ಬ್ರೇಕಿಂಗ್ ನ್ಯೂಸ್
ಕಡಬಕರಾವಳಿಕರ್ನಾಟಕಧಾರ್ಮಿಕ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆನೆ ಶಾಂತ ಸ್ವಭಾವದ ಯಶಸ್ವಿನಿ ಚಂಪಾಷಷ್ಠಿಗೆ ರೆಡಿ..!

ಸುಬ್ರಹ್ಮಣ್ಯ: Tulu Times | ಕುಕ್ಕೆ ಸುಬ್ರಹ್ಮಣ್ಯ ದೇವಾಲಯಲ್ಲಿ ಚಂಪಾ ಷಷ್ಠಿಯ ಪ್ರಯುಕ್ತ ಜನ ಸಾಗರವೇ ಹರಿದು ಬರುತ್ತದೆ. ಇದೀಗ ದೇವಾಲಯದ ಸುತ್ತ ಮುತ್ತ ಷಷ್ಠಿ ಆಚರಣೆಯ ಪ್ರಯುಕ್ತ ಸಕಲ ಸಿದ್ಧತೆಗಳು ನಡೆಯುತ್ತಿದೆ.  ಅದ್ರಲ್ಲೂ ದೇವಾಲಯದ ಆನೆ ಯಶಸ್ವಿನಿ ಮುದ್ದಾಗಿ ರೆಡಿ ಆಗುತ್ತಿದ್ದಾಳೆ.  ಅಷ್ಟಕ್ಕೂ ಕುಕ್ಕೆಯ ಆನೆ ಯಶಸ್ವಿನಿಯ ಕಥೆ ನೀವು ತಿಳಿಯಲೇಬೇಕು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಠಿ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ದೇಗುಲದ ಎದುರು ಜನಸಾಗರವೇ ಕಂಡುಬರುತ್ತದೆ. ಸಾವಿರಾರು ಭಕ್ತರು ಹರಕೆ ಹೊತ್ತು ದೇಗುಲಕ್ಕೆ ಬಂದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ.  ಪರ ಊರುಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.  ಷಂಪಾಷಷ್ಠಿ ಪ್ರಯುಕ್ತ ಮಡೆಸ್ನಾನ, ತೇರು ಎಳೆಯುವುದು ಹೀಗೆ ನಾನಾ ಆಚರಣೆಗಳನ್ನು ನೆರವೇರಿಸಲಾಗುತ್ತದೆ.

ಕುಕ್ಕೆಗೆ ಉಡುಗೊರೆಯಾಗಿ ಬಂದ ಯಶಸ್ವಿನಿ..!

ಇನ್ನು ಕುಕ್ಕೆ ಸುಬ್ಮಹ್ಮಣ್ಯ ಚಂಪಾಷಷ್ಠಿಯ ಪ್ರಯುಕ್ತ ಎಲ್ಲರ ಗಮನ ಸೆಳೆಯುವ ಮುಗ್ಧೆಅಂದ್ರೆ ಅದು ಯಶಸ್ವಿನಿ ಆನೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿನಿ ದೇವಸ್ಥಾನದ ಸಂಪ್ರದಾಯ ಮತ್ತು ಆಚರಣೆಗಳ ಒಂದು ಅವಿಭಾಜ್ಯ ಅಂಗವಾಗಿದೆ. ಇದು ದೇವಸ್ಥಾನಕ್ಕೆ 17 ವರ್ಷಗಳ ಹಿಂದೆ ಉಡುಗೊರೆಯಾಗಿ ನೀಡಲಾದ ಹೆಣ್ಣು ಆನೆಯಾಗಿದೆ. ಯಶಸ್ವಿನಿ ದೇವಸ್ಥಾನದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆ. 2024 ರ ಮೇ ತಿಂಗಳ ವರದಿಯ ಪ್ರಕಾರ, ಯಶಸ್ವಿನಿ ತನ್ನ ಎಡ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿತ್ತು, ಪಶುವೈದ್ಯರು ಅದರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡಿದ್ದರು.  ಸುಮಾರು 18 ವರ್ಷಗಳಿಂದ ದೇವಸ್ಥಾನದಲ್ಲಿಯೇ ಇದ್ದರೂ, ಇದೀಗ ಅರಣ್ಯ ಇಲಾಖೆಯಿಂದ 2022 ರಲ್ಲಿ ದೇವಸ್ಥಾನದ ಹೆಸರಿಗೆ ಯಶಸ್ವಿನಿಯ ಮಾಲೀಕತ್ವದ ಪ್ರಮಾಣಪತ್ರವನ್ನು ನೀಡಲಾಗಿದೆ.

ಸಾಮಾನ್ಯವಾಗಿ ಯಶಸ್ವಿನಿ ಭಕ್ತರೊಂದಿಗೆ ಶಾಂತಿಯುತವಾಗಿ ವರ್ತಿಸುತ್ತದೆ. ಆದರೆ, ಈ ಹಿಂದೆ ಒಮ್ಮೆ  ಕುಡಿದ ಮತ್ತಿನಲ್ಲಿ ತನ್ನ ಬಳಿ ಬಂದ ವ್ಯಕ್ತಿಯೊಬ್ಬನನ್ನು ಸೊಂಡಿಲಿನಿಂದ ಎತ್ತಿ ಹಾಕಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆನೆಗೆ ಹೊಸ ವಿಶ್ರಾಂತಿ ಸ್ಥಳವನ್ನು ನಿರ್ಮಿಸಲಾಗಿದ್ದು, ಅಲ್ಲಿ ಅದಕ್ಕೆ ಮುಕ್ತವಾಗಿ ತಿರುಗಾಡಲು ನೈಸರ್ಗಿಕ ವಾತಾವರಣ ಮತ್ತು ಕೊಳದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಭಕ್ತರು ಬೆಳಿಗ್ಗೆ 8:30 ರ ಸುಮಾರಿಗೆ ಆನೆ ಸ್ನಾನ ಮಾಡುವುದನ್ನು ನೋಡಬಹುದು.

The elephant Yashaswini of Kukke Subrahmanya Temple is ready for the Champashashthi  – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 173

You cannot copy content of this page