ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಧ್ಯಾಹ್ನ ಊಟದ ನಂತರ ಮಜ್ಜಿಗೆ ಕುಡಿಯೋದ್ರಿಂದ ಏನಾಗುತ್ತೆ…?

ಆರೋಗ್ಯ : Tulu Times | ಮಜ್ಜಿಗೆ ಅತ್ಯುತ್ತಮ ಆರೋಗ್ಯ ಪದಾರ್ಥಗಳಲ್ಲಿ ಒಂದು. ದೇಹಕ್ಕೆ ತಂಪು ನೀಡುವುದು, ಜೀರ್ಣಕ್ರಿಯೆಗೆ ಸಹಕಾರ ಮಾಡುವುದು ಹಾಗೂ ಅನೇಕ ಪೋಷಕಾಂಶಗಳನ್ನು ನೀಡುವುದು ಇದರ ಪ್ರಮುಖ ಪ್ರಯೋಜನಗಳಾಗಿವೆ.
ಇನ್ನು ಮಧ್ಯಾಹ್ನದ ಊಟ ದಿನದ ಪ್ರಮುಖ ಆಹಾರವಾಗಿದ್ದು, ಈ ವೇಳೆಯಲ್ಲಿ ಪೋಷಕಾಂಶಗಳು ಸಮತೋಲನವಾಗಿ ಲಭ್ಯವಾಗುವುದು ಅತ್ಯವಶ್ಯ. ಆರೋಗ್ಯಕರ, ಶಕ್ತಿ ಕೊಡುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ತೆಗೆದುಕೊಳ್ಳುವುದು ಉತ್ತಮ.

ಜೀರ್ಣ ಕ್ರಿಯೆ ಸುಧಾರಿಸುತ್ತದೆ ;
ಮಜ್ಜಿಗೆಯಲ್ಲಿ ಇರುವ ಪ್ರೋಬೈಯಾಟಿಕ್ಸ್ ಅಂದರೆ ಉತ್ತಮ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಯನ್ನು ಗಟ್ಟಿಗೊಳಿಸಿ ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಉಬ್ಬರವಿಲ್ಲದೇ ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಬಾಡಿದ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ.

ತೂಕ ನಿಯಂತ್ರಣ ಮಾಡುವಲ್ಲಿ ಮಜ್ಜಿಗೆ ಸಹಕಾರಿ ;
ಇನ್ನು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡಿ, ಊಟದ ನಂತರ ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆ ಹಗುರವಾಗಿರುತ್ತದೆ. ಜೊತೆಗೆ, ಕ್ಯಾಲ್ಸಿಯಂ ಮತ್ತು ವಿಟಮಿನ್ B12 ಮೂಲ ಎಲುಬುಗಳು ಮತ್ತು ಹಲ್ಲುಗಳಿಗೆ ಬಲ ನೀಡುತ್ತದೆ. ರಕ್ತಹೀನತೆ ತಪ್ಪಿಸಲು ಸಹಕಾರ. ತುಂಬಾ ಶೀತದ ಸಮಸ್ಯೆ ಇರುವವರು, ಗಂಟಲು ನೋವು / ಶೀತ / ಕಫ ಹೆಚ್ಚು ಇರುವವರು ಮಜ್ಜಿಗೆಯನ್ನು ಆದಷ್ಟು ನಿರ್ಲಕ್ಷಿಸುವುದು ಉತ್ತಮ. ಇನ್ನು ಊಟದ ನಂತರ ಅಥವಾ ಮಧ್ಯಾಹ್ನ ಸಮಯದಲ್ಲಿ ಮಜ್ಜಿಗೆಯನ್ನು ಕುಡಿಯುವುದು ಒಳಿತು ಎಂದು ಹೇಳಬಹುದು. What happens after lunch drinking butter milk – ತುಳು ಟೈಮ್ಸ್

ಇದನ್ನೂ ಓದಿ :ಅಯೋಧ್ಯೆ ಧರ್ಮ ಧ್ವಜದ ವಿಶೇಷತೆ ಏನು ಗೊತ್ತಾ…?

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=4XOMoeXx6QkKD_wi

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page