓದಿ :ನಿಮ್ಮ ವ್ಯಕ್ತಿತ್ವದ ಬಗ್ಗೆ ನಿಮಗಷ್ಟೇ ತಿಳಿದಿರೋದು..ಚಿಂತೆ ಯಾಕೆ? ಹ್ಯಾಪಿ ಆಗಿರಿ!
===========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/fsDB1Bql7n8?si=beZF1Mj-FLeZj6uF











