ಕರ್ನಾಟಕ: Tulu Times | ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತರು ದಾಳಿ ನಡೆಸಿದ್ದು ಎಲ್ಲಿ..?
ಬೆಂಗಳೂರು- RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯ- ನಗರ ಪಾಲಿಕೆ CAO ಪುಟ್ಟಸ್ವಾಮಿ, ಬೀದರ್- ಕೃಷ್ಣಾ ಮೇಲ್ದಂಡೆ ಯೋಜನೆ ಮು.ಇಂಜಿನಿಯರ್ ಪ್ರೇಮ್ ಸಿಂಗ್, ಮೈಸೂರು- ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ ಪೆಕ್ಟರ್ ರಾಮಸ್ವಾಮಿ ಸಿ., ಧಾರವಾಡ- ಕರ್ನಾಟಕ ವಿ.ವಿಯ ಸ.ಪ್ರಾಧ್ಯಾಪಕ ಸುಭಾಶ್ ಚಂದ್ರ, ಧಾರವಾಡ- ಪ್ರಾ.ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್, ಶಿವಮೊಗ್ಗ- SIMS ಮೆಡಿಕಲ್ ಕಾಲೇಜ್ FDA ಲಕ್ಷ್ಮೀಪತಿ ಸಿ.ಎನ್, ದಾವಣಗೆರೆ- APMC ಸ. ನಿರ್ದೇಶಕ ಪ್ರಭು ಜೆ., ಮೈಸೂರು(ಮಡಿಕೇರಿ) PWD, ಸ.ಅ.ಇಂಜಿನಿಯರ್ ಗಿರೀಶ್ ಡಿ.ಎಂ, ಹಾವೇರಿ- ಶೇಕಪ್ಪ, ಇಇ, ಯೋಜನಾ ನಿರ್ದೇಶಕ ಕಚೇರಿ ಹಾವೇರಿ, ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಕೊಡಗಿನಲ್ಲೂ ಬೆಳ್ಳಂಬೆಳ್ಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, PWD ಇಂಜಿನಿಯರ್ ಗಿರೀಶ್ ಮನೆ & ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. PWD ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿರುವ ಎಂ.ಡಿ ಗಿರೀಶ್ ಅವರ ಮನೆಗೆ ಅಧಿಕಾರಿಗಳು ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಸಮೀಪ ಇರುವ ಕಚೇರಿ & ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ನಡೆದ ದಾಳಿ ನಡೆದಿದೆ. ದಾಖಲೆಗಳು & ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಂಡ್ಯದಲ್ಲೂ ಬೆಳ್ಳಂಬೆಳಗ್ಗೆ ಲೋಕಾ ದಾಳಿ ನಡೆಸಿದ್ದು, ಲೋಕಾಯುಕ್ತರು ಭ್ರಷ್ಟ ಅಧಿಕಾರಿ ಚಳಿ ಬಿಡಿಸುತ್ತಿದ್ದಾರೆ.
ಏಕಕಾಲಕ್ಕೆ ಪ್ರತ್ಯೇಕ ತಂಡವಾಗಿ ಐದು ಕಡೆ ದಾಳಿ ನಡೆಸಲಾಗಿದೆ. ಪುಟ್ಟಸ್ವಾಮಿ ಮನೆ, ನಗರಸಭೆ ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಮಂಡ್ಯ ನಗರಸಭೆಯ ಸಮುದಾಯ ಸಂಘಟನಾಧಿಕಾರಿಯಾದ ಪುಟ್ಟಸ್ವಾಮಿ ಸ್ವಗ್ರಾಮ ತೊರೆಚಾಕನಹಳ್ಳಿಯ ಮನೆಗೆ ತೆರಳಿದ್ದಾರೆ. ಇವರ ಮೈಸೂರಿನ ಅಧಿಕೃತ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆ ಎಲ್ಲಾ ಕಡೆಯಲ್ಲೂ ಲೋಕಾಯುಕ್ತರು ಸಂಪೂರ್ಣ ಶೋಧಿಸುತ್ತಿದ್ದಾರೆ.
Lokayukta officials raid 11 places in the state..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











