ಬೆಳ್ತಂಗಡಿ tulu times : ಬೆಳ್ತಂಗಡಿ ತಾಲೂಕಿನ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ನಡೆಯುತ್ತಿದೆ.ಊರವರ ಸಹಕಾರದಿಂದ ಕರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು,ಇತ್ತೀಚೆಗೆ ಜೀರ್ಣೋದ್ದಾರ ಸಮಿತಿ ಬೆಂಗಳೂರಿಗೆ ತೆರಳಿ,ಹಳೇ ದೇವಾಸ್ಥಾನಗಳ ಜೀರ್ಣೋದ್ಧಾರ ಸಮಿತಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಸುಮಾರು 800 ವರ್ಷಗಳ ಇತಿಹಾಸವಿರುವ ಕರಾಯ ದೇವಸ್ಥಾನ,ಮಹಾಲಿಂಗೇಶ್ವರನ ಸಾನಿಧ್ಯಕ್ಕೆ ಹೆಸರುವಾಸಿಯಾಗಿದೆ.ಗ್ರಾಮಸ್ಥರು ಸೇರಿದಂತೆ,ಬೇರೆ ಬೇರೆ ಕಡೆಯಿಂದ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.ಭಕ್ತರ ಆಶೋತ್ತರಗಳನ್ನು ಈಡೇರಿಸಿ ಊರಿನ ಆರಾಧ್ಯವಾಗಿರುವ ಮಹಾಲಿಂಗೇಶ್ವರನಿಗೆ ಜೀರ್ಣೋದ್ಧಾರ ನೆರವೇರಿಸಲು ಗ್ರಾಮಸ್ಥರೆಲ್ಲಾ ಸೇರಿ ನಿರ್ಧರಿಸಿದ್ದಾರೆ.
ಇದೀಗ ಜೀರ್ಣೋದ್ಧಾರದ ಕೆಲಸಗಳು ಪ್ರಗತಿಯಲ್ಲಿದೆ.ಈ ಕಾರಣದಿಂದ ಹಳೇ ದೇವಾಸ್ಥಾನಗಳ ಜೀರ್ಣೋದ್ಧಾರ ಸಮಿತಿಯನ್ನು ಭೇಟಿಯಾಗಿ,ಪುರಾತನ ಹಿನ್ನೆಲೆಯಿರುವ ಕರಾಯ ದೇವಸ್ಥಾನಕ್ಕೆ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಯಿತು.ಹಳೇ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ಪೂರಕವಾಗಿ ಸ್ಪಂದಿಸಿದ್ದು ದೇವಸ್ಥಾನದ ಕಾಮಗಾರಿಗಳು ಇನ್ನಷ್ಟೂ ವೇಗ ಪಡೆಯಲಿದೆ.
ಹಳೇ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಭೇಟಿಯ ಸಂದರ್ಭದಲ್ಲಿ,ಕರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುದರ್ಶನ್ ಮುದ್ರಾಡಿ ಜೊತೆಗೆ ಅನಂತಕೃಷ್ಣ ಕುದ್ದಣ್ಣಾಯ,ಡಾ.ಕೆ ಅಣ್ಣುಗೌಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ತುಳು ಟೈಮ್ಸ್
Karaya Temple Committee visits the Old Temple Restoration Committee.ಇದನ್ನೂ ಓದಿ:ಮಾಸ್ಕ್ ಮ್ಯಾನ್ ಚಿನ್ನಯ್ಯನ ಬಿಡುಗಡೆ : ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು…!
.………………………………………………………………………………………………………….
ವೀಡಿಯೋ ಸುದ್ದಿಗಳಿಗಾಗಿ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/@tulutimess











