ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೇವಲ ಮೂರು ದಿನದ ಹಸುಗೂಸನ್ನು ಕೊಲೆಗೈದ ಕ್ರೂರಿ ತಾಯಿ

ಬೆಳಗಾವಿ – ತುಳು ಟೈಮ್ಸ್‌: ತಾಯಿಯೊಬ್ಬಳು 3 ದಿನದ ಹಸುಗೂಸನ್ನು ಕೊಲೆಗೈದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ಘಟನೆ ನಡೆದಿದೆ. ತನ್ನ ನಾಲ್ಕನೇ ಮಗುವು ಹೆಣ್ಣು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಳೆ.

ಅಶ್ವಿನಿ ಹಳಕಟ್ಟಿ ಕೊಲೆ ಮಾಡಿದ ಮಗುವಿನ ತಾಯಿ. ಹಿರೇಮುಲಂಗಿ ಮೂಲದ ಅಶ್ವಿನಿ ಹಳಕಟ್ಟಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದಾರೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಅಶ್ವಿನಿ ನ.23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.

ತುಳು ಟೈಮ್ಸ್

ಹೆಣ್ಣುಮಗು ಜನಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಅಶ್ವಿನಿ, ಕೇವಲ ಮೂರೇ ದಿನದ ಎಳೆ ಹಸುಳೆಯನ್ನು ಕತ್ತು ಹಿಸುಕಿ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ವಿಷಯ ತಿಳಿದ ರಾಮದುರ್ಗ ಡಿವೈಎಸ್​ಪಿ ಚಿದಂಬರ ಮಡಿವಾಳರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುರೇಬಾನ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.

ಡೆಲಿವರಿ ಆದ ಮಾರನೇ ದಿನ ಅಶ್ವಿನಿ ತವರುಮನೆ ಹಿರೇಮುಲಂಗಿಗೆ ಬಂದಿದ್ದಾಳೆ. ಬೆಳಿಗ್ಗೆ ಅಶ್ವಿನಿ ತಾಯಿ ಹೊರ ಹೋದಾಗ ಕ್ರೂರತೆ ಮೆರೆದಿದ್ದಾಳೆ. ಹಸುಗೂಸಿನ ಕತ್ತು ಹಿಸುಕಿ ಅಶ್ವಿನಿ ಹತ್ಯೆ ಮಾಡಿ, ಮಗು ಉಸಿರಾಡುತ್ತಿಲ್ಲ ಅಂತಾ ಡ್ರಾಮಾ ಮಾಡಿದ್ದಾಳೆ.

ತಕ್ಷಣ ರಾಮದುರ್ಗ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆತರಲಾಗಿದ್ದು, ಕತ್ತು ಹಿಸುಕಿ ಉಸಿರುಗಟ್ಟಿಸಿ ಮಗು ಸಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆಗ ಘಟನೆಯ ನಿಜಾಂಶ ಗೊತ್ತಾಗಿದೆ. ಅಶ್ವಿನಿ ಬಾಣಂತಿ ಹಿನ್ನೆಲೆ ಪೊಲೀಸ್ ಕಾವಲಿನಲ್ಲಿ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಆರೈಕೆ ಮಾಡುತ್ತಿದ್ದಾರೆ.

A woman in Belagavi district was recently arrested for allegedly strangling her three-day-old baby girl to death. Tulu Times

ಇದನ್ನೂ ಓದಿ: ನಿಮಗೆ ಮನೆಯಲ್ಲಿ ಕೂತು ಬೇಜಾರಾಗಿದ್ಯಾ..? ಈ ಟಿಪ್ಸ್ ಫಾಲೋ ಮಾಡಿ..!

===============================================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page