ಬೆಂಗಳೂರು: Tulu Times | ತಂತ್ರಜ್ಞಾನ ಅನ್ನೋದು ಒಮ್ಮೆ ಕೈ ಕೊಟ್ಟರೆ ದಿನವಿಡೀ ಪರದಾಟ ಇದ್ದೇ ಇರುತ್ತದೆ. ಅದೇ ರೀತಿ ಇಂದು ಗೂಗಲ್ ಮೀಟ್ ಬಳಸುವ ಮಂದಿ ಸರ್ವರ್ ಡೌನ್ ಸಮಸ್ಯೆಯಿಂದ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಭಾರತದಾದ್ಯಂತ ‘ಗೂಗಲ್ ಮೀಟ್’ ಸರ್ವರ್ ಡೌನ್ ಆಗಿ ಬಳಕೆದಾರರ ಪರದಾಡಿದ್ದಾರೆ. ಇಂದು ಭಾರತದ ಅನೇಕ ಬಳಕೆದಾರರಿಗೆ ಸ್ಥಗಿತಗೊಂಡಿತ್ತು. ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್ ಸಭೆಗಳಿಗೆ ಸೇರುವಾಗ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಐಟಿ ಇನ್ನಿತರ ಆಫೀಸುಗಳಲ್ಲಿ ಕೆಲಸ ಮಾಡಲು ಗೂಗಲ್ ಮೀಟ್ ಅನಿವಾರ್ಯವಾಗಿರುತ್ತದೆ . ವರ್ಕ್ ಫ್ರಂ ಹೋಮ್ ಇದ್ದವರಿಗೆ ಗೂಗಲ್ ಮೀಟ್ ಬಹಳ ಮುಖ್ಯ.
ಇದನ್ನೂ ಓದಿ: ವಿಪರೀತ ಚಳಿ ಅಂತ ಅನಿಸ್ತಿದ್ಯಾ..? ಹಾಗಾದ್ರೆ ನಿಮ್ಮ ದಿನಚರಿ ಹೀಗಿರಲಿ..!
ಸ್ಥಗಿತ ಮೇಲ್ವಿಚಾರಣಾ ವೇದಿಕೆ ಡೌನ್‌ಡೆಕ್ಟರ್ ಪ್ರಕಾರ, ಭಾರತದಲ್ಲಿ ಕನಿಷ್ಠ 1,455 ಜನ ಮಧ್ಯಾಹ್ನ 12:20 ರವರೆಗೆ ಗೂಗಲ್ ಮೀಟ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹೆಚ್ಚಿನ ಬಳಕೆದಾರರು ಗೂಗಲ್ ಮೀಟ್ ಸಭೆಗಳಿಗೆ ಸೇರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಆನ್‌ಲೈನ್ ವೀಡಿಯೊ ಕರೆ ಮತ್ತು ಮೀಟಿಂಗ್ ಪ್ಲಾಟ್‌ಫಾರ್ಮ್ ಗೂಗಲ್ ಮೀಟ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ.
ಗೂಗಲ್ ಮೀಟ್ ಮಾಡೋ ಕೆಲಸವೇನು..?
ಗೂಗಲ್ ಮೀಟ್ ಸರ್ವರ್‌ಗಳು ಕರೆಗಳನ್ನು ನಿರ್ವಹಿಸುತ್ತವೆ, ಆದರೆ ಕರೆಗಳು ನೇರವಾಗಿ ಬಳಕೆದಾರರ ನಡುವೆ (ಪೀರ್-ಟು-ಪೀರ್) ನೇರವಾಗಿ ಸಂವಹನ ನಡೆಸಲು ಸಾಧ್ಯವಾಗದಿದ್ದಾಗ ಅವುಗಳನ್ನು ಬಳಸಲಾಗುತ್ತದೆ. ಹೆಚ್ಚಿನ ಸಮಯ, ಕರೆಗಳು ಗೂಗಲ್ ಸರ್ವರ್‌ಗಳ ಮೂಲಕ ಹೋಗುವುದಿಲ್ಲ. ಈ ಸಂದರ್ಭಗಳಲ್ಲಿ, ಕರೆ ಎನ್‌ಕ್ರಿಪ್ಟ್ ಆಗಿರುತ್ತದೆ ಮತ್ತು ಸರ್ವರ್‌ಗಳು ಡೇಟಾವನ್ನು ಡಿಕೋಡ್ ಮಾಡಲು ಸಾಧ್ಯವಿಲ್ಲ.
ಪೀರ್-ಟು-ಪೀರ್ ಸಂಪರ್ಕ ಲಭ್ಯವಿಲ್ಲದಿದ್ದಾಗ ಅಥವಾ ನೆಟ್‌ವರ್ಕ್ ಸೆಟ್ಟಿಂಗ್‌ಗಳಿಂದ ನಿರ್ಬಂಧಿಸಿದಾಗ, Google ರಿಲೇ ಸರ್ವರ್ ನಿಮ್ಮ ಕರೆ ಆಡಿಯೋ ಮತ್ತು ವೀಡಿಯೊವನ್ನು ನಿಮ್ಮ ಮತ್ತು ಇತರ ಬಳಕೆದಾರರ ನಡುವೆ ರವಾನಿಸುತ್ತದೆ. ಗೂಗಲ್ ಮೀಟ್‌ನಲ್ಲಿ ಎಲ್ಲಾ ಡೇಟಾ ಡಿಫಾಲ್ಟ್ ಆಗಿ ಎನ್‌ಕ್ರಿಪ್ಟ್ ಆಗಿರುತ್ತದೆ. Google Meet ಉಚಿತವಾಗಿ ಲಭ್ಯವಿದ್ದರೂ, Google Workspace ಯೋಜನೆಯು ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
Google Meet’s server down..users in trouble!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











