ಬ್ರೇಕಿಂಗ್ ನ್ಯೂಸ್
ದೇಶಧಾರ್ಮಿಕ

ಮಾತೆ ಮೇರಿಯಾದ ಕಾಳಿ ದೇವಿ! ಬೆಚ್ಚಿಬಿದ್ದ ಭಕ್ತರು

ಮುಂಬೈ – ತುಳು ಟೈಮ್ಸ್:‌ ಕಾಳಿ ದೇವಿಯು ಮಾತೆ ಮೇರಿಯಾದ ಅಚ್ಚರಿಯ ಘಟನೆ ನಡೆದಿದೆ. ಕಾಳಿ ದೇವಿಯ ಮೂರ್ತಿಗೆ ಮಾತೆ ಮೇರಿಯ ಅಲಂಕಾರ ಮಾಡಿರೋದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಂಬೈನ ದೇವಸ್ಥಾನವೊಂದರಲ್ಲಿ ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯನ್ನು ಹೋಲುವಂತೆ ಅಲಂಕರಿಸಿದ್ದು ಭಕ್ತರನ್ನು ಬೆಚ್ಚಿಬೀಳಿಸಿದೆ.

ಮುಂಬೈನ ಚೆಂಬೂರ್-ವಾಶಿ ನಾಕಾ ಪ್ರದೇಶದ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಕಾಳಿ ಮಂದಿರದ ಅರ್ಚಕನನ್ನು ಬಂಧಿಸಲಾಗಿದೆ. ಕೆಲವು ಭಕ್ತರು ದರ್ಶನಕ್ಕಾಗಿ ಬಂದಾಗ, ಕಾಳಿ ದೇವಿಯ ಪ್ರತಿಮೆಯನ್ನು ಮಾತೆ ಮೇರಿಯ ರೂಪದಲ್ಲಿ ಅಲಂಕರಿಸಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಭಕ್ತರು ತಕ್ಷಣವೇ ದೇವಾಲಯದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

ತುಳು ಟೈಮ್ಸ್‌

ಇನ್ನು ಈ ಬೆಳವಣಿಗೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅರ್ಚಕನ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯ ಹಿಂದೂ ಸಂಘಟನೆಗಳು ಸಹ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದೆ. ವಿವಾದ ಜಾಸ್ತಿಯಾಗ್ತಿದ್ದಂತೆ ಪೊಲೀಸರು ದೇವಸ್ಥಾನಕ್ಕೆ ಬಂದು ಅರ್ಚಕನನ್ನು ವಿಚಾರಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಕಾಳಿ ಮಾತೆ ತನ್ನ ಕನಸಿನಲ್ಲಿ ಕಾಣಿಸಿಕೊಂಡಳು ಮತ್ತು ಅವಳು ತನ್ನ ವಿಗ್ರಹವನ್ನು ಮಾತೆ ಮೇರಿಯಂತೆಯೇ ಧರಿಸುವಂತೆ ಆದೇಶಿಸಿದಳು ಎಂದು ಅರ್ಚಕ ಹೇಳಿಕೊಂಡಿದ್ದಾರೆ. ಅರ್ಚಕ ರಮೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Mumbai Kaali Temple Row: In a bizarre incident, a priest dressed a Kaali Mata idol like a statue of Mother Mary holding a child. After spotting the idol in Christian dress, locals moved the police station and filed a case. – Tulutimes

ಇದನ್ನೂ ಓದಿ: ಊಟಕ್ಕೆ ಮೊದಲು ಬಿಸಿನೀರು ಕುಡಿದರೆ ಏನೆಲ್ಲಾ ಪ್ರಯೋಜನಗಳಿವೆ…?


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 23

You cannot copy content of this page