ಸುಪ್ರಭಾತ : Tulu Times | ಬೆಳಗ್ಗೆ ಸುಪ್ರಭಾತ ಕೇಳಿಸುವುದು ಬಹಳ ಒಳ್ಳೆಯ ಅಭ್ಯಾಸ ಎಂದು ಹೇಳಬಹುದು. ಇದರಿಂದ ಮನಸ್ಸಿಗೂ ಮತ್ತು ದಿನದ ಆರಂಭಕ್ಕೂ ಹಲವು ಉತ್ತಮ ಪರಿಣಾಮಗಳು ಇರುತ್ತವೆ. ಸುಪ್ರಭಾತ ಮಂತ್ರಗಳು, ದೇವರ ಗೀತೆಗಳು ಅಥವಾ ಮೃದುವಾದ ಸಂಗೀತ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆ. ಹಾಗಾಗಿ ಮುಂಜಾವಿನ ಹೊತ್ತಿನಲ್ಲಿ ನೀವು ಈ ಉತ್ತಮ ಅಭ್ಯಾಸವನ್ನು ತೊಡಗಿಸಿಕೊಂಡರೆ ದಿನಪೂರ್ತಿ ಚಟುವಟಿಕೆಯಿಂದಿರಬಹುದು ಮತ್ತು ಧನಾತ್ಮಕ ಚಿಂತನೆಗಳು ಮನಸ್ಸಿನಲ್ಲಿ ನೆಲೆಯೂರಲು ಸಹಾಯ ಮಾಡುತ್ತದೆ. ಬೆಳಗಿನ ಶಾಂತ ವಾತಾವರಣದಲ್ಲಿ ಇಂತಹ ಗೀತೆಗಳು ಮನಸ್ಸಿನಲ್ಲಿ ಹಾಗೇ ಉಳಿಯುತ್ತವೆ ಕೂಡ..
ಜೀವನ ಜಂಜಾಟ, ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿ :
ಈ ಸುಪ್ರಭಾತಗಳು ಜೀವನ ಜಂಜಾಟ, ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೇ, ಓದು, ಕೆಲಸ ಅಥವಾ ಯೋಗ ಆರಂಭಿಸುವ ಮೊದಲು ಸುಪ್ರಭಾತ ಕೇಳಿದರೆ ಮನಸ್ಸು ಸ್ಟೇಬಲ್ ಆಗಿರುತ್ತದೆ. ಇನ್ನು ಅನೇಕರಿಗೆ ಸುಪ್ರಭಾತ ಗೀತೆಗಳು ಧ್ಯಾನ ಮತ್ತು ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ನೀವು ಈ ಸುಪ್ರಭಾತ ಗಳನ್ನು ಕೇಳಿದರೂ ಉತ್ತಮವೇ. ಅಥವಾ 5–10 ನಿಮಿಷ ಹೇಳಿದರೂ ಹಾಗೂ ನಿಮ್ಮ ಇಷ್ಟಕ್ಕೆ ಅನುಗುಣವಾಗಿ 20–30 ನಿಮಿಷ ಕೇಳಿದರೂ ಇದರ ಪ್ರಭಾವ ಉತ್ತಮವಾಗಿರುತ್ತದೆ.
A good morning routine will keep you energized throughout the day – ತುಳು ಟೈಮ್ಸ್
ಇದನ್ನೂ ಓದಿ :ಇಂದು ಭಾರತದ ಸಂವಿಧಾನ ದಿನ..ಪ್ರಧಾನಿ ನರೇಂದ್ರ ಮೋದಿ ಶುಭಾಶಯ..!
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi











