ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಮಂಗಳೂರಿನಲ್ಲಿ ಯುವಕನ ಮೇಲೆ ತಲವಾರು ದಾಳಿ ಪ್ರಕರಣ; ಒಬ್ಬ ಅರೆಸ್ಟ್‌ !

ಮಂಗಳೂರು: Tulu Times | ಮಂಗಳೂರು ಹೊರವಲಯದಲ್ಲಿ ಯುವಕನ‌ ಮೇಲೆ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಸಿಎಂ ಆಗಿ ಮುಂದುವರಿಯಿರಿ ಅಂದ್ರೆ ಮುಂದುವರಿಯುತ್ತೇನೆ: ಸಿಎಂ !

ಅಖಿಲೇಶ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಹಿಡಿದ ಸ್ಥಳೀಯರು ಹಿಡಿದಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿನಾನ್ ಎಂಬಾತನನ್ನು  ಒಪ್ಪಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿ ಕೋರರ ಮಾಹಿತಿ ಕಲೆಹಾಕಿರುವ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಠಾಣಾ ವ್ಯಾಪ್ತಿಯ ಎಡಪದವು ಎಂಬಲ್ಲಿ ಘಟನೆ  ನಡೆದಿದೆ.

ಇದನ್ನೂ ಓದಿ: ಕಾಸರಗೋಡು: ಮ್ಯೂಸಿಕ್‌ ಕನ್ಸರ್ಟ್‌ನಲ್ಲಿ ಭಾರೀ ಕಾಲ್ತುಳಿತ – 20ಕ್ಕೂ ಅಧಿಕ ಮಂದಿ ಅಸ್ವಸ್ಥ

ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಮೇಲೆ ದುಷ್ಕರ್ಮಿಗಳಿಂದ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ.  ಈ ಘಟನೆಯಲ್ಲಿ ಅಖಿಲೇಶ್ ಕೈಗೆ ಸಂಪೂರ್ಣ ಗಾಯವಾಗಿದೆ.  ಬೈಕ್ ನಲ್ಲಿ ತಲವಾರು ಹಿಡಿದು ಸಾಗುತ್ತಿದ್ದವರ ಮೊಬೈಲ್ ನಲ್ಲಿಅಕಿಲೇಶ್ ವಿಡಿಯೋ ಮಾಡಿದ್ದರು, ವಿಡಿಯೋ ಮಾಡಿದ್ದನ್ನು ಆಕ್ಷೇಪಿಸಿ ಅಖಿಲೇಶ್ ಮೇಲೆ ತಲವಾರು ಬೀಸಿದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಉಬರ್ ಚಾಲಕರಿಗೆ ಅವಕಾಶ ನೀಡದೆ ಬೇರೆ ರಾಜ್ಯದವರಿಗೆ ಡ್ಯೂಟಿ…!

ಬೈಕ್ ನಲ್ಲಿ ನಾಲ್ವರು ದುಷ್ಕರ್ಮಿಗಳು ಬಂದಿದ್ದರು.   ಘಟನೆ ಬಳಿಗೆ ಪರಾರಿಯಾಗುವ ಬರದಲ್ಲಿ ಒರ್ವನನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಬಾಕಿಯಾದ ಸಿನಾನ್ ಸಿಕ್ಕ ಸಿಕ್ಕ ವಾಹನ ನಿಲ್ಲಿಸಿ ಡ್ರಾಪ್ ಕೇಳಿ ಪರಾರಿಯಾಗಲು ಯತ್ನಿಸಿದ್ದ. ಸ್ಥಳದಲ್ಲೇ ಸಿನಾನ್ ನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಲವಾರು ಪತ್ತೆಯಾಗಿದೆ.  ಗಾಯಗೊಂಡ ಅಖಿಲೇಶ್ ಮೂಡಬಿದ್ರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಬಜಪೆ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ, ತಲವಾರು ಬೀಸಿ ದುಷ್ಕರ್ಮಿಗಳು ಪರಾರಿಯಾಗುತಿದ್ದ ದೃಶ್ಯ ಸಿಸಿಟಿವಿ ಯಲ್ಲಿ‌ಸೆರೆಯಾಗಿದೆ. ಪರಾರಿಯಾಗಲು ಯತ್ನಿಸುತ್ತಿದ್ದ ಸಿನಾನ್ ನನ್ನು ಸ್ಥಳೀಯರು ಹಿಡಿದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
One arrested in a case of multiple attacks on a young man- ತುಳುಟೈಮ್ಸ್

ಇದನ್ನೂ ಓದಿ: ನಂದಮೂರಿ ಬಾಲಕೃಷ್ಣ ಅಖಂಡ-2 ಟ್ರೇಲರ್ ಲಾಂಚ್…ಶಿವರಾಜ್‌ ಕುಮಾರ್ ಶುಭ ಹಾರೈಕೆ!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page