ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೌಕರರೇ ಗಮನಿಸಿ : ಕೈ ಗೆ ಸಿಗುವ ಸಂಬಳದಲ್ಲಿ ಕಡಿತ…!

ಸರ್ಕಾರ : Tulu Times |ಈ ಹಿಂದೆ ಕಂಪೆನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಫಿಎಫ್ ಕಾನೂನಿನಲ್ಲಿ ಸಿಗುವ ಸಂಬಳದಲ್ಲಿ ಹಣ ಕಟ್ ಆಗ್ತಾ ಇತ್ತು. ಆದರೆ, ಈಗ ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಮಿಕರ ಹೊಸ ಕಾನೂನಿನಂತೆ ಕಂಪನಿಗಳು ತಮ್ಮ ನೌಕರರ ಮೂಲ ವೇತನವನ್ನು ಒಟ್ಟು ವೇತನದ ಕನಿಷ್ಠ ಶೇಕಡಾ 50 ರಷ್ಟಕ್ಕೆ ಹೆಚ್ಚಿಸಬೇಕಾಗಿದೆ. ಇದರಿಂದಾಗಿ ನೌಕರರ ಕೈಗೆ ಬರುವ ಸಂಬಳ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಪಿಎಫ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿರುತ್ತದೆ.

ವೇತನ ಸಂಹಿತೆ ಜಾರಿಗೆ ;

ನವೆಂಬರ್ 21 ರಿಂದಲೇ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ಬಂದಿವೆ. 29 ಹಳೆಯ ಕಾರ್ಮಿಕ ಕಾನೂನುಗಳನ್ನು 4 ಪ್ರಮುಖ ಸಂಹಿತೆಯಾಗಿ ರೂಪಿಸಲಾಗಿದೆ. ಇವು ನಿಯಮಗಳ ಪಾಲನೆಯನ್ನು ಸರಳಗೊಳಿಸುವ ಜತೆಗೆ ಕಾರ್ಮಿಕರ ರಕ್ಷಣೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ವೇತನ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ. ಮುಂದಿನ 45 ದಿನಗಳಲ್ಲಿ ಇದರ ವಿವರವಾದ ನಿಯಮಗಳನ್ನು ಸರ್ಕಾರ ಪ್ರಕಟಿಸುವ ಅಂದಾಜಿದೆ.

ನೌಕರರ ಕೈಗೆ ಬರುವ ಸಂಬಳ ಕಡಿಮೆ ;

ಪ್ರಸ್ತುತ, ಪಿಎಫ್‌ ಕೊಡುಗೆ ಮೂಲ ವೇತನದ ಶೇಕಡಾ 12 ರಷ್ಟಿದೆ. ಗ್ರಾಚ್ಯುಟಿ ಪಾವತಿಯು ನೌಕರರ ಅಂತಿಮ ಮೂಲ ವೇತನ ಮತ್ತು ಅವರು ಕಂಪನಿಯಲ್ಲಿ ಕೆಲಸ ಮಾಡಿದ ಅವಧಿಯನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ತಜ್ಞರ ಪ್ರಕಾರ, ಹೊಸ ನಿಯಮಗಳ ಅಡಿಯಲ್ಲಿ ನೌಕರರ ಕೈಗೆ ಬರುವ ಸಂಬಳ ಕಡಿಮೆಯಾಗಬಹುದು. ಉದಾಹರಣೆಗೆ : ತಿಂಗಳಿಗೆ 20,000 ರೂ. ವರೆಗೆ ವೇತನ ಪಡೆಯುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಬೇಕು. ಓವರ್‌ಟೈಮ್ (ಓಟಿ) ಮಾಡಿದರೆ ಆ ದಿನ ದುಪ್ಪಟ್ಟು ಸಂಬಳ ಪಾವತಿಸಬೇಕು. ಅಂತಿಮವಾಗಿ, ಕೆಲಸದ ಸಮಯವು ದಿನಕ್ಕೆ 8 ಗಂಟೆಗಳು ಮತ್ತು ವಾರಕ್ಕೆ 48 ಗಂಟೆಗಳಿಗೆ ಸೀಮಿತವಾಗಿರುತ್ತದೆ. ಪರಸ್ಪರ ಒಪ್ಪಂದದ ಮೂಲಕ ಬದಲಾವಣೆಗೆ ಅನುಮತಿಸಲಾಗಿದೆ. Attention workers – ತುಳು ಟೈಮ್ಸ್

ಇದನ್ನೂ ಓದಿ :ಹೈಕಮಾಂಡ್ ಸಿಎಂ ಆಗಿ ಮುಂದುವರಿಯಿರಿ ಅಂದ್ರೆ ಮುಂದುವರಿಯುತ್ತೇನೆ: ಸಿಎಂ !

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/vP8AxRv2LkY?si=ObNSLQyYyGZeCQlp

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page