ಸುಬ್ರಹ್ಮಣ್ಯ: Tulu Times | ಕೆಲವು ವಂಚಕರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಹೆಸರು ಹೇಳಿಕೊಂಡು ದುಡ್ಡು ಮಾಡುತಿದ್ದಾರೆ. ದಯವಿಟ್ಟು ಭಕ್ತರ ಗಮನಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಠಿ ದಿವಸ ರಥೋತ್ಸವ ಬಿಟ್ಟು ಬೇರೆ ಯಾವುದೇ ಪೂಜೆ ನಡೆಯೋದಿಲ್ಲ ಭಕ್ತರು ಯಾರು ಮೋಸ ಹೋಗಬೇಡಿ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ನಾಳೆ ನಡೆಯಲಿರುವ ಚಂಪಾಷಷ್ಠಿ ಹಿನ್ನೆಲೆ ದೂರದೂರುಗಳಿಂದ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಊರು ಅಲ್ಲದೆ ಪರಊರುಗಳಿಂದಲೂ ಭಕ್ತರು ನಾಳೆ ಬೆಳಗ್ಗೆ ಸುಬ್ರಹ್ಮಣ್ಯ ದೇವಸ್ಥಾನದ ರಥ ಎಳೆಯುವ ವೇಳೆ ದೇವರ ಕೃಪೆಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಇದೀಗ ದೇವರ ಹೆಸರು ಹೇಳಿಕೊಂಡು ವಂಚಿಸುವ ಜಾಲದ ಬಗ್ಗೆ ಜನರು ಗೊಂದಲದಲ್ಲಿದಾರೆ. ಹೀಗಾಗಿ ದೇವಳದ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಕ್ತಾಧಿಗಳ ಗಮನಕ್ಕೆ ಸರಕಾರಿ ಪ್ರಾಯೋಜಿತ ವೆಚ್ಚ ಡಿ ಬಿಟ್ಟು ಬೇರೆ ಯಾವುದೇ ಶಾಖೆಗಳು ಇಲ್ಲ ಎಂದಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆನೆ ಶಾಂತ ಸ್ವಭಾವದ ಯಶಸ್ವಿನಿ ಚಂಪಾಷಷ್ಠಿಗೆ ರೆಡಿ..!
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯು ದೇವಾಲಯದ ಹೊರಗೆ ಅನಧಿಕೃತ ವ್ಯಕ್ತಿಗಳು ಮತ್ತು ಮಧ್ಯವರ್ತಿಗಳು ನಡೆಸುವ ಪೂಜೆಗಳ ಬಗ್ಗೆ ಭಕ್ತರಿಗೆ ಎಚ್ಚರಿಕೆ ನೀಡಿದೆ. ದೇವಾಲಯದ ಆವರಣದ ಹೊರಗೆ, ಖಾಸಗಿ ಸ್ಥಳಗಳಲ್ಲಿ ಅಥವಾ ನದಿ ದಡದಲ್ಲಿ ನಡೆಸುವ ಆಚರಣೆಗಳು ಅಧಿಕೃತವಲ್ಲ ಮತ್ತು ದೇವರಿಗೆ ಸಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಮತ್ತು ನಾಗಪ್ರತಿಷ್ಠಾ ಸೇರಿದಂತೆ ಎಲ್ಲ ಪೂಜೆಗಳು ಮತ್ತು ಸೇವೆಗಳು ದೇವಾಲಯದ ಆವರಣದ ಒಳಗಡೆ ಮಾತ್ರ ನಡೆಯಬೇಕು. ಕೆಲವು ಮಧ್ಯವರ್ತಿಗಳು ಮತ್ತು ಅನಧಿಕೃತ ಅರ್ಚಕರು ಭಕ್ತರನ್ನು ವಂಚಿಸಲು ಯೂಟ್ಯೂಬ್ ವೀಡಿಯೊಗಳು ಮತ್ತು ನಕಲಿ ವೆಬ್ಸೈಟ್ಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಾಲಯದ ಅಧಿಕಾರಿಗಳು ಇಂತಹ ಅನಧಿಕೃತ ಚಟುವಟಿಕೆಗಳು ಮತ್ತು ನಕಲಿ ವೆಬ್ಸೈಟ್ಗಳ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ದೇವಾಲಯದ ಕಚೇರಿ ಅಥವಾ ಅಧಿಕೃತ ವೆಬ್ಸೈಟ್ ಹೊರತುಪಡಿಸಿ ಬೇರೆಲ್ಲಿಯೂ ಪೂಜೆಗಳನ್ನು ಕಾಯ್ದಿರಿಸಬೇಡಿ ಅಥವಾ ಹಣ ಪಾವತಿಸಬೇಡಿ. ಅನಧಿಕೃತ ಸೇವೆಗಳು ಭಕ್ತರ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಭಕ್ತರು ವಂಚನೆಗೊಳಗಾಗುವುದನ್ನು ತಪ್ಪಿಸಲು, ದಯವಿಟ್ಟು ದೇವಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ದೇವಾಲಯದ ಕಚೇರಿಯನ್ನು ನೇರವಾಗಿ ಸಂಪರ್ಕಿಸಿ ಅಧಿಕೃತ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ ಎಂದು ದೇವಸ್ಥಾನದ ಆಡಳಿತವ ಮಂಡಳಿ ತಿಳಿಸಿದೆ.
There is a network of fake websites in the name of Lord Kukke Subrahmanya..!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











