ಉಡುಪಿ : Tulu Times | ಉಡುಪಿಯಲ್ಲಿ “ಲಕ್ಷ ಕಂಠ ಗೀತಾ ಪಾರಾಯಣ” ಕಾರ್ಯಕ್ರಮ ನಡೆಯುತ್ತಿದ್ದು, 1 ಲಕ್ಷ ಭಕ್ತರು ಭಗವದ್ಗೀತಾ ಶ್ಲೋಕಗಳನ್ನು ಒಟ್ಟಿಗೆ ಪಠಿಸುತ್ತಾರೆ. ಮೋದಿ ಕೂಡ ಈ ಪಠಣದಲ್ಲಿ ಭಾಗವಹಿಸಿ ಕೆಲವು ಗೀತಾ ಶ್ಲೋಕಗಳನ್ನು ಪಠಿಸಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಡುಪಿ ಭೇಟಿ ಹಿನ್ನೆಲೆಯಲ್ಲಿ ಉಡುಪಿಯ ಮೂರು ಠಾಣಾ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ನಗರ ಠಾಣೆ, ಮಲ್ಪೆ ಠಾಣೆ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ರಜೆ ಘೋಷಣೆ ಮಾಡಲಾಗಿದ್ದು, ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆಗಳಿಗೆ ರಜೆ ಘೋಷಣೆಯಾಗಿದೆ.
ಅದರಂತೆ, ನವಂಬರ್ 28 ರಂದು ಒಂದು ದಿನಗಳ ಕಾಲ ರಜೆ ಘೋಷಿಸಿರುವ ಉಡುಪಿ ಡಿಸಿ ಸ್ವರೂಪ್ ಅವರು, ಶಾಲಾ ಮಕ್ಕಳ ಸಂಚಾರಕ್ಕೆ ತೊಡಕು ಉಂಟಾಗುವ ಸಾಧ್ಯತೆಯಿರುವ ಕಾರಣ,ರಜೆ ಘೋಷಣೆ ಮಾಡಿದ್ದು, ಸುರಕ್ಷತೆ, ಭದ್ರತೆಯನ್ನು ಪಾಲಿಸುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಎಂದು ತಿಳಿಸಿದ್ದಾರೆ.
ನವೆಂಬರ್ 28ರಂದು ದೆಹಲಿಯಿಂದ ನೇರವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬೆಳಗ್ಗೆ 11:05 ಕ್ಕೆ ಬರಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11:10 ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ.
ಉಡುಪಿ ಸಂಚಾರದಲ್ಲಿ ಭಾರೀ ಬದಲಾವಣೆಯಾಗಲಿದ್ದು, ನವೆಂಬರ್ 28 ರಂದು ನಗರದ ಕೆಲ ಮಾರ್ಗಗಳಲ್ಲಿ ಸಂಚಾರ ನಿಷೇಧ, ಮತ್ತೆ ಕೆಲವು ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ನವೆಂಬರ್ 28 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ. ಮೋದಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಆಧ್ಯಾತ್ಮಿಕ ಪೂಜೆ ನಡೆಸಲಿದ್ದಾರೆ. ಅವರು “ಸ್ವರ್ಣ-ತೀರ್ಥ ಮಂಟಪ” ಮತ್ತು “ಕನಕ-ಕಿಂಡಿ” ಎಂಬ ಮಠದ ನೂತನ ನಿರ್ಮಿತ ಶಾಸನಗಳನ್ನು ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯಿದೆ.
Holiday declared for schools in Udupi on Nov 28 – ತುಳು ಟೈಮ್ಸ್
ಇದನ್ನೂ ಓದಿ : ದಕ್ಷಿಣ ಕನ್ನಡದಲ್ಲಿ ಆನೆ ಕಾರ್ಯಪಡೆ ರಚಿಸಲು ಚಿಂತನೆ..!
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/vP8AxRv2LkY?si=4XOMoeXx6QkKD_wi











