ಬೆಂಗಳೂರು : Tulu Times | ರಾಜ್ಯಸರ್ಕಾರವು ಹೊರಡಿಸಿರುವ ಆದೇಶದಂತೆ, ಬಿಪಿಎಲ್ ಕಾರ್ಡ್ ಪಡೆಯಲು ಹಲವು ನಿಬಂಧನೆಗಳು ಹೇರಲಾಗಿತ್ತು. ಸರ್ಕಾರಿ ನೌಕರಿಯಲ್ಲಿ ಇಲ್ಲದವರು, 3 ಹೆಕ್ಟೇರ್ ಭೂಮಿ ಹೊಂದಿರದವರು, ನಾಲ್ಕು ಚಕ್ರದ ವಾಹನ ಇಲ್ಲದವರು ಹಾಗೂ ಕುಟುಂಬದ ಆದಾಯ 1.20 ಲಕ್ಷ ರೂಪಾಯಿ ಮೀರದಿರುವವರು ಮಾತ್ರ ಈ ಸೌಲಭ್ಯಕ್ಕೆ ಆರ್ಹರು. ಆದರೆ, ಈ ಎಲ್ಲಾ ಕಾನೂನನ್ನು ದುರಪಯೋಗ ಮಾಡಿಕೊಂಡ ಅದೆಷ್ಟೋ ಜನರು ಈ ಎಲ್ಲಾ ದಾಖಲೆಗಳನ್ನು ಅಕ್ರಮವಾಗಿಸಿಕೊಂಡು ಬಿಪಿಎಲ್ ಕಾರ್ಡ್ ಮಾಡಿಕೊಂಡು ರೇಷನ್ ಪಡೆಯುತ್ತಿದ್ದರು.
ಆದರೆ ಇದೀಗ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರು ಸ್ವಲ್ಪ ಯೋಚಿಸಬೇಕಾಗಿದೆ. ಆಹಾರ ಇಲಾಖೆಯಿಂದ ಸಿಗುವ ಸೌಲತ್ತುಗಳಿಗೆ ಹಲವಾರು ಜನ ಬಿಪಿಎಲ್ ಕಾರ್ಡ್ ಮಾಡಿಕೊಂಡಿದ್ರು. ಆದರೆ ಈಗ, ಎಪಿಎಲ್ ನಲ್ಲಿದ್ದ ಹೆಸರನ್ನು ಬಿಪಿಎಲ್ ಗೆ ಮಾಡಿಕೊಂಡವರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಶನ್ ಮಾಹಿತಿಯ ಪ್ರಕಾರ ರಾಜಧಾನಿ ಬೆಂಗಳೂರಿನಲ್ಲೇ ಲಕ್ಷಾಂತರ ಕಾರ್ಡ್ ಗಳು ರದ್ದಾಗುವ ಸಾಧ್ಯತೆಯಿರುವುದು ವರದಿಯಾಗಿರುತ್ತದೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಆಹಾರ ಇಲಾಖೆ ಮುಂದೆ ಜನರು ಸಾಲುಗಟ್ಟಿ ನಿಂತಿದ್ದು, ಈ ಹಿಂದೆ ರೇಷನ್ ಸಿಕ್ಕಿದ್ದು ಈ ತಿಂಗಳ ರೇಷನ್ ಸಿಕ್ಕುತ್ತಿಲ್ಲ ಎಂಬುದಾಗಿ ದೂರು ನೀಡಿರುತ್ತಾರೆ. ಆದರೆ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ ಹಲವಾರು ಬಿಪಿಎಲ್ ಕಾರ್ಡ್ ಗಳು ರದ್ದಾಗಿವೆ. ಇನ್ನು ಆಹಾರ ಇಲಾಖೆಗೆ ಕಳೆದ ತಿಂಗಳು ದೊರೆತಿರುವ ಟ್ಯಾಕ್ಸ್ ರಿಪೋರ್ಟ್ ಆಧಾರದಲ್ಲಿ ತೆರಿಗೆ ಕಟ್ಟುತ್ತಿದ್ದರೂ ಪಡೆದಿರುವ ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆಯಾಗುವುದಾಗಿ ವರದಿಯಾಗಿರುತ್ತದೆ.
ಆದರೆ, ಕೆಲವೊಮ್ಮೆ ಪ್ರಾಮಾಣಿಕವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದು, ರೇಷನ್ ಪಡೆಯುತ್ತಿರುವವರಿಗೆ ಇದು ಮುಳುವಾಗಬಹುದು. ಬೆಂಗಳೂರಿನ ರಾಜಾಜಿನಗರದಲ್ಲಿ ಟ್ಯಾಕ್ಸ್ ಕಟ್ಟದ ಮಹಿಳೆಯೊಬ್ಬರಿಗೆ ರೇಷನ್ ನೀಡದೆ ಸ್ಥಗಿತಗೊಳಿಸಿರುವುದು ಗೊಂದಲ ಉಂಟು ಮಾಡಿದೆ. ಈ ಹೊಸ ಕಾನೂನಿನಿಂದ ನಿಜವಾಗಿ ಅರ್ಹರಾದವರಿಗೆ ಮೋಸವಾಗುತ್ತಿರುವುದೂ ಕೂಡಾ ಸಮಸ್ಯೆಯಾಗಲೂಬಹುದು. Millions of BPL cards are likely to be cancelled in Bengaluru – ತುಳು ಟೈಮ್ಸ್
ಇದನ್ನೂ ಓದಿ :ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಜೊತೆ ಏರ್‌ಟೆಲ್ ಸಹಭಾಗಿತ್ವ!
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp











