ಆರೋಗ್ಯ : Tulu Times | ಬ್ರೈನ್ ಟ್ಯೂಮರ್ ಎಂದರೆ ಮಸ್ತಿಷ್ಕದಲ್ಲಿ ಕೋಶಗಳು ಅಸಹಜವಾಗಿ ಬೆಳೆಯುವುದರಿಂದ ರೂಪುಗೊಳ್ಳುವ ಗಡ್ಡೆ. ಇದು ಕ್ಯಾನ್ಸರ್ ಆಗಿರುವ ಅಥವಾ ಕ್ಯಾನ್ಸರ್ ಅಲ್ಲದ ಗಡ್ಡೆಯಾಗಿರಬಹುದು. ಕೆಲವೊಮ್ಮೆ ಬ್ರೈನ್ ಟ್ಯೂಮರ್ ಬಹಳ ಗಂಭೀರವಾದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಚಿಕಿತ್ಸೆ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾದರೂ ಸಾವಿಗೆ ಕಾರಣವಾಗಬಹುದು. ಅಲ್ಲದೇ ಬ್ರೈನ್ ಟ್ಯೂಮರ್ ಉಂಟಾದಾಗ ರಾತ್ರಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು. ಆದ್ದರಿಂದ ಈ ಬಗ್ಗೆ ಜಾಗೃತರಾಗಿರಬೇಕು.
ಪ್ರಜ್ಞೆ ಕಳೆದುಕೊಳ್ಳಲು ಸಹ ಕಾರಣವಾಗಬಹುದು ;
ಈ ಗೆಡ್ಡೆಗಳ ಲಕ್ಷಣಗಳು, ಅವು ಎಲ್ಲಿವೆ, ಅವು ಎಷ್ಟು ದೊಡ್ಡದಾಗಿವೆ..? ಅವು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಚಿಕಿತ್ಸೆಯು ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿದ್ರೆಯ ಸಮಯದಲ್ಲಿ ಹಠಾತ್ ಈ ಲಕ್ಷಣ ಕಂಡಬಂದರೆ ಅದು ಬ್ರೈನ್ ಟ್ಯೂಮರ್ ಲಕ್ಷಣವಾಗಿದೆ. ಇದು ತುಂಬಾ ಗಂಭೀರವಾಗಬಹುದು. ಪ್ರಜ್ಞೆ ಕಳೆದುಕೊಳ್ಳಲು ಸಹ ಕಾರಣವಾಗಬಹುದು. ನೀವು ಆಗಾಗ್ಗೆ ಈ ಕೆಳಕಂಡ ಲಕ್ಷಣ ಅನುಭವಿಸುತ್ತಿದ್ದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ.
ನಿದ್ರಾ ಭಂಗವು ಬ್ರೈನ್ ಟ್ಯೂಮರ್ ಲಕ್ಷಣ ;
ತೀವ್ರ ತಲೆನೋವಿನ ಜೊತೆಗೆ ರಾತ್ರಿ ಮಲಗಿದಾಗ ವಾಂತಿ ಮಾಡುವುದು ಸಹ ಬ್ರೈನ್ ಟ್ಯೂಮರ್ ಸಂಕೇತವಾಗಿರಬಹುದು. ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಮಾಡುವುದು ಸಹ ಬ್ರೈನ್ ಟ್ಯೂಮರ್ ಸಂಕೇತವಾಗಿರಬಹುದು. ವಾಸ್ತವವಾಗಿ ಗೆಡ್ಡೆ ಮೆದುಳಿನ ಮೇಲೆ ಬೀರುವ ಒತ್ತಡವು ವಾಂತಿಗೆ ಕಾರಣವಾಗಬಹುದು. ಆಗಾಗ್ಗೆ ನಿದ್ರಾ ಭಂಗವು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು. ಇವುಗಳ ಜೊತೆಗೆ ಆಗಾಗ್ಗೆ ತೀವ್ರ ತಲೆನೋವು, ದೃಷ್ಟಿ ಮಂದವಾಗುವ ಲಕ್ಷಣಗಳು ಕಂಡುಬಂದರೆ, ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. Take care of your health: respond to even small changes – ತುಳು ಟೈಮ್ಸ್
ಇದನ್ನೂ ಓದಿ :ಮಂಗಳೂರಿನಲ್ಲಿ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ !
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi











