ಆರೋಗ್ಯ: Tulu Times | ನೈಸರ್ಗಿಕವಾಗಿ ಸಿಗುವ ಕೊಬ್ಬರಿ ಎಣ್ಣೆಯಿಂದ ಆರೋಗ್ಯಕ್ಕೆ ಏನೆಲ್ಲ ಲಾಭಗಳಿವೆ? ಅದರಲ್ಲೂ ಬೇಸಿಗೆಯಲ್ಲಿ ತೆಂಗಿನ ಎಣ್ಣೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ಚರ್ಮವನ್ನು ತೇವಯುಕ್ತಗೊಳಿಸುತ್ತದೆ!
ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್ ಆಗಿ ಬಳಸಬಹುದು. ಇದು ಫ್ಯಾಟಿ ಆಸಿಡ್ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ನಮ್ಮ ತ್ವಚೆಯ ತೇವಾಂಶ ಕಾಪಾಡಿ ಚರ್ಮವನ್ನು ಮೃದುತ್ವಗೊಳಿಸುತ್ತದೆ. ಇನ್ನು ನಮ್ಮ ತ್ವಚೆಯ ಮೇಲೆ ಆಗಿರುವಂತಹ ಕಪ್ಪು ಗಾಯಗಳನ್ನು ಕೊಬ್ಬರಿ ಎಣ್ಣೆ ಮರೆಮಾಚುತ್ತದೆ. ನಮ್ಮ ಚರ್ಮ ಪಳ ಪಳ ಹೊಳೆಯುವ ಹಾಗೆ ಕೊಬ್ಬರಿ ಎಣ್ಣೆ ಕಾರ್ಯನಿರ್ವಹಿಸುತ್ತದೆ. ಚರ್ಮದ ಅಲರ್ಜಿ ಇದ್ದರೆ ನಿವಾರಿಸುತ್ತದೆ. ಇನ್ನು ಪ್ರತಿಯೊಬ್ಬರು ಮುಖಕ್ಕೆ ಮೇಕಪ್ ರಿಮೂವ್ ಮಾಡಿದ ನಂತರ ಕೊಬ್ಬರಿ ಎಣ್ಣೆ ಬಳಸಿ ಮಸಾಜ್ ಮಾಡುತ್ತಾರೆ. ಇದರಿಂದ ಚರ್ಮದಲ್ಲಿ ಇರುವಂತಹ ಬ್ಯಾಕ್ಟೀರಿಯಗಳು ನಾಶವಾಗುತ್ತದೆ. ಇನ್ನು ಚರ್ಮದ ಉರಿಯೂತ ತಗ್ಗಿಸುವುದಕ್ಕೂ ಕೊಬ್ಬರಿ ಎಣ್ಣೆ ಸಹಾಯವಾಗುತ್ತದೆ. ಇದು ನೈಸರ್ಗಿಕ ಉರಿಯೂತ ವಿರೋಧಿ ಗುಣವನ್ನು ಹೊಂದಿರುವ ಈ ತೈಲ ಚರ್ಮ ಕೆಂಪಾಗುವುದನ್ನು ಊದಿಕೊಳ್ಳುವುದನ್ನು ತಪ್ಪಿಸುತ್ತದೆ.
ಮೊಡವೆಗಳಿಗೆ ಕೊಬ್ಬರಿ ರಾಮಬಾಣ!
ನಮ್ಮ ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕೊಬ್ಬರಿ ಎಣ್ಣೆಯ ಪಾತ್ರ ಬಹಳಷ್ಟಿದೆ. ಮುಖಕ್ಕೆ ಕೊಬ್ಬರಿ ಹಚ್ಚಿ ಮಸಾಜ್ ಮಾಡಿದರೆ ಮುಖದಲ್ಲಿ ತುರಿಕೆ ಕಂಡು ಬರುವುದಿಲ್ಲ. ಮೊಡವೆಗಳವಿರುದ್ಧ ಹೋರಾಟ ನಡೆಸುತ್ತದೆ. ಬೇಸಿಗೆಯಲ್ಲಿ ಮೊಡವೆಯ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಬ್ಯಾಕ್ಟಿರಿಯ ವಿರೋಧಿ ಸಂಯುಕ್ತಗಳನ್ನು ಹೊಂದಿರುವಂತಹ ತೆಂಗಿನ ಎಣ್ಣೆ ಮುಖದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇನ್ನು ಜಿಡ್ಡು ತ್ವಚೆಯ ಮಂದಿ ತೆಂಗಿನ ಎಣ್ಣೆ ಬಳಸುವಾಗ ಹುಷಾರಾಗಿರಿ. ಯಾಕೆಂದರೆ ಮುಖದಲ್ಲಿ ಇರುವಂತಹ ಜಿಡ್ಡಿನ ಅಂಶದಿಂದ ಇನ್ನಷ್ಟು ಮುಖದಲ್ಲಿ ಮೊಡವೆಗಳು ಶುರುವಾಗಬಹುದು.
ಬ್ಲಡ್ ಸರ್ಕ್ಯುಲೇಶನ್ ಗೆ ಸಹಕಾರಿ!
ತೆಂಗಿನ ಎಣ್ಣೆ ರಕ್ತ ಪರಿಚಲನೆಯನ್ನು ಉತ್ತಮವಾಗಿಸುವುದಕ್ಕೆ ಸಹಾಯವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೊಬ್ಬರಿ ಎಣ್ಣೆ ಹಚ್ಚಿದರೆ ಹೆಚ್ಚು ಉಪಯೋಗಕಾರಿಯಾಗಿದೆ. ನಮ್ಮ ದೇಹದಲ್ಲಿರುವಂತಹ ರಕ್ತದ ಚಲನೆಯನ್ನು ತೆಂಗಿನ ಎಣ್ಣೆ ಹೆಚ್ಚುಸಲು ಸಹಕಾರಿ ಆಗುತ್ತದೆ. ಇದರಿಂದ ದೇಹ ಕೂಡ ಕೂಲ್ ಅಂತ ಎನಿಸುತ್ತದೆ.
ಆಹಾರದಲ್ಲಿ ಕೊಬ್ಬರಿ ಎಣ್ಣೆಯ ಬಳಕೆ ಹೆಚ್ಚಿಸಿ!
ನಾವು ಪ್ರತಿದಿನ ಬಳಸುವಂತಹ ಆಹಾರದಲ್ಲಿ ಕೊಬ್ಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು ಬೇರೆ ಬೇರೆ ರೀತಿಯಾದಂತಹ ಮಾರುಕಟ್ಟೆಯಲ್ಲಿ ಸಿಗುವಂತಹ ಸನ್ ಫ್ಲವರ್ ಮುಂತಾದ ಎಣ್ಣೆಗಳನ್ನು ಬಳಸುವುದರ ಬದಲು ತೆಂಗಿನ ಎಣ್ಣೆ ಬಳಸುವುದು ಉತ್ತಮ.
Here are the amazing benefits of coconut oil!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











