ಮಲೆಂಗಲ್ಲು – ತುಳು ಟೈಮ್ಸ್ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ 78ನೇ ವರ್ಷದ ಜನ್ಮದಿನದ ಪ್ರಯುಕ್ತ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು.

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸೀಯಾಳ ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ಅರ್ಪಿಸಲಾಯಿತು. ಆ ನಂತರ ಶ್ರೀ ದೇವರ ಪ್ರಸಾದವನ್ನು ಪೂಜ್ಯರಿಗೆ ನೀಡಿ ಆಶೀರ್ವಾದವನ್ನು ಪಡೆದುಕೊಂಡರು.
ಈ ವೇಳೆ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಸದಾನಂದ ಮೇಲಂಟ, ಕೆ. ಚಿದಾನಂದ ರಾವ್, ವಿಠ್ಠಲ್ ಶೆಟ್ಟಿ, ಶಿವಶಂಕರ್ ನಾಯಕ್, ಅರ್ಚಕರಾದ ವಿಜಯ್ ಕುಮಾರ್, ಸದಸ್ಯರು, ಭಕ್ತರು ಸೇರಿದ್ದರು. ಖಾವಂದರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳು ಆಯುರಾರೋಗ್ಯ ಇಮ್ಮಡಿಯಾಗುವಂತೆ ವಿವಿಧ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು.
ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಿರೇಂದ್ರ ಹೆಗ್ಗಡೆಯವರ ಹುಟ್ಟುದಿನದ ಪ್ರಯುಕ್ತ ಭೋಜನ ವ್ಯವಸ್ಥೆಯೂ ಕಲ್ಪಿಸಲಾಗಿತ್ತು.

Devotees offers special Pooja at Malengallu Sri Umamaheshwari Temple on the ocassion of Virendra Heggades Birthday. Tulu Times
ಇದನ್ನೂ ಓದಿ: ನೀವು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಿಸಬೇಕಾ? ಹಾಗಾದ್ರೆ ನಿಮ್ಮ ವ್ಯಕ್ತಿತ್ವ ಹೀಗಿದ್ದರೆ ಚಂದ!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi











