ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಉಡುಪಿಗೆ ಮೋದಿ ಆಗಮನಕ್ಕೆ ಸಕಲ ಸಿದ್ಧತೆ..ಸಂಚಾರ ನಿಷೇಧ..!

ಉಡುಪಿ: Tulu Times |‌ ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಉಡುಪಿಗೆ ಆಗಮಿಸುವ ಹಿನ್ನಲೆ  ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದ ಕುರಿತು ಜಿಲ್ಲಾಡಳಿದ ಅಧಿಸೂಚನೆ ಹೊರಡಿಸಿದೆ. ನ.28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಈ ಬದಲಾವಣೆ ಇರಲಿದೆ.

ಇದನ್ನೂ ಓದಿ: ಸಫಾರಿ ಸ್ಥಗಿತದಿಂದ ಸ್ಥಳೀಯ ಜನ ಜೀವನ ಸಂಕಷ್ಟದಲ್ಲಿ…!

ಮೋದಿ ಆಗಮನದ ಹಿನ್ನೆಲೆ ರೂಟ್‌ ಹೇಗಿರುತ್ತೆ..?

ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕರಾವಳಿ ಜಂಕ್ಷನ್‌ – ಬನ್ನಂಜೆ- ಶಿರಿಬೀಡು-ಕಲ್ಸಂಕ- ಶ್ರೀ ಕೃಷ್ಣ ಮಠದವರೆಗೆ ಯಾವುದೇ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್‌ ನಿಷೇಧಿಸಿದೆ. ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲ ವಾಹನಗಳು ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.

ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಫ್ಲೈ ಓವರ್‌ – ಅಂಬಲಪಾಡಿ- ಬ್ರಹ್ಮಗಿರಿ-ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು. ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಕಿನ್ನಿಮೂಲ್ಕಿ ಸ್ವಾಗತಗೋಪುರ-ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು. ಅಂಬಾಗಿಲಿನಿಂದ ಗುಂಡಿಬೈಲು ಮಾರ್ಗವಾಗಿ ಉಡುಪಿಗೆ ಬರುವ ಎಲ್ಲ ವಾಹನಗಳು ಗುಂಡಿಬೈಲ್‌ ರಸಿಕಾ ಬಾರ್‌ ಮೂಲಕ ದೊಡ್ಡಣಗುಡ್ಡೆ-ಎಂಜಿಎಂ-ಎಸ್‌ಕೆಎಂ-ಬೀಡಿನಗುಡ್ಡೆ ಮೂಲಕ ಉಡುಪಿಗೆ ಬರಬೇಕು. ಮಲ್ಪೆಯಿಂದ ಬರುವ ಎಲ್ಲ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಬೇಕು. ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನೌಕರರೇ ಗಮನಿಸಿ : ಕೈ ಗೆ ಸಿಗುವ ಸಂಬಳದಲ್ಲಿ ಕಡಿತ…!

ನವೆಂಬರ್ 28ರಂದು ಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ  ಮೋದಿ  ಭಾಗವಹಿಸುತ್ತಿದ್ದಾರೆ. ಮೂರು ದಶಕಗಳ ಬಳಿಕ ಮೋದಿ ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸುವಂತೆ ಡಿಸಿಗೆ ಮನವಿ ಮಾಡಲಾಗಿದೆ. ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಓಡಾಟದ ನಿರ್ಬಂಧವಿರುವುದರಿಂದ 28ರಂದು ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಸರಕಾರಿ ಕಛೇರಿಗಳು ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸುವಂತೆ ಕೋರಲಾಗಿದೆ.

All preparations for Modi’s arrival in Udupi.. Traffic ban..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 168

You cannot copy content of this page