ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನವೆಂಬರ್ 30 ಕ್ಕೆ ಎಸ್ ಬಿ ಐ ನ ಎಂಕ್ಯಾಶ್ ಸ್ಥಗಿತ…!

ಎಸ್ ಬಿ ಐ : Tulu Times | ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಆದರೆ ಇದೀಗ ತನ್ನ ಗ್ರಾಹಕರಿಗೆ ಮಹತ್ವದ ವಿಚಾರವನ್ನು ಘೋಷಿಸಿದ್ದು, ಡಿಸೆಂಬರ್ ನಿಂದ ಎಂಕ್ಯಾಶ್ ಸೇವೆಯನ್ನು ಸ್ಥಗಿತಗೊಳಿಸಲಿದೆ.

ಡಿಸೆಂಬರ್ 1 ರಿಂದ ಈ ಸೇವೆ ಸ್ಥಗಿತ ;

ಇಲ್ಲಿವರೆಗೂ ಎಸ್‌ಬಿಐ ಗ್ರಾಹಕರಿಗೆ ಎಂಕ್ಯಾಶ್ ಅನ್ನೋದು ಒಂದು ಉತ್ತಮ‌ ಆಯ್ಕೆಯಾಗಿತ್ತು. ಇದಕ್ಕೆ ಬೇರೆ ಖಾತೆ ಹೊಂದಿದವರ ದಾಖಲೆ, ಬ್ಯಾಂಕ್ ಡೀಟೇಲ್ಸ್ ಬೇಕಾಗಿರಲಿಲ್ಲ, ಕೇವಲ ಅವರ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಇದ್ರೆ ಸಾಕು, ಬೇಕಾದಾಗ ಹಣ ಕಳಿಸಬಹುದಿತ್ತು. ಸಣ್ಣ ಪುಟ್ಟ ಪೇಮೆಂಟ್ ಮಾಡೋಕೆ ಇದು ಹೇಳಿ ಮಾಡಿಸಿದ ಹಾಗಿತ್ತು. ಆದ್ರೆ, ಬ್ಯಾಂಕಿನ ಹೊಸ ರೂಲ್ಸ್ ಪ್ರಕಾರ ಡಿಸೆಂಬರ್ 1 ರಿಂದ ಈ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವರದಿಯಾಗಿದೆ.

ಹೌದು….! ನೀವಿನ್ನೂ ಎಂಕ್ಯಾಶ್ ನಂಬಿಕೊಂಡಿದ್ದರೆ, ಇಂದೇ ಅದ್ರಿಂದ ಹೊರಗೆ ಬನ್ನಿ. ನವೆಂಬರ್ 30 ರ ನಂತರ ನೀವು ಎಷ್ಟೇ ಟ್ರೈ ಮಾಡಿದ್ರೂ ಎಂಕ್ಯಾಶ್ ಮೂಲಕ ನಯಾಪೈಸೆ ಕಳಿಸೋಕೆ ಆಗಲ್ಲ. ನೀವು ತಕ್ಷಣವೇ ಯುಪಿಐ (UPI) ಕಡೆ ಶಿಫ್ಟ್ ಆಗ್ಲೇಬೇಕು, ಇಲ್ಲಾಂದ್ರೆ ಅರ್ಜೆಂಟ್ ಟೈಮಲ್ಲಿ ದುಡ್ಡು ಕಳಿಸೋಕೆ ಆಗದೆ ಪೇಚಿಗೆ ಸಿಕ್ಕಿಕೊಡ್ತೀರಾ ಅಂತ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ವಾರ್ನಿಂಗ್ ಕೊಟ್ಟಿದೆ. ಈ ಎಂಕ್ಯಾಶ್ ಅನ್ನೋದು ಹಳೇ ಟೆಕ್ನಾಲಜಿ ಮೇಲೆ ನಡೀತಿತ್ತು. ಇವತ್ತಿನ ಯುಪಿಐ ಜಮಾನದಲ್ಲಿ ಇದು ಅಷ್ಟೊಂದು ಫಾಸ್ಟ್ ಇಲ್ಲ ಮತ್ತು ಸುರಕ್ಷತೆ (Security) ದೃಷ್ಟಿಯಿಂದಲೂ ಇದು ಅಷ್ಟಕ್ಕಷ್ಟೇ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅನ್ನ ಇನ್ನಷ್ಟು ಸ್ಟ್ರಾಂಗ್ ಮತ್ತು ಸೇಫ್ ಮಾಡೋಕೆ ಎಸ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

SBI’s MCash will be closed on November 30 – ತುಳು ಟೈಮ್ಸ್

ಇದನ್ನೂ ಓದಿ :ನೌಕರರೇ ಗಮನಿಸಿ : ಕೈ ಗೆ ಸಿಗುವ ಸಂಬಳದಲ್ಲಿ ಕಡಿತ…!

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page