ಚಾಮರಾಜನಗರ : Tulu Times | ಈಗಿನ ಕಾಲದಲ್ಲಿ ಹೊಟ್ಟೆ ಪಾಡಿಗಾಗಿ ಜನರು ಕೆಲಸಕ್ಕಾಗಿ ಅರಸುತ್ತಿರುತ್ತಾರೆ. ಕೇವಲ ಕೃಷಿಯನ್ನೇ ನಂಬಿಕೊಂಡಿದ್ರೆ ಜೀವನ ಸಾಗಿಸೋದಕ್ಕೆ ಕಷ್ಟ ಅಂತೇಳಿ, ಪರ್ಯಾಯ ಕೆಲಸಕ್ಕಾಗಿ ಹುಡುಕಾಟ ಶುರು ಮಾಡುತ್ತಾರೆ. ಬದಲಾದ ಹವಾಮಾನ, ಬೆಳೆ ನಾಶ ಇತ್ಯಾದಿ ಹಲವಾರು ಕೃಷಿ ವಿರೋಧಿ ವಾತಾವರಣದಿಂದ ಕೃಷಿಕರು ಕಂಗೆಟ್ಟಿರುವುದಂತೂ ನಿಜ. ಹೀಗಿರುವಾಗ, ಚಾಮರಾಜನಗರದಲ್ಲಿ ಕೃಷಿಯ ಜೊತೆಗೆ ಪರ್ಯಾಯ ಉದ್ಯೋಗವಾಗಿ ಪ್ರವಾಸೋದ್ಯಮದ ಮೇಲೆ ನಂಬಿಕೆ ಇಟ್ಟಿರುವ ಈ ಭಾಗದಲ್ಲಿ ಸುಮಾರು ಶೇ.50ರಷ್ಟು ಜನರು ಸಫಾರಿ ಮತ್ತು ಪ್ರವಾಸಿಗರ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ.
ಸಫಾರಿ ನಿಲುವಿನಿಂದಾಗಿ ಮಾರ್ಗದರ್ಶನ ಮಾಡುವ ಗೈಡ್‍ಗಳು, ಜೀಪ್ ಚಾಲಕರು, ಅಂಗಡಿ, ಹೋಟೆಲ್ ಹಾಗೂ ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಹಲವು ವರ್ಗದ ಜನರ ಆದಾಯ ಸಂಪೂರ್ಣ ಕುಂಠಿತವಾಗಿದೆ. ಸಫಾರಿಯಿಲ್ಲದೆ ಜನರಿಲ್ಲ. ಪ್ರವಾಸಿಗಳು ಇಲ್ಲದೆ ಬಿಕೋ ಎನ್ನುತ್ತಿರುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಜನರು ಜೀವನ ನಡೆಸೋ ಬಗ್ಗೆ ಚಿಂತಿತರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಹುಲಿ ಆತಂಕ ಹೆಚ್ಚಾಗಿದ್ದು, ಜನರ ಮೇಲೆ ಹುಲಿ ದಾಳಿ ನಡೆಯುತ್ತಾ ಇದೆ. ಅದಕ್ಕೆ ಹುಲಿ ಭಯದಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿ ಸೇವೆಯನ್ನು ನಿಲ್ಲಿಸಿದ್ದರು. ಆದ್ರೆ ಇದರಿಂದ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಪ್ರವಾಸಿಗರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರು ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ, ಸಫಾರಿಯನ್ನು ತಕ್ಷಣ ಪುನರಾರಂಭಿಸುವಂತೆ ಆಗ್ರಹಿಸಿದರು ಹಾಗೂ ಸ್ಥಳೀಯ ಶಾಸಕರಿಗೂ ಸಹ ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.The local people’s lives are in trouble due to the suspension of Safari – ತುಳು ಟೈಮ್ಸ್
ಇದನ್ನೂ ಓದಿ :ಭಾರತಕ್ಕೆ ಬೇಕಾದ್ದು ಕೊಡ್ತೇವೆ: ರಷ್ಯಾ ಘೋಷಣೆ!
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp











