ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

ಪುತ್ತೂರು: ಯುವತಿಯರಿಗೆ ಸಿಹಿಸುದ್ದಿ – ಉಚಿತ ಡ್ರೋನ್‌ ಹಾರಾಟ ತರಬೇತಿ

ಪುತ್ತೂರು – ತುಳು ಟೈಮ್ಸ್‌: ಯುವತಿಯರೇ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. 2025 ವರ್ಷ ಮುಗಿಯುತ್ತಾ ಬಂತು. ನಿಮ್ಮ ಸ್ಕಿಲ್‌ ಅನ್ನು ಇನ್ನೂ ಅಪ್‌ಗ್ರೇಡ್‌ ಮಾಡಿಲ್ವಾ? ಹಾಗಾದ್ರೆ ಇಲ್ಲೊಂದು ಗೋಲ್ಡನ್‌ ಅವಕಾಶ ಇದೆ. ಅದು ಏನಾಂತೀರಾ ಮುಂದೆ ಓದಿ.

ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ಪಳಗುತ್ತಿದ್ದಾರೆ. ಡ್ರೋನ್‌ ಹಾರಾಟದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಉಚಿತವಾಗಿ ಡ್ರೋನ್‌ ಹಾರಿಸುವ ತರಬೇತಿ ಸಿಗಲಿದೆ.

ಹೌದು, ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಪುತ್ತೂರು, ಅರಸ್ ಟ್ರಸ್ಟ್, ಪುತ್ತೂರು ಮತ್ತು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ 12 ದಿನಗಳ ಅವಧಿಯ ಡ್ರೋನ್‌ ಹಾರಿಸುವ ಉಚಿತ ತರಬೇತಿ ಆಯೋಜಿಸಲಾಗಿದೆ. ಡ್ರೋನ್‌ ಹಾರಿಸುವ ಅತ್ಯುನ್ನತ ದರ್ಜೆಯ 12 ದಿನಗಳ ಉಚಿತ ತರಬೇತಿಗೆ ಸಂದರ್ಶನ ದಿನಾಂಕ ನಿಗದಿಯಾಗಿದೆ. ಸಂದರ್ಶನದಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಉಚಿತವಾಗಿ ಡ್ರೋನ್‌ ಹಾರಾಟ ತರಬೇತಿ ಸಿಗಲಿದೆ.

ಇದನ್ನೂ ಓದಿ: ಮಾತೆ ಮೇರಿಯಾದ ಕಾಳಿ ದೇವಿ! ಬೆಚ್ಚಿಬಿದ್ದ ಭಕ್ತರು

ಸಂದರ್ಶನ ದಿನಾಂಕ 1.12.2025ನೇ ಸೋಮವಾರ
ಸ್ಥಳ: ಪುತ್ತೂರು ನೆಲ್ಲಿಕಟ್ಟೆಯ ಒಕ್ಕಲಿಗ ಟ್ರಸ್ಟ್ ಸೌಧದ ಸಭಾಭವನ
ಸಮಯ: ಮುಂಜಾನೆ 10ರಿಂದ

ಯಾರೆಲ್ಲಾ ಸಂದರ್ಶನದಲ್ಲಿ ಭಾಗವಹಿಸಬಹುದು?
ದಕ್ಷಿಣ ಕನ್ನಡ ಜಿಲ್ಲೆಯ 21ರಿಂದ 35 ವರ್ಷಗಳ ವಯಸ್ಸಿನವರು
ಇಂಜಿನಿಯರಿಂಗ್ ಅಥವಾ ಇತರ ಪದವೀಧರರು/ ಪಾಲಿಟೆಕ್ನಿಕ್ ಓದಿದವರು
ಇಂಗ್ಲೀಷ್ ನಲ್ಲಿ ಸಂವಹನ ಮಾಡಬಲ್ಲವರು

ಸಂದರ್ಶನಕ್ಕೆ ಹಾಜರಾಗುವಾಗ ಏನೇನು ತರಬೇಕು?
ಸಂದರ್ಶನಕ್ಕೆ ಬರುವಾಗ ಆಧಾರ್ ಕಾರ್ಡ್ (ಮೂಲಪ್ರತಿ ಮತ್ತು ನಕಲು ಪ್ರತಿ), ಒಂದು ಪಾಸ್ ಪೋರ್ಟ್ ಫೋಟೋ, ಒಂದು ಪ್ರತಿ ವ್ಯಕ್ತಿ ವಿವರ (bio data) ತರಬೇಕು.

ತರಬೇತಿಯ ಪ್ರಯೋಜನ
ಈ ತರಬೇತಿ ಪಡೆದ ಪ್ರಮಾಣೀಕೃತರಿಗೆ ಸ್ವಂತ ಡ್ರೋನ್ ಕೊಂಡುಕೊಂಡು ಹಾರಿಸಲು ಅನುಮತಿ ಇರಲಿದೆ. ರಿಯಾಯಿತಿ ದರದಲ್ಲಿ ಡ್ರೋನ್ ಉಪಕರಣ ದೊರೆಯುತ್ತದೆ. ಸರ್ವೇ ಕಾರ್ಯ, ಪೈಪ್ ಲೈನ್ ಕಾಮಗಾರಿ, ಸಿವಿಲ್ ಕೆಲಸಗಳ ಅನುಷ್ಠಾನ, ಕೃಷಿ ತೋಟಗಳಿಗೆ ಔಷಧಿ ಸಿಂಪಡಣೆ, ವಿದೇಶಗಳಲ್ಲಿ ಉದ್ಯೋಗಾವಕಾಶ ಮುಂತಾದ ಪ್ರಯೋಜನಗಳಿವೆ.

ತರಬೇತಿ ಯಾವಾಗ?
2025ರ ಡಿಸೆಂಬರ್‌ ಎರಡನೇ ವಾರದಲ್ಲಿ ತರಬೇತಿ ನಡೆಯಲಿದೆ. ಆಸಕ್ತ ಮಹಿಳೆಯರು 9448725813 / 8217595631 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

Good news for you young women. A 12-day free drone flying training course has been organized for women in Puttur. – Tulu Times

=============================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page